ವಿಜಯವಾಡ: ಆಂಧ್ರಪ್ರದೇಶದಲ್ಲಿ ಜಗನಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಪಕ್ಷ ತೊರೆಯುವ ಶಾಸಕರ ಪರ್ವ ಮುಂದುವರೆದಿದ್ದು, ಶುಕ್ರವಾರ ವೈಎಸ್ಆರ್ ನ 8ನೇ ಶಾಸಕ ಆಡಳಿತರೂಢ ಟಿಡಿಪಿ ಸೇರ್ಪಡೆಯಾಗಿದ್ದಾರೆ.
ಶ್ರೀಕಾಕುಲಂ ಜಿಲ್ಲೆಯ ಪಟಪಣ್ಣಂ ಕ್ಷೇತ್ರದ ವೈಎಸ್ಆರ್ ಕಾಂಗ್ರೆಸ್ ಶಾಸಕ ಕೆ.ವಿ.ರಮಣಮೂರ್ತಿ ಅವರು ಇಂದು ಸಚಿವ ಅಚ್ಚನಾಯ್ಡು ಹಾಗೂ ತಮ್ಮ ಬೆಂಬಲಿಗರೊಂದಿಗೆ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರ ನಿವಾಸಕ್ಕೆ ತೆರಳಿ ಅಧಿಕೃತವಾಗಿ ಟಿಡಿಪಿ ಸೇರಿದರು.
ಈ ಹಿಂದೆ ಟಿಡಿಪಿಯಲ್ಲೇ ಇದ್ದ ರಮಣಮೂರ್ತಿ 2014ರ ಲೋಕಸಭೆ ಚುನಾವಣೆ ವೇಳೆ ಪಕ್ಷ ತೊರೆದು ವೈಎಸ್ಆರ್ ಕಾಂಗ್ರೆಸ್ ಸೇರಿದ್ದರು. ಇದೀಗ ಮತ್ತೆ ಪಕ್ಷಕ್ಕೆ ಮರಳಿದ್ದಾರೆ.
ಕಳೆದ ಫೆಬ್ರವರಿ 22ರಿಂದ ಇದುವರೆಗೆ ವೈಎಸ್ಆರ್ ಕಾಂಗ್ರೆಸ್ ನಿಂದ ಒಟ್ಟು 8 ಶಾಸಕರು ಹಾಗೂ ಓರ್ವ ಎಂಎಲ್ ಸಿ ಪಕ್ಷ ತೊರೆದು ಟಿಡಿಪಿ ಸೇರಿದ್ದಾರೆ.