

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಅಭೂತಪೂರ್ವ ಗೆಲುವಿನೊಂದಿಗೆ ಎರಡನೆ ಬಾರಿಗೆ ಆಯ್ಕೆಯಾಗಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೃಣಮೂಲ ಕಾಂಗ್ರೆಸ್ ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿದ್ದು ವಿರೋಧಿಗಳ ವಂಚನೆ ಮತ್ತು ಸುಳ್ಳುಗಳನ್ನು ಜನ ತಿರಸ್ಕತಿಸಿದ್ದಾರೆ ಎಂದಿದ್ದಾರೆ.
"ಜನ ಅಂತಹ ಪ್ರಚಾರಗಳನ್ನು ಇಷ್ಟಪಡುವುದಿಲ್ಲ. ನಮ್ಮ ವಿರುದ್ಧ ಎಲ್ಲ ತರಹದ ಮೈತ್ರಿಗಳಿದ್ದವು. ಆದರೆ ಜನ ಸರಿಯಾದದ್ದನ್ನು ಆಯ್ಕೆ ಮಾಡಿದ್ದಾರೆ" ಎಂದು ಬ್ಯಾನರ್ಜಿ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದ್ದಾರೆ.
"೪೯ ವರ್ಷಗಳಲ್ಲಿ ಇದೇ ಮೊದಲನೇ ಬಾರಿಗೆ ಯಾವುದೇ ಒಂದು ಪಕ್ಷಕ್ಕೆ ಭಾರೀ ಜಯ ಒದಗಿರುವುದು" ಎಂದು ೨೯೪ ಕ್ಷೇತ್ರಗಳ ವಿಧಾನಸಭೆಯಲ್ಲಿ ೨೦೦ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ಪಕ್ಷದ ಅಧ್ಯಕ್ಷೆ ಹೇಳಿದ್ದಾರೆ.
"೨೦೧೧ರಲ್ಲಿ ನಾವು ನಮ್ಮ ಮೈತ್ರಿ ಪಕ್ಷದೊಂದಿಗೆ (ಕಾಂಗ್ರೆಸ್) ೧೮೪ ಸ್ಥಾನ ಗೆದ್ದಿದ್ದೆವು. ಈ ಬಾರಿ ಜನ ನಮಗೆ ಇನ್ನೂ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲ್ಲಿಸಿದ್ದಾರೆ" ಎಂದು ಅವರು ಹೇಳಿದ್ದಾರೆ.