ಆಜಾದ್ ಪುರ ಮಂಡಿಯಲ್ಲಿ ಆಯೋಜಿಸಿದ್ದ ರ್ಯಾಲಿಯಲ್ಲಿ ಮಾತನಾಡಿದ ಮಮತಾ "ಪ್ರಧಾನಿ ಮೋದಿ ಸಂವಿಧಾನದ ನಿಯಮಗಳನ್ನು ಮುರಿದಿದ್ದಾರೆ... ಈ ನಿರ್ಧಾರವನ್ನು ಜಾರಿಗೊಳಿಸುವ ಮೊದಲು ನೀವು (ಮೋದಿ) ಸರಿಯಾದ ಯೋಜನೆಯನ್ನು ಮಾಡಿಕೊಳ್ಳದೆ ಇದ್ದದ್ದೇಕೆ? ಇದರಿಂದ ಸಾಮಾನ್ಯ ಜನರಿಗೆ ತೊಂದರೆಯಾಗುತ್ತಿದೆ. ನಾವು ಮೂರು ದಿನಗಳ ಸಮಯಾವಕಾಶ ನೀಡಲಿದ್ದೇವೆ. ನೀವು ಈ ತೊಂದರೆಗಳನ್ನು ಸರಿಪಡಿಸದೆ ಇದ್ದರೆ ನಾವು ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ. ನಾವಿನ್ನು ಜೀವಂತವಾಗಿದ್ದೇವೆ" ಎಂದಿದ್ದಾರೆ.