ಚೈನಾ ಅಧ್ಯಕ್ಷರ ಆಗಮನವನ್ನು ಸ್ವಾಗತಿಸಿದ ಪ್ರಧಾನಿ ಮೋದಿ

ಬ್ರಿಕ್ಸ್ ಸಮ್ಮೇಳನಕ್ಕಾಗಿ ಆಗಮಿಸಿರುವ ಚೈನಾ ರಾಷ್ಟ್ರಾಧ್ಯಕ್ಷ ಕ್ಸಿ ಜಿನ್ಪಿಂಗ್ ಅವರು ಗೋವಾಗೆ ಆಗಮಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸ್ವಾಗತ ಕೋರಿದ್ದಾರೆ.
ಬ್ರಿಕ್ಸ್ ಸಮಾವೇಶಕ್ಕೆ ಆಗಮಿಸಿದ ಚೈನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್
ಬ್ರಿಕ್ಸ್ ಸಮಾವೇಶಕ್ಕೆ ಆಗಮಿಸಿದ ಚೈನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್
Updated on: 
ಬೆನೌಲಿಮ್ (ಗೋವಾ): ಬ್ರಿಕ್ಸ್ ಸಮ್ಮೇಳನಕ್ಕಾಗಿ ಆಗಮಿಸಿರುವ ಚೈನಾ ರಾಷ್ಟ್ರಾಧ್ಯಕ್ಷ ಕ್ಸಿ ಜಿನ್ಪಿಂಗ್ ಅವರು ಗೋವಾಗೆ ಆಗಮಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸ್ವಾಗತ ಕೋರಿದ್ದಾರೆ. 
"ಬ್ರಿಕ್ಸ್ 2016 ಸಮ್ಮೇಳನದ ಅತಿಥಿ ಕ್ಸಿ ಜಿನ್ಪಿಂಗ್ ಅವರಿಗೆ ಭಾರತ ಆತ್ಮೀಯ ಸ್ವಾಗತ ಕೋರುತ್ತದೆ. ಅವರ ಭೇಟಿಯಿಂದ ಭಾರತ-ಚೈನಾದ ಸಂಬಂಧ ವೃದ್ಧಿಸಲಿ ಎಂದು ಹಾರೈಸುತ್ತೇನೆ" ಎಂದು ಮೋದಿ ಟ್ವೀಟ್ ಮಾಡಿದ್ದಾರೆ 
ದಾಬೋಲಿನ್ ವಿಮಾನನಿಲ್ದಾಣದಲ್ಲಿ ಇಳಿದ ಕ್ಸಿ ಅವರಿಗೆ ಕೆಂಪು ಹಾಸಿನ ಸ್ವಾಗತ ನೀಡಿದ್ದು, ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ ಕೆ ಸಿಂಗ್ ಅವರನ್ನು ಸ್ವೀಕರಿಸಿದ್ದಾರೆ. 
ತಾಜ್ ಎಕ್ಸಟಿಕ ರೆಸಾರ್ಟ್ ನಲ್ಲಿ ಕ್ಸಿ ಅವರ ಜೊತೆಗೆ ಶನಿವಾರ ಸಂಜೆ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಉರಿ ಸೇನಾ ಘಟಕದ ಮೇಲೆ ನಡೆದ ಭಯೋತ್ಪಾದಕ ದಾಳಿಯ ಬಗ್ಗೆ ಚರ್ಚಿಸುವ ಸಾಧ್ಯತೆಯಿದ್ದು ಪಾಕಿಸ್ತಾನವನ್ನು ಇನ್ನಷ್ಟು ರಾಜತಾಂತ್ರಿಕವಾಗಿ ಪ್ರತ್ಯೇಕಿಸುವ ಮಾತುಕತೆ ಚೈನಾ ಮತ್ತು ಭಾರತದ ನಡುವೆ ನಡೆಯಬಹುದು ಎನ್ನಲಾಗಿದೆ. 
ಕ್ಸಿ ಗೋವಾಗೆ ಆಗಮಿಸಿದಾಗ ಪಣಜಿಯಿಂದ 35 ಕಿಮಿ ದೂರದಲ್ಲಿರುವ ಮಾರ್ಗೋ ನಗರದಲ್ಲಿ ಟಿಬೆಟ್ ಪ್ರತಿಭಟನಾಕಾರರು ನೆರೆದಿದ್ದರು. ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. 
ಬ್ರಿಕ್ಸ್ ರಾಷ್ಟ್ರಗಳ (ಬ್ರೆಜಿಲ್, ರಷ್ಯಾ, ಭಾರತ, ಚೈನಾ, ದಕ್ಷಿಣ ಆಫ್ರಿಕಾ) ಎಂಟನೇ ಸಮಾವೇಶ ಗೋವಾದಲ್ಲಿ ಭಾನುವಾರ ಜರುಗಲಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com