ನಾನು ನನ್ನ ಮಗುವನ್ನು ನೋಡಬೇಕು: ಕಾಣೆಯಾದ ಜೆ ಎನ್ ಯು ವಿದ್ಯಾರ್ಥಿಯ ತಾಯಿ

ಕಾಣೆಯಾಗಿರುವ ಜವಾಹರ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ನಜೀಬ್ ಅಹಮದ್ ಅವರ ತಾಯಿ ಫಾತಿಮಾ, "ತಮ್ಮ ಮಗುವನ್ನು ಹುಡುಹಿಕೊಡಲು ಸಹಾಯ ಮಾಡುವಂತೆ" ಅಧಿಕಾರಿಗಳಿಗೆ ಗುರುವಾರ
ಜೆ ಎನ್ ಯು ನಲ್ಲಿ ಪ್ರತಿಭಟನೆ
ಜೆ ಎನ್ ಯು ನಲ್ಲಿ ಪ್ರತಿಭಟನೆ
ನವದೆಹಲಿ: ಕಾಣೆಯಾಗಿರುವ ಜವಾಹರ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ನಜೀಬ್ ಅಹಮದ್ ಅವರ ತಾಯಿ ಫಾತಿಮಾ, "ತಮ್ಮ ಮಗುವನ್ನು ಹುಡುಹಿಕೊಡಲು ಸಹಾಯ ಮಾಡುವಂತೆ" ಅಧಿಕಾರಿಗಳಿಗೆ ಗುರುವಾರ ಆಗ್ರಹಿಸಿದ್ದಾರೆ. 
"ನನ್ನ ಮಗುವಿನ ಮುಖ ಒಂದು ಬಾರಿ ನೋಡಬೇಕು. ನಂತರ ಅವನನ್ನು ಬೇಕಾದರೆ ಒಂದು ತಿಂಗಳು ಇಟ್ಟುಕೊಳ್ಳಿ. ನಾನು ಏನನ್ನು ಹೇಳುವುದಿಲ್ಲ. ಆದರೆ ಅವನನ್ನು ಒಮ್ಮೆ ನೋಡಬೇಕು" ಎಂದು ಫಾತಿಮಾ ಟಿವಿ ವಾಹಿನಿಯೊಂದಕ್ಕೆ ಹೇಳಿದ್ದಾರೆ. 
"ನಾನು ಸಣ್ಣ ಪ್ರದೇಶದವಳು... ನನ್ನ ಮಗು ಸುರಕ್ಷಿತವಾಗಿರುವುದನ್ನು ನೋಡಬೇಕು. ಅವನು ಏನನ್ನಾದರೂ ತಿಂದಿದ್ದಾನೆಯೋ, ಹಸಿವಿನಿಂದ ಇದ್ದಾನೋ ತಿಳಿಯದು" ಎಂದು ದುಃಖತಪ್ತ ತಾಯಿ ನುಡಿದಿದ್ದಾರೆ. 
"ನನ್ನ ಮಗುವಿಗೆ ಸಹಾಯ ಮಾಡಲು ಎಲ್ಲರನ್ನು ಬೇಡಿಕೊಳ್ಳುತ್ತೇನೆ" ಎಂದು ಅಕ್ಟೋಬರ್ 14 ರ ರಾತ್ರಿಯಿಂದ ಮಗ ಕಾಣೆಯಾಗಿರುವುದರ ಬಗ್ಗೆ ದೂರವಾಣಿ ಕರೆಯಿಂದ ತಿಳಿದ ಉತ್ತರ ಪ್ರದೇಶದ ಬದೌನ್ ನ ಮಹಿಳೆ ದೆಹಲಿಗೆ ತುರ್ತಾಗಿ ಆಗಮಿಸಿ ಹೇಳಿದ್ದಾರೆ. 
ಬಿಜೆಪಿ ಪಕ್ಷದ ಅಂಗವಾದ ಅಖಿಲ ಭಾರತ ವಿದ್ಯಾರ್ಥಿ ಪರಿಷದ್ (ಎಬಿವಿಪಿ) ಸಂಘಟನೆಯ ಜೊತೆಗೆ ಜಗಳ ಮಾಡಿಕೊಂಡಿದ್ದ ಅಹಮದ್, ವಿಶ್ವವಿದ್ಯಾಲಯದ ಹಾಸ್ಟೆಲ್ ನಿಂದ ಕಾಣೆಯಾಗಿದ್ದಾರೆ. ಇವರ ಬಗ್ಗೆ ಸುಳಿವು ನೀಡಿದವರಿಗೆ 50 ಸಾವಿರ ರೂ ಬಹುಮಾನ ನೀಡುವುದಾಗಿ ದೆಹಲಿ ಪೊಲೀಸರು ಘೋಷಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com