ಭಾರತೀಯ ಸೇನೆಗೆ ಶೀಘ್ರ ಬುಲೆಟ್ ಪ್ರೂಫ್ ಹೆಲ್ಮೆಟ್; ಒಂದೂವರೆ ಲಕ್ಷ ಹೆಲ್ಮೆಟ್ ಖರೀದಿಗೆ ಮುಂದಾದ "ಕೇಂದ್ರ"

ಭಾರತೀಯ ಸೇನೆಯ ದಶಕಗಳ ಬೇಡಿಕೆಯಾದ ಬುಲೆಟ್ ಪ್ರೂಫ್ ಹೆಲ್ಮೆಟ್ ಶೀಘ್ರದಲ್ಲಿಯೇ ಸೈನಿಕರ ಶಿರವೇರಲಿದ್ದು, ಹೆಲ್ಮೆಟ್ ಖರೀದಿಗೆ ಕೇಂದ್ರ ರಕ್ಷಣಾ ಇಲಾಖೆ ಮುಂದಾಗಿದೆ.
ಭಾರತೀಯ ಸೇನೆಗೆ ಬುಲೆಟ್ ಪ್ರೂಫ್ ಹೆಲ್ಮೆಟ್ (ಸಂಗ್ರಹ ಚಿತ್ರ)
ಭಾರತೀಯ ಸೇನೆಗೆ ಬುಲೆಟ್ ಪ್ರೂಫ್ ಹೆಲ್ಮೆಟ್ (ಸಂಗ್ರಹ ಚಿತ್ರ)
Updated on: 

ನವದೆಹಲಿ: ಭಾರತೀಯ ಸೇನೆಯ ದಶಕಗಳ ಬೇಡಿಕೆಯಾದ ಬುಲೆಟ್ ಪ್ರೂಫ್ ಹೆಲ್ಮೆಟ್ ಶೀಘ್ರದಲ್ಲಿಯೇ ಸೈನಿಕರ ಶಿರವೇರಲಿದ್ದು, ಹೆಲ್ಮೆಟ್ ಖರೀದಿಗೆ ಕೇಂದ್ರ ರಕ್ಷಣಾ ಇಲಾಖೆ ಮುಂದಾಗಿದೆ.

ಭಾರತೀಯ ಸೇನೆ ದಶಕದ ಬುಲೆಟ್ ಪ್ರೂಫ್ ಜಾಕೆಟ್ ಬೇಡಿಕೆ ಈಡೇರಿಸಿದ್ದ ಕೇಂದ್ರ ಸರ್ಕಾರ ಇದೀಗ ಸೇನೆಯ ಮತ್ತೊಂದು ಪ್ರಮುಖ ಬೇಡಿಕೆ ಈಡೇರಿಕೆಗೆ ಮುಂದಾಗಿದ್ದು, ಸೈನಿಕರಿಗೆ  ಬುಲೆಟ್ ಪ್ರೂಫ್ ಹೆಲ್ಮೆಟ್ ನೀಡಲು ಮುಂದಾಗಿದೆ. ಈ ಸಂಬಂಧ ಕೇಂದ್ರ ರಕ್ಷಣಾ ಇಲಾಖೆ ಪ್ರಸ್ತಾವನೆಯೊಂದನ್ನು ಮುಂದಿಟ್ಟಿದ್ದು, ಶೀಘ್ರದಲ್ಲಿಯೇ ಈ ಬಗ್ಗೆ ಕೇಂದ್ರ ಸರ್ಕಾರ ನಿರ್ಧಾರ  ಕೈಗೊಳ್ಳಲಿದೆ.

ಮೂಲಗಳ ಪ್ರಕಾರ ಸುಮಾರು 170 ಕೋಟಿ ರು. ವೆಚ್ಚದಲ್ಲಿ ಸುಮಾರು ಒಂದೂವರೆ ಲಕ್ಷ (1,58,279) ಬುಲೆಟ್ ಪ್ರೂಫ್ ಹೆಲ್ಮೆಟ್ ಖರೀದಿಸಲು ಕೇಂದ್ರ ರಕ್ಷಣಾ ಇಲಾಖೆ ಪ್ರಸ್ತಾವನೆ ಮುಂದಿಟ್ಟಿದೆ.  ಭಾರತ ಮೂಲದ ರಕ್ಷಣಾ ಪರಿಕರ ತಯಾರಿಕಾ ಸಂಸ್ಥೆ ಎಂಕೆಯುನೊಂದಿಗೆ ಕೇಂದ್ರ ಸರ್ಕಾರ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದ್ದು, ಹೆಲ್ಮೆಟ್ ನೊಂದಿಗೆ ವೈರ್ ಲೆಸ್ ಕಮ್ಯೂನಿಕೇಷನ್  ಹೆಡ್ ಸೆಟ್ ಅನ್ನು ಕೂಡ ಖರೀಸಲು ಕೇಂದ್ರ ಸರ್ಕಾರ ಮುಂದಾಗಿದೆ.

ಪ್ರಸ್ತುತ ರಕ್ಷಣಾ ಇಲಾಖೆಯ ಪ್ರಸ್ತಾಪಿಸಿರುವ ಬುಲೆಟ್ ಪ್ರೂಫ್ ಹೆಲ್ಮೆಟ್ ಗಳು ಹಗರು ಮತ್ತು ಕಠಿಣವಾಗಿದ್ದು, 9 ಎಂ.ಎಂ ಗುಂಡುಗಳನ್ನು 20 ಮೀಟರ್ ಹತ್ತಿರದಿಂದ ಹಾರಿಸಿದರೂ  ತಡೆದುಕೊಳ್ಳುವ ಸಾಮರ್ಥ್ಯ ಹೊಂದಿವೆ. ಈ ಹೆಲ್ಮೆಟ್ ಗಳಿಗೆ ರಾತ್ರಿಯಲ್ಲೂ ಕಾಣುವಂತ ಟೆಲಿಸ್ಕೋಪುಗಳು, ನೈಟ್ ವಿಷನ್ ವ್ಯವಸ್ಥೆ ಮತ್ತು ಹೆಚ್ಚಿನ ರಕ್ಷಣೆ ಒದಗಿಸುವ ಕನ್ನಡಕಗಳನ್ನು  ಅಳವಡಿಸಬಹದಾಗಿದೆ. ಈಗಿರುವ ಹೆಲ್ಮೆಟ್‍ಗಳು ಅತಿ ಭಾರದ್ದಾಗಿರುವುದರ ಜೊತೆಗೆ ಪ್ರಬಲ ಗುಂಡು ನಿರೋಧಕ ಸಾಮರ್ಥ್ಯ ಹೊಂದಿಲ್ಲ.

ಕಳೆದ ಆಗಸ್ಟ್ ನಲ್ಲಿ ನೌಹಟ್ಟಾದಲ್ಲಿ ನಡೆದ ಉಗ್ರದಾಳಿ ವೇಳೆ ವೀರ ಯೋಧ ಪ್ರಮೋದ್ ಕುಮಾರ್ ಅವರು ಗುಂಡೇಟಿನಿಂದ ಹುತಾತ್ಮರಾಗಿದ್ದರು. ಉಗ್ರ ನೋರ್ವ ಸಿಡಿಸಿದ್ದ ಗುಂಡು ಪ್ರಮೋದ್  ಕುಮಾರ್ ಅವರ ತಲೆಗೆ ಹೊಕ್ಕಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಈ ಘಟನೆ ಬಳಿಕೆ ಭಾರತೀಯ ಸೇನೆಯ ಬುಲೆಟ್ ಪ್ರೂಫ್ ಹೆಲ್ಮೆಟ್ ಬೇಡಿಕೆಗೆ ಹೆಚ್ಚು ಬಲ ಬಂದಿತು. ಸಾಮಾಜಿಕ  ಜಾಲತಾಣಗಳಲ್ಲಿ ಈ ಬಗ್ಗೆ ದೊಡ್ಡ ಜಾಗೃತಿ ಅಭಿಯಾನವೇ ನಡೆದಿತ್ತು. ಅದರ ಫಲವೇನೋ ಎಂಬಂತೆ ಇದೀಗ ಕೇಂದ್ರ ಸರ್ಕಾರ ಬುಲೆಟ್ ಪ್ರೂಫ್ ಹೆಲ್ಮೆಟ್ ಖರೀದಿಗೆ ಮುಂದಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com