ಎಎಪಿ ಶಾಸಕ ಅಮಾನತುಲ್ಲಾ ಖಾನ್ ವಿರುದ್ಧ ಎಫ್ ಐ ಆರ್; ರಾಜೀನಾಮೆ ಸ್ವೀಕರಿಸಿದ ಪಕ್ಷ

ಆಮ್ ಆದ್ಮಿ ಪಕ್ಷದ ಶಾಸಕ ಅಮಾನತುಲ್ಲಾ ಖಾನ್ ವಿರುದ್ಧ ಅವರ ಸಹೋದರನ ಪತ್ನಿ ಲೈಂಗಿಕ ಕಿರುಕುಳದ ದೂರು ನೀಡಿರುವ ಹಿನ್ನಲೆಯಲ್ಲಿ ಎಫ್ ಐ ಆರ್ ದಾಖಲಾಗಿದ್ದು, ರಾಜೀನಾಮೆ
ಆಮ್ ಆದ್ಮಿ ಪಕ್ಷದ ಶಾಸಕ ಅಮಾನತುಲ್ಲಾ ಖಾನ್
ಆಮ್ ಆದ್ಮಿ ಪಕ್ಷದ ಶಾಸಕ ಅಮಾನತುಲ್ಲಾ ಖಾನ್
Updated on: 
ನವದೆಹಲಿ: ಆಮ್ ಆದ್ಮಿ ಪಕ್ಷದ ಶಾಸಕ ಅಮಾನತುಲ್ಲಾ ಖಾನ್ ವಿರುದ್ಧ ಅವರ ಸಹೋದರನ ಪತ್ನಿ ಲೈಂಗಿಕ ಕಿರುಕುಳದ ದೂರು ನೀಡಿರುವ ಹಿನ್ನಲೆಯಲ್ಲಿ ಎಫ್ ಐ ಆರ್ ದಾಖಲಾಗಿದ್ದು, ರಾಜೀನಾಮೆ ನೀಡಲು ಶಾಸಕ ಮುಂದಾಗಿದ್ದರು, ಪಕ್ಷ ಬೇಡವೆಂದಿದೆ. 
"ಅವರ (ಖಾನ್) ರಾಜೀನಾಮೆ ಸ್ವೀಕರಿಸಲು ನಾವು ನಿರಾಕರಿಸಿದೆವು. ಇದು ಆರು ವರ್ಷದ ಹಿಂದಿನ ಪ್ರಕರಣ ಮತ್ತು ಅವರ ಅತ್ತೆ-ಮಾವ ಇದರಲ್ಲಿ ಅವರನ್ನು ಎಳೆಯುತ್ತಿದ್ದಾರೆ" ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಧಿಯಾ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದ್ದಾರೆ. 
"ನಮ್ಮ ಆಂತರಿಕ ತನಿಖೆಗಳ ಪ್ರಕಾರ ಅವರನ್ನು ಈ ಪ್ರಕರಣಕ್ಕೆ ಎಳೆಯಲಾಗಿದೆ ಎಂದು ಕಂಡುಹಿಡಿದಿದ್ದೇವೆ" ಎಂದು ಕೂಡ ಅವರು ಹೇಳಿದ್ದಾರೆ.
ಶನಿವಾರ ದಕ್ಷಿಣ ದೆಹಲಿಯ ಜಾಮಿಯಾನಗರ ಪೊಲೀಸ್ ಠಾಣೆಯಲ್ಲಿ ಖಾನ್ ವಿರುದ್ಧ ದೂರು ದಾಖಲಿಸಕೊಳ್ಳಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com