ರೇಪ್ ಆರೋಪ; ಜೆ ಎನ್ ಯು ಪಿ ಎಚ್ ಡಿ ವಿದ್ವಾಂಸ ಬಂಧನ

ಮದುವೆಯಾಗುತ್ತೇನೆ ಎಂದು ನಂಬಿಸಿ 26 ವರ್ಷದ ಮಹಿಳೆಯನ್ನು ರೇಪ್ ಮಾಡಿದ ಆರೋಪದಲ್ಲಿ ಜವಾಹಾರ್ ನೆಹರು ವಿಶ್ವವಿದ್ಯಾಲಯದ ಸಂಶೋಧನಾ ವಿದ್ವಾಂಸರೊಬ್ಬರನ್ನು ಬುಧವಾರ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಮದುವೆಯಾಗುತ್ತೇನೆ ಎಂದು ನಂಬಿಸಿ 26 ವರ್ಷದ ಮಹಿಳೆಯನ್ನು ರೇಪ್ ಮಾಡಿದ ಆರೋಪದಲ್ಲಿ ಜವಾಹಾರ್ ನೆಹರು ವಿಶ್ವವಿದ್ಯಾಲಯದ ಸಂಶೋಧನಾ ವಿದ್ವಾಂಸರೊಬ್ಬರನ್ನು ಬುಧವಾರ ಬಂಧಿಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. 
ದಕ್ಷಿಣ ದೆಹಲಿಯ ವಸಂತ್ ಕುಂಜ್ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ಹೇಳಿಕೆ ನೀಡಿ ದೂರು ದಾಖಲಿಸಿದ ಹಿನ್ನಲೆಯಲ್ಲಿ ಮಧ್ಯಪ್ರದೇಶದ ನಿವಾಸಿ, ಜೆ ಎನ್ ಯು ನಲ್ಲಿ ಪಿ ಎಚ್ ಡಿ ಗಾಗಿ ಅಧ್ಯಯನ ಮಾಡುತ್ತಿರುವ ಅಜಯ್ ಸಿಂಗ್ ಅವರನ್ನು ಬುಧವಾರ ಬಂಧಿಸಲಾಗಿದೆ. 
ಮಂಗಳವಾರ ಸಂಜೆ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಕೊಳ್ಳಲಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ಪೊಲೀಸ್ ಅಧಿಕಾರಿ ಹೇಳಿದ್ದಾರೆ. 
ಸಂತ್ರಸ್ತೆಯನ್ನು 2008 ರಿಂದ ಈ ವ್ಯಕ್ತಿ ಬಲ್ಲವನಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ. "ಯುವತಿ 2010 ರಲ್ಲಿ ದೆಹಲಿಗೆ ಬಂದಿದ್ದರು, ಆಗಿನಿಂದಲೂ ಇಬ್ಬರು ಸಂಬಂಧದಲ್ಲಿದ್ದರು. ಸಂತ್ರಸ್ತೆ ಹಲವಾರು ಬಾರಿ ಮನವಿ ಮಾಡಿದರೂ ಸಿಂಗ್ ಅವರನ್ನು ಮದುವೆಯಾಗಿಲ್ಲ, ಆದುದರಿಂದ ಅವರು ಪೊಲೀಸರು ಮೊರೆ ಹೋಗಿದ್ದಾರೆ" ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. 
ಐಪಿಸಿ ಸೆಕ್ಶನ್ 376 (ರೇಪ್) ಅಡಿ ಪ್ರಕರಣ ದಾಖಲಿಸಕೊಳ್ಳಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com