ಫ್ರಾಂಕ್ ಫರ್ಟ್ ವಿಮಾನ ನಿಲ್ದಾಣದಲ್ಲಿ ಬೆಂಗಳೂರು ಮಹಿಳೆಯ ವಿವಸ್ತ್ರಗೊಳಿಸಿ ಶೋಧಕ್ಕೆ ಯತ್ನ!

ಜರ್ಮನಿಯ ಫ್ರಾಂಕ್ ಫರ್ಟ್ ವಿಮಾನ ನಿಲ್ದಾಣದಲ್ಲಿ ಬೆಂಗಳೂರು ಮೂಲದ ಮಹಿಳೆಯನ್ನು ಅಪಮಾನಗೊಳಿಸಲಾಗಿದ್ದು, ಮಹಿಳೆಯನ್ನು ವಿವಸ್ತ್ರಗೊಳಿಸಿ ಶೋಧ ನಡೆಸಲು ಅಲ್ಲಿನ ಅಧಿಕಾರಿಗಳು ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ನವದೆಹಲಿ: ಜರ್ಮನಿಯ ಫ್ರಾಂಕ್ ಫರ್ಟ್ ವಿಮಾನ ನಿಲ್ದಾಣದಲ್ಲಿ ಬೆಂಗಳೂರು ಮೂಲದ ಮಹಿಳೆಯನ್ನು ಅಪಮಾನಗೊಳಿಸಲಾಗಿದ್ದು, ಮಹಿಳೆಯನ್ನು ವಿವಸ್ತ್ರಗೊಳಿಸಿ ಶೋಧ ನಡೆಸಲು ಅಲ್ಲಿನ ಅಧಿಕಾರಿಗಳು ಯತ್ನಿಸಿರುವ ಘಟನೆ  ಬೆಳಕಿಗೆ ಬಂದಿದೆ.

ಬೆಂಗಳೂರಿನಿಂದ ಐಸ್ ಲ್ಯಾಂಡ್ ಗೆ ತೆರಳುತ್ತಿದ್ದ 30 ವರ್ಷದ ಶೃತಿ ಬಸಪ್ಪ ಎಂಬುವವರನ್ನು ಫ್ರಾಂಕ್ ಫರ್ಟ್ ವಿಮಾನ ನಿಲ್ದಾಣ ಸಿಬ್ಬಂದಿ ಶೋಧ ಕಾರ್ಯವೇಳೆ ಅಸಭ್ಯವಾಗಿ ನಡೆಸಿಕೊಂಡಿದ್ದಾರೆ. ಈ ಬಗ್ಗೆ ಸ್ವತಃ ಸಂತ್ರಸ್ಥ ಮಹಿಳೆ  ಶೃತಿ ಬಸಪ್ಪ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದು, ಫ್ರಾಂಕ್ ಫರ್ಟ್ ವಿಮಾನ ನಿಲ್ದಾಣದಲ್ಲಿ ಸಂಪೂರ್ಣ ಬಾಡಿ ಸ್ಕ್ಯಾನ್ ಬಳಿಕ ನನ್ನನ್ನು ತಡೆದ ಅಧಿಕಾರಿಗಳು ಅನುಮಾನದಿಂದ ಬಟ್ಟೆ ಬಿಚ್ಚಲು ಹೇಳಿದರು.  ಇದರಿಂದ ತೀವ್ರ ಮುಜುಗರಗೊಂಡ ನಾನು 2 ವಾರಗಳ ಹಿಂದಷ್ಟೇ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು, ನಿಧಾನವಾಗಿ ದೇಹ ಮುಟ್ಟಿ ಪರಿಶೀಲನೆ ಮಾಡಿ ಎಂದು ಮನವಿ ಮಾಡಿಕೊಂಡೆ. ಅಧಿಕಾರಿಗಳ ಮುಂದೆ ನನ್ನ ವೈದ್ಯಕೀಯ  ವರದಿಗಳನ್ನೂ ತೋರಿಸಿದೆ. ಅದರೂ ಒಪ್ಪದ ಅಧಿಕಾರಿಗಳು ತಮ್ಮ ಪಟ್ಟು ಸಡಿಲಿಸಲಿಲ್ಲ.  ಬಟ್ಟೆ ಬಿಚ್ಚುವಂತೆ ಹೇಳಿದರು. ಹೀಗಾಗಿ ಹೊರಗೆ ನಿಂತಿದ್ದ ನನ್ನ ಪತಿಯನ್ನು ಬಳಿಗೆ ಕರೆದೆ, ನನ್ನ ಪತಿ ಹತ್ತಿರಕ್ಕೆ ಬರುತ್ತಿದ್ದಂತೆಯೇ  ಅಧಿಕಾರಿಗಳ ವರ್ತನೆಯೇ ಬೇರೆಯಾಗಿತ್ತು ಎಂದು ಬರೆದು ಕೊಂಡಿದ್ದಾರೆ.

ಘಟನೆಯು ಸ್ಪಷ್ಟವಾಗಿ ಜನಾಂಗೀಯ ಅಪರಾಧವಾಗಿದ್ದು, ಜನಾಂಗಿಯತೆ ನೋಡಿ ಅನುಮಾನಿಸುವುದು ಸರಿಯಲ್ಲ ಎಂದು ಶೃತಿ ಬಸಪ್ಪ ಕಿಡಿಕಾರಿದ್ದಾರೆ. ಅಲ್ಲದೆ ವಿಮಾನ ನಿಲ್ದಾಣದಲ್ಲೂ ಶೃತಿ ಅವರು ದೂರು ದಾಖಲಿಸಿದ್ದಾರೆ.

ಜರ್ಮನ್ ರಾಯಭಾರ ಕಚೇರಿಯಿಂದ ವರದಿ ಕೇಳಿದ ಸುಷ್ಮಾ
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು, ಜರ್ಮನ್ ನಲ್ಲಿರುವ ದೂತವಾಸದ ಅಧಿಕಾರಿಗಳ ವಿವರ ಕೇಳಿದ್ದಾರೆ. ಅಂತೆಯೇ ಪ್ರಕರಣ ಸಂಬಂಧ ವಿಚಾರಣೆ ನಡೆಸುವಂತೆಯೂ  ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com