ಲಖನೌ: ಹಿಂದೂಳಿದ ವರ್ಗದ 17 ಉಪ-ಜಾತಿಗಳನ್ನು ಪರಿಷ್ಠ ಜಾತಿ(ಎಸ್ ಸಿ)ಗೆ ಸೇರಿಸಿ ಉತ್ತರ ಪ್ರದೇಶ ಸರ್ಕಾರ ಹೊರಡಿಸಿದ್ದ ಅಧಿಸೂಚನೆಗೆ ಮಂಗಳವಾರ ಅಲಹಬಾದ್ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು, ವಿಧಾನಸಭೆ ಚುನಾವಣೆ ಎದುರಿಸುತ್ತಿರುವ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರಿಗೆ ಭಾರಿ ಹಿನ್ನಡೆಯಾಗಿದೆ.
ಕಳೆದ ಡಿಸೆಂಬರ್ ನಲ್ಲಿ ಅಖಿಲೇಶ್ ಯಾದವ್ ನೇತೃತ್ವದ ಸಂಪುಟ ಸಭೆ, ಕಹರ್, ಕಶ್ಯಪ್, ಕೆವಾಟ್, ನಿಶಾದ್, ಬಿಂದ್ ಭಾರ್, ಪ್ರಜಾಪತಿ, ರಾಜ್ ಭಾರ್ ಸೇರಿದಂತೆ 17 ಉಪ ಜಾತಿಗಳನ್ನು ಎಸ್ ಸಿಗೆ ಸೇರಿಸುವ ಪ್ರಸ್ತಾವನೆಗೆ ಒಪ್ಪಿಗೆ ನೀಡಿತ್ತು.
ಉತ್ತರ ಪ್ರದೇಶ ಸರ್ಕಾರದ ಅಧಿಸೂಚನೆಗೆ ವಿರೋಧ ವ್ಯಕ್ತಪಡಿಸಿದ್ದ ಪ್ರತಿಪಕ್ಷ ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿ, ಇದೊಂದು ದೊಡ್ಡ ಡ್ರಾಮ ಎಂದು ವ್ಯಂಗ್ಯವಾಡಿದ್ದರು.