ನವದೆಹಲಿ: ಯೋಗ ಭ್ರಾತೃತ್ವದ ಮತ್ತು ಸೌಹಾರ್ದತೆಯ ಯುಗಕ್ಕೆ ಚಾಲನೆ ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ.
ಋಷಿಕೇಶ್ ನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಯೋಗ ಉತ್ಸವದ ಅಂಗವಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮೋದಿ ಈ ಮಾತುಗಳನ್ನು ಹೇಳಿದ್ದಾರೆ.
ಯೋಗವನ್ನು 'ನನ್ನಿಂದ' 'ನಿಮ್ಮೆಡೆಗೆ' ಕೊಂಡೊಯ್ಯುವ ಪಯಣ ಎಂದು ಬಣ್ಣಿಸಿರುವ ಪ್ರಧಾನಿ "ಚಿಂತನೆ, ಕ್ರಮ, ಜ್ಞಾನ ಮತ್ತು ಭಕ್ತಿಯೊಂದಿಗೆ ಯೋಗ ವ್ಯಕ್ತಿಯನ್ನು ಉತ್ತಮಪಡಿಸುತ್ತದೆ" ಎಂದಿದ್ದಾರೆ.
"ಯೋಗ ನಮ್ಮೊಳಗಿನ ಸಂಕುಚಿತ ಮನೋಭಾವವನ್ನು ವಿಸ್ತರಿಸಿ, ನಮ್ಮ ಕುಟುಂಬಗಳು, ಸಮಾಜಗಳು, ಮನುಷ್ಯತ್ವವನ್ನು ವಿಸ್ತರಿಸಿ ಕಾಣಲು ಸಹಕರಿಸುತ್ತದೆ" ಎಂದು ಮೋದಿ ಹೇಳಿದ್ದಾರೆ.
ಆಧುನಿಕ ಜೀವನಶೈಲಿಯ ಮೇಲೆ ಯೋಗ ಮೂಡಿಸುವ ಪರಿಣಾಮವನ್ನು ವಿವರಿಸಿರುವ ಮೋದಿ "ಯೋಗ ತರಬೇತಿಯಿಂದ ಒತ್ತಡ ಮತ್ತು ಜೀವನಶೈಲಿ ಸಂಬಂಧಿ ತೊಂದರೆಗಳನ್ನು ಸರಿಪಡಿಸಲು ಸಹಕಾರಿ ಎಂಬುದಕ್ಕೆ ಸಾಕಷ್ಟು ಸಾಕ್ಸ್ಯವಿದೆ" ಎಂದು ಕೂಡ ಅವರು ಹೇಳಿದ್ದಾರೆ.
ಅಂತಾರಾಷ್ಟ್ರೀಯ ಯೋಗ ಉತ್ಸವವನ್ನು ಆತುಶ್, ಉತ್ತರಾಖಂಡ್ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಮತ್ತು ಪರಮಾರ್ಥ್ ನಿಕೇತನ್ ಆಶ್ರಮ ಜಂಟಿಯಾಗಿ ಋಷಿಕೇಶದಲ್ಲಿ ಆಯೋಜಿಸಿವೆ.