ಹಿಂಪಡೆದ ನೋಟುಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಪ್ರಶ್ನೆ

ಡಿಸೆಂಬರ್ ೩೧ರ ನಂತರ ಹಿಂಪಡೆದ ನೋಟುಗಳನ್ನು ಖಾತೆಗೆ ಜಮಾ ಮಾಡಲು ಜನರಿಗೆ ಕಾನೂನು ಅವಕಾಶ ನೀಡಲಿಲ್ಲವೇಕೆ ಎಂದು ಮಂಗಳವಾರ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್
Updated on: 
ನವದೆಹಲಿ: ಡಿಸೆಂಬರ್ ೩೧ರ ನಂತರ ಹಿಂಪಡೆದ ನೋಟುಗಳನ್ನು ಖಾತೆಗೆ ಜಮಾ ಮಾಡಲು ಜನರಿಗೆ ಕಾನೂನು ಅವಕಾಶ ನೀಡಲಿಲ್ಲವೇಕೆ ಎಂದು ಮಂಗಳವಾರ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. 
ಡಿಸೆಂಬರ್ ೩೧ ರ ಗಡುವಿನಲ್ಲಿ ಜಮಾ ಮಾಡಲು ಸಾಧ್ಯವಾಗದವರಿಗೆ, ಅವಕಾಶ ನೀಡಲು ಅಂತಹ ಕಿಟಕಿಯನ್ನೇಕೆ ತೆರೆಯಲಿಲ್ಲ ಎಂದು ಸರ್ಕಾರಕ್ಕೆ ಮುಖ್ಯ ನ್ಯಾಯಾಧೀಶ ಜಗದೀಶ್ ಸಿಂಗ್ ಖೇಹರ್, ನ್ಯಾಯಾಧೀಶ ಡಿ ವೈ ಚಂದ್ರಚೂಟ್ ಮತ್ತು ನ್ಯಾಯಾಧೀಶ ಸಂಜಯ್ ಕಿಶನ್ ಕೌಲ್ ಅವರುಗಳನ್ನು ಒಳಗೊಂಡ ನ್ಯಾಯಪೀಠ ಪ್ರಶ್ನಿಸದ್ದು, ಇದಕ್ಕೆ ಅಫಿಡವಿಟ್ ಸಲ್ಲಿಸಲು ಎರಡು ವಾರಗಳ ಸಮಯಾವಕಾಶ ನೀಡಿದೆ. 
"ಮತ್ತೊಂದು ಕಿಟಕಿಯನ್ನು (ಕಾನೂನಿನ ಚೌಕಟ್ಟಿನೊಳಗೆ) ತೆರೆಯುವ ಆಯ್ಕೆಯ ಅವಕಾಶವನ್ನು ನೀವು ನೀಡಲಿಲ್ಲವೇಕೆ. ನಿಮ್ಮ ಬಳಿ ೨೦ ಕಾರಣಗಳಿರಬಹುದು" ಎಂದು ಕೋರ್ಟ್ ಹೇಳಿದೆ. ಸಂಸತ್ತು ಸರ್ಕಾರಕ್ಕೆ ಇಂತಹ ಅವಕಾಶ ನೀಡಿತ್ತು ಆದರೆ ಅದನ್ನು ಸರ್ಕಾರ ಬಳಸಲಿಲ್ಲ ಎಂದು ಅಟಾರ್ನಿ ಜನರಲ್ ಮುಕುಲ್ ರೊಹ್ತಾಗಿ ನ್ಯಾಯಾಲಯಕ್ಕೆ ತಿಳಿಸಿದಾಗ ಪೀಠ ಈ ಪ್ರಶ್ನೆ ಕೇಳಿದೆ. 
"ಈ ಆಯ್ಕೆಯನ್ನು ಬಳಸುವುಸು ನನಗೆ (ಸರ್ಕಾರ) ಸರಿ ಕಾಣಲಿಲ್ಲ" ಎಂದು ಅಟಾರ್ನಿ ಜನರಲ್ ನ್ಯಾಯಾಲಯಕ್ಕೆ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com