ರಾಜ್ಯಕೃಷಿ ಸಹಕಾರ ಸಂಘದಲ್ಲಿ ಹಣ ದುರ್ಬಳಕೆ ಆರೋಪ: ಅಮಾನತುಗೊಂಡ ಕಾರ್ಯದರ್ಶಿ ದಾಖಲೆಗಳೊಂದಿಗೆ ಪರಾರಿ, FIR ದಾಖಲು
ಎಸ್.ಸಿ. ಉಮೇಶ್ ಅವರು 2011ರ ಏಪ್ರಿಲ್ 28ರಿಂದ 2026ರ ಫೆಬ್ರವರಿ 26ರವರೆಗೆ ಸಂಘದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಅವರ ಅವಧಿಯಲ್ಲಿ ಹಣ ದುರ್ಬಳಕೆ ನಡೆದಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಸಂಘದ ನಿರ್ದೇಶಕ ಮಂಡಳಿ ಮಾರ್ಚ್ 13ರಂದು ಅವರನ್ನು ಅಮಾನತುಗೊಳಿಸಿತ್ತು.