ದೇಶಗುಜರಾತ್ ಚುನಾವಣೆ: ಮತದಾರರನ್ನು ಓಲೈಸಲು ಸರ್ದಾರ್ ಪಟೇಲ್ ಕಾರ್ಡ್ ಬಳಸಿದ ರಾಹುಲ್; 500 ರೂ. ಗೆ ಎಲ್ಪಿಜಿ ಭರವಸೆ!
ಗುಜರಾತ್ನಲ್ಲಿ ತಮ್ಮ ಪಕ್ಷದ ಪ್ರಚಾರಕ್ಕೆ ಸೋಮವಾರ ಚಾಲನೆ ನೀಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ತಮ್ಮ ಪಕ್ಷವು ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ರೈತರಿಗೆ ಉಚಿತ ವಿದ್ಯುತ್, 10 ಲಕ್ಷ ಹೊಸ ಉದ್ಯೋಗಗಳು ಮತ್ತು 500 ರೂಪಾಯಿಗೆ ಎಲ್ಪಿಜಿ ಸಿಲಿಂಡರ್ಗಳನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ.