• Tag results for Actor Chetan

ವಿವಾದಾತ್ಮಕ ಹೇಳಿಕೆ: ನಟ ಚೇತನ್ ಅಮೆರಿಕಕ್ಕೆ ಗಡಿಪಾರು ಆಗುವ ಸಾಧ್ಯತೆ

ವಿವಾದಾತ್ಮಕ ಹೇಳಿಕೆ, ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಗಳನ್ನು ಹಾಕಿ ಕಾನೂನು ಕಟ್ಟಳೆಗಳ ಸವಾಲುಗಳನ್ನು ಎದುರಿಸುತ್ತಿರುವ ಸ್ಯಾಂಡಲ್ ವುಡ್ ನಟ ಚೇತನ್ ಅಹಿಂಸರನ್ನು ಅಮೆರಿಕಕ್ಕೆ ಗಡಿಪಾರು ಮಾಡುವ ಸಾಧ್ಯತೆಯಿದೆ.

published on : 1st March 2022

ನ್ಯಾಯಾಧೀಶರ ವಿರುದ್ಧ ಟ್ವೀಟ್‌ ಪ್ರಕರಣ: ನಟ ಚೇತನ್​​ಗೆ ಜಾಮೀನು ಮಂಜೂರು

ಹಿಜಾಬ್ ಪ್ರಕರಣದ ವಿಚಾರಣೆ ನಡೆಸುತ್ತಿರುವ ಕರ್ನಾಟಕ ಹೈಕೋರ್ಟ್ ಪೂರ್ಣಪೀಠದಲ್ಲಿ ನ್ಯಾಯಮೂರ್ತಿಯಾಗಿರುವ ಕೃಷ್ಣ ಎಸ್. ದೀಕ್ಷಿತ್ ಅವರ ಬಗ್ಗೆ ಆಕ್ಷೇಪಾರ್ಹ ಟ್ವೀಟ್ ಮಾಡಿದ ಆರೋಪದ ಮೇಲೆ...

published on : 25th February 2022

ನ್ಯಾಯಾಂಗ ನಿಂದನೆ ಪ್ರಕರಣ: ನಟ ಚೇತನ್ ಪೊಲೀಸ್ ವಶಕ್ಕೆ

ನ್ಯಾಯಾಂಗ ನಿಂದನ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಚೇತನ್ ಅಹಿಂಸಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

published on : 22nd February 2022

ಪೇಜಾವರ ಹಿರಿಯ ಶ್ರೀಗಳ ಬಗ್ಗೆ ಹೇಳಿಕೆ: ಹಂಸಲೇಖ ವಿಚಾರಣೆಗೆ ಹಾಜರು, ಪೊಲೀಸ್ ಠಾಣೆ ಬಳಿ ಹೈಡ್ರಾಮಾ; ಒಂದು ತಾಸಿನ ನಂತರ ನಿರ್ಗಮನ

ದಲಿತರ ಮನೆಯಲ್ಲಿ ಬಲಿತರು ಬಂದು ಮಾಂಸಾಹಾರ ಸೇವಿಸುವುದು, ಪೇಜಾವರದ ಹಿರಿಯ ಯತಿಗಳು ದಲಿಕೇರಿಗೆ ಹೋಗುತ್ತಿದ್ದ ಬಗ್ಗೆ ಹೇಳಿಕೆ ನೀಡಿ ತೀವ್ರ ವಿವಾದ ಉಂಟಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದ ಹಿನ್ನೆಲೆಯಲ್ಲಿ ಹಿರಿಯ ಸಂಗೀತ ನಿರ್ದೇಶಕ ಡಾ ಹಂಸಲೇಖ ಗುರುವಾರ ಬಸವನಗುಡಿ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದಾರೆ. 

published on : 25th November 2021

ರಾಜಕಾರಣಿಗಳು ಕನಕದಾಸರನ್ನು ಹೈಜಾಕ್ ಮಾಡಲು ಬಿಡಬಾರದು: ಚೇತನ್ ಟ್ವಿಟ್ ನ ಮರ್ಮವೇನು?

ಕೆಲ ದಿನಗಳ ಹಿಂದಷ್ಟೇ  ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ 'ಜಾತಿ ನಾಯಕ' ಎಂದು ಟ್ವೀಟ್ ಮಾಡಿದ್ದ ನಟ ಚೇತನ್ ಇಂದು, ಅಧಿಕಾರಕ್ಕಾಗಿ ಜಾತಿ ಗುರುತನ್ನು ಬಳಸಿಕೊಳ್ಳುವ ಸ್ವ- ಸೇವಕ ರಾಜಕಾರಣಿಗಳು ಕನಕದಾಸರನ್ನು ಹೈ ಜಾಕ್ ಮಾಡಲು ಬಿಡಬಾರದು ಎಂದು ಟ್ವೀಟ್ ಮಾಡಿದ್ದಾರೆ.

published on : 7th September 2021

ಸಿದ್ದರಾಮಯ್ಯ 'ಜಾತಿ ನಾಯಕ' ಚರ್ಚೆಗೆ ಗ್ರಾಸವಾದ ನಟ ಚೇತನ್ ಹೇಳಿಕೆ!

ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಮುಂದಿನ ಮುಖ್ಯಮಂತ್ರಿ ಯಾರಾಗಬಹುದು ಎಂಬ ಚರ್ಚೆ ಶುರುವಾಗಿದ್ದು, ಸಿದ್ದರಾಮಯ್ಯ ಪರ ಹೆಚ್ಚು ಒಲವಿದೆ ಎನ್ನಲಾಗುತ್ತಿದೆ. ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ನಟ ಹೋರಾಟಗಾರ ಚೇತನ್  ಸಿದ್ದರಾಮಯ್ಯ ಕುರಿತು ನೀಡಿರುವ ಹೇಳಿಕೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

published on : 5th September 2021

ಕುಮಾರಸ್ವಾಮಿಯ ಕ್ರಾಂತಿಕಾರಿ ಮಾತುಗಳೆಲ್ಲ 'ನಾನ್ ಸೆನ್ಸ್' ಎಂದ ನಟ ಚೇತನ್

ರಾಜ್ಯದಲ್ಲಿ ಐದು ವರ್ಷ ಸರ್ಕಾರ ನಡೆಸುವ ಅವಕಾಶ ಸಿಕ್ಕರೆ ಕ್ರಾಂತಿಕಾರಿ ಬದಲಾವಣೆ ತರುತ್ತೇನೆ ಎಂಬ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್. ಡಿ. ಕುಮಾರಸ್ವಾಮಿ ಅವರ ಮಾತುಗಳು ನಾನ್ ಸೆನ್ಸ್ ಎಂದು ನಟ ಚೇತನ್ ಹೇಳಿದ್ದಾರೆ.

published on : 22nd August 2021

'ನನ್ನ ಹೋರಾಟ ಅಸಮಾನತೆ, ಬೇಧ-ಭಾವದ ವಿರುದ್ಧ, ಇದನ್ನು ನಿಲ್ಲಿಸುವುದಿಲ್ಲ, ಮುಂದುವರಿಸುತ್ತೇನೆ': ನಟ ಚೇತನ್

ನಾನು ಯಾವ ಜಾತಿ-ಜನಾಂಗದ ವಿರೋಧಿಯಲ್ಲ, ಹುಟ್ಟಿನ ಆಧಾರದ ಮೇಲೆ ಇವರು ಶ್ರೇಷ್ಠ, ಅವರು ಕನಿಷ್ಠ ಎಂಬ ಮನೋಸ್ಥಿತಿ, ವ್ಯವಸ್ಥೆ ವಿರುದ್ಧ ಮಾತ್ರ ನನ್ನ ಹೋರಾಟ, ಅನೇಕರು ಈ ವ್ಯವಸ್ಥೆಯೊಳಗೆ ಪಾಲುದಾರರಾಗಿದ್ದಾರೆ ಎಂದು ನಟ ಚೇತನ್ ಹೇಳಿದ್ದಾರೆ.

published on : 16th June 2021

ಬ್ರಾಹ್ಮಣರ ಅವಹೇಳನ: ನಟ ಚೇತನ್ ಪೊಲೀಸ್ ವಿಚಾರಣೆಗೆ ಹಾಜರು

ಬ್ರಾಹ್ಮಣ್ಯ ಹಾಗೂ ಬ್ರಾಹ್ಮಣರ ಕುರಿತು ಅವಹೇಳನಾಕಾರಿ ಹೇಳಿಕೆ ನೀಡಿದ ಆರೋಪದಡಿ 'ಆ ದಿನಗಳು' ಚಿತ್ರ ಖ್ಯಾತಿಯ ಚೇತನ್ ಬುಧವಾರ ವಿಚಾರಣೆಗೆ ಹಾಜರಾಗಿದ್ದಾರೆ.

published on : 16th June 2021

ಬ್ರಾಹ್ಮಣ ವಿರೋಧಿ ಹೇಳಿಕೆ ನೀಡಿದ ನಟ ಚೇತನ್ ನನ್ನು ಅಮೆರಿಕಾಗೆ ಗಡಿಪಾರು ಮಾಡಿ: ವಿಎಚ್‌ಪಿ ಕಾರ್ಯಕರ್ತರ ಮನವಿ

ಬ್ರಾಹ್ಮಣ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಕನ್ನಡ ನಟ ಚೇತನ್ ವಿರುದ್ಧ ಎರಡು ಎಫ್‌ಐಆರ್ ದಾಖಲಾದ ನಂತರ ಅಮೆರಿಕಾದ ನಾಗರಿಕತ್ವ ಹೊಂದಿರುವ ಚೇತನ್ ಅವರನ್ನು ಒತ್ತಾಯಪೂರ್ವಕ ಗಡಿಪಾರು ಮಾಡಬೇಕೆಂದು ವಿಎಚ್‌ಪಿ ಕಾರ್ಯಕರ್ತರೊಬ್ಬರು ಮನವಿ ಸಲ್ಲಿಸಿದ್ದಾರೆ.

published on : 14th June 2021

ನಟ ಚೇತನ್ ಬ್ರಾಹ್ಮಣ ಸಮುದಾಯದ ಕ್ಷಮೆ ಕೇಳಬೇಕು: ಮಂಡಳಿ ಅಧ್ಯಕ್ಷರಿಂದ ನಗರ ಪೊಲೀಸ್ ಆಯುಕ್ತರಿಗೆ ದೂರು

ನಟ ಚೇತನ್ ನೀಡಿರುವ ಹೇಳಿಕೆ ಈಗ ಭಾರೀ ವಿವಾದ ಸೃಷ್ಟಿಸಿದೆ. ಬ್ರಾಹ್ಮಣ ಸಮುದಾಯ ವಿರುದ್ಧ ಅವರು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ, ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನಗರ ಪೊಲೀಸ್ ಆಯುಕ್ತರನ್ನು ಒತ್ತಾಯಿಸಿದ್ದೇನೆ ಎಂದು ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ಹೇಳಿದ್ದಾರೆ.

published on : 9th June 2021

ಭೂ ಕಾಯ್ದೆ ಅಂಗೀಕಾರ: ದುಃಖದ ದಿನ ಎಂದ ನಟ ಚೇತನ್‌, ದೇವೇಗೌಡ, ಕುಮಾರಸ್ವಾಮಿ ವಿರುದ್ಧವೂ ಆಕ್ರೋಶ

ರಾಜ್ಯ ಸರ್ಕಾರ ಮಂಡಿಸಿದ ಭೂ ಸುಧಾರಣಾ ಕಾಯ್ದೆ(ಎರಡನೇ ತಿದ್ದುಪಡಿ)–2020 ಮಸೂದೆಯು ವಿಧಾನ ಪರಿಷತ್‌ನಲ್ಲಿ ಜೆಡಿಎಸ್‌ ಬೆಂಬಲದೊಂದಿಗೆ ಅಂಗೀಕಾರ..

published on : 9th December 2020

ರಾಶಿ ಭವಿಷ್ಯ