• Tag results for Dinesh Gundu rao

ಅನರ್ಹತೆ ಎತ್ತಿ ಹಿಡಿದ ಸುಪ್ರೀಂಕೋರ್ಟ್ ತೀರ್ಪನ್ನು ಕಾಂಗ್ರೆಸ್ ಸ್ವಾಗತಿಸುತ್ತದೆ: ದಿನೇಶ್ ಗುಂಡೂರಾವ್

 ಶಾಸಕರ ಅನರ್ಹತೆಯನ್ನು ಸುಪ್ರೀಂಕೋರ್ಟ್‌ ಎತ್ತಿಹಿಡಿದಿರುವುದರಿಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ

published on : 13th November 2019

ಅಯೋಧ್ಯೆ ತೀರ್ಪನ್ನು ಬಿಜೆಪಿ ರಾಜಕೀಯಗೊಳಿಸುವುದಿಲ್ಲ ಎಂದು ಭಾವಿಸುತ್ತೇವೆ: ದಿನೇಶ್ ಗುಂಡೂ ರಾವ್ 

ಅಯೋಧ್ಯೆ ಭೂ ವಿವಾದ ಕುರಿತು ಸುಪ್ರೀಂ ಕೋರ್ಟ್ ಕೊಟ್ಟ ತೀರ್ಪನ್ನು ಸ್ವಾಗತಿಸಿದ ರಾಜ್ಯ ಕಾಂಗ್ರೆಸ್ ಘಟಕ ಬಿಜೆಪಿ ಇದನ್ನು ರಾಜಕೀಯ ಲಾಭ ಪಡೆದುಕೊಳ್ಳಲು ಬಳಸಿಕೊಳ್ಳದಿರಲಿ ಎಂದು ಹೇಳಿದೆ.

published on : 10th November 2019

ಆಡಿಯೋ ಪ್ರಕರಣ, ಆಡಳಿತ ವೈಫಲ್ಯ ಮುಂದಿಟ್ಟು ಬಿಜೆಪಿ ವಿರುದ್ಧ ಕಾಂಗ್ರೆಸ್ ನಿಂದ ಸಾಲು ಸಾಲು ಪ್ರತಿಭಟನೆ 

ಆಪರೇಷನ್ ಕಮಲ ಮೂಲಕ ಮೈತ್ರಿ ಸರ್ಕಾರ ಪತನಗೊಳಿಸಿರುವುದನ್ನು ವಿರೋಧಿಸಿ ಹಾಗೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಜನವಿರೋಧಿ ನೀತಿ ಖಂಡಿಸಿ ಕಾಂಗ್ರೆಸ್, ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಸಾಲು ಸಾಲು ಪ್ರತಿಭಟನೆಗೆ ಸಜ್ಜಾಗಿದೆ.

published on : 3rd November 2019

ಅನರ್ಹ ಶಾಸಕರಿಗೆ ಕಾಂಗ್ರೆಸ್ ಬಾಗಿಲು ಬಂದ್ : ಕೆಪಿಸಿಸಿ  ಅಧ್ಯಕ್ಷ ದಿನೇಶ್ ಗುಂಡೂರಾವ್ ಸ್ಪಷ್ಟನೆ

ಅನರ್ಹಗೊಂಡಿರುವ  15 ಶಾಸಕರಿಗೆ  ಕಾಂಗ್ರೆಸ್ ಪಕ್ಷದ  ಬಾಗಿಲು ಮುಚ್ಚಿದ್ದು,  ಅವರನ್ನು ಪಕ್ಷಕ್ಕೆ  ಮತ್ತೆ ಸೇರಿಸಿಕೊಳ್ಳುವ ಪ್ರಶ್ನೇಯೇ ಇಲ್ಲ  ಎಂದು  ರಾಜ್ಯ ಪ್ರದೇಶ ಕಾಂಗ್ರೆಸ್  ಸಮಿತಿ -ಕಪಿಸಿಸಿ  ಅಧ್ಯಕ್ಷ  ದಿನೇಶ್ ಗುಂಡೂರಾವ್  ಇಂದು ಸ್ಪಷ್ಟಪಡಿಸಿದ್ದಾರೆ

published on : 26th October 2019

ದಿನೇಶ್ ಗುಂಡೂರಾವ್ ಅಧ್ಯಕ್ಷಗಿರಿಯಲ್ಲಿ ಕಾಂಗ್ರೆಸ್ ಸಾಯೋ ಸ್ಥಿತಿ ತಲುಪಿದೆ: ಡಾ. ಕೆ. ಸುಧಾಕರ್

ರಾಜ್ಯದಲ್ಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ದಿನೇಶ ಗುಂಡೂರಾವ್ ಪದಗ್ರಹಣ ಮಾಡಿದ ನಂತರ ರಾಜ್ಯಮಟ್ಟದಲ್ಲಿ ಕಾಂಗ್ರೆಸ್ ಮರಣಶಯ್ಯೆಯಲ್ಲಿದೆ ಎಂದು ಚಿಕ್ಕಬಳ್ಳಾಪುರದ ಅನರ್ಹ ಶಾಸಕ ಡಾ.ಕೆ. ಸುಧಾಕರ್ ಟೀಕಿಸಿದ್ದಾರೆ.

published on : 19th October 2019

ಚಾಮುಂಡಿಯ ಪುಣ್ಯಕ್ಷೇತ್ರವನ್ನು ಅಪವಿತ್ರಗೊಳಿಸಬೇಡಿ, ನಿಮ್ಮ ಯೋಗ್ಯತೆ ಸಾಬೀತುಪಡಿಸಿ: ದಿನೇಶ್ ಗುಂಡೂರಾವ್

ಜೆಡಿಎಸ್ ಅನರ್ಹ ಶಾಸಕ ಎಚ್ . ವಿಶ್ವನಾಥ್ ಹಾಗೂ  ಶಾಸಕ ಸಾರಾ ಮಹೇಶ್ ನಡುವಿನ ಆರೋಪ, ಪ್ರತ್ಯಾರೋಪಗಳು ತಾರಕಕ್ಕೇರಿರುವಂತೆ  ನಾಡ  ದೇವತೆ ತಾಯಿ ಚಾಮುಂಡೇಶ್ವರಿ ದೇಗುಲದ ಬಳಿ ಆಣೆ ಪ್ರಮಾಣ ಮಾಡುವಂತೆ ಪರಸ್ಪರ ಸವಾಲ್ ಹಾಕಿದ್ದಾರೆ.

published on : 17th October 2019

ಹುಣಸೂರು  ಜಿಲ್ಲಾ ರಚನೆ ವಿಶ್ವನಾಥರ ಎಲೆಕ್ಷನ್ ಗಿಮಿಕ್- ದಿನೇಶ್ ಗುಂಡೂರಾವ್ 

ಮೈಸೂರು ಜಿಲ್ಲೆ ವಿಭಜಿಸಿ ಹುಣಸೂರನ್ನು ಪ್ರತ್ಯೇಕ ಜಿಲ್ಲೆಯಾಗಿ ವಿಂಗಡಿಸಬೇಕು ಎಂಬ ಅನರ್ಹ ಶಾಸಕ ಹೆಚ್ ವಿಶ್ವನಾಥ್ ಹೇಳಿಕೆಯನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಟುವಾಗಿ ವಿರೋಧಿಸಿದ್ದಾರೆ.

published on : 14th October 2019

ಬಿಜೆಪಿಯಿಂದ ಕೇಂದ್ರೀಯ ಸಂಸ್ಥೆಗಳ ದುರುಪಯೋಗ: ದಿನೇಶ್ ಗುಂಡೂರಾವ್

ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಅವರ ನಿವಾಸದ ಮೇಲೆ ಐಟಿ ದಾಳಿ ನಡೆದಿದೆ. ಸರ್ಕಾರ ಕೇಂದ್ರೀಯ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ಪ್ರತಿಪಕ್ಷವನ್ನು ಹಣಿಯಲು ಬಿಜೆಪಿ ಪ್ರಯತ್ನಿಸುತ್ನಿದೆ. ಜನರು ಇದನ್ನು ಯಾವತ್ತೂ ಒಪ್ಪುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

published on : 11th October 2019

ಸಂದರ್ಶನ: ಪಕ್ಷ ಉಳಿಸಲು ಸಿದ್ದು, ಗುಂಡೂರಾವ್ ಕಾರ್ಯಶೈಲಿ ಸರಿಪಡಿಸಿಕೊಳ್ಳಲಿ; ಮಾಜಿ ಸಚಿವ ಮುನಿಯಪ್ಪ

ರಾಜ್ಯ ಕಾಂಗ್ರೆಸ್ ಹಿರಿಯ ನಾಯಕರು ಪಕ್ಷದ ಎಲ್ಲಾ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದರಲ್ಲಿ ವಿಫಲರಾಗಿರುವ ಹಿನ್ನಲೆಯಲ್ಲಿ ಕೇಂದ್ರ ಮಾಜಿ ಸಚಿವ ಕೆ.ಹೆಚ್.ಮುನಿಯಪ್ಪ ಅವರು ತೀವ್ರವಾಗಿ ಕಿಡಿಕಾರಿದ್ದಾರೆ. 

published on : 29th September 2019

ಅನರ್ಹ ಶಾಸಕರ ಪರಿಸ್ಥಿತಿ ಬದಲಾಗಿಲ್ಲ, ಸುಪ್ರೀಂ ತೀರ್ಪಿಗೆ ಸ್ವಾಗತ: ದಿನೇಶ್ ಗುಂಡೂರಾವ್

 ಸುಪ್ರಿಂ ಕೋರ್ಟ್ ತೀರ್ಪು ನ್ನು ನಾವು ಸ್ವಾಗತ ಮಾಡುತ್ತೇವೆ. ಅನರ್ಹರು, ಅಸಹಾಯಕರು, ಅತೃಪ್ತರು ಶಾಸಕರ ಪರಿಸ್ಥಿತಿ ಅದೇ ಸ್ಥಿತಿಯಲ್ಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

published on : 26th September 2019

ಉಪಚುನಾವಣೆ ಸಮರ: ಅಭ್ಯರ್ಥಿಗಳ ಆಯ್ಕೆಯಲ್ಲಿ ಕಾಂಗ್ರೆಸ್'ನಿಂದ ಎಚ್ಚರಿಕೆಯ ಹೆಜ್ಜೆ

ಉಪ ಚುನಾವಣೆಗೆ ಕಾಂಗ್ರೆಸ್ ಪಕ್ಷ ಸಂಭವನೀಯ ಅಭ್ಯರ್ಥಿಗಳ ಪಟ್ಟೆ ಅಖೈರುಗೊಳಿಸಲು ಮಹತ್ವದ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆಯನ್ನು ಗುರುವಾರ ಬೆಂಗಳೂರಿನಲ್ಲಿ ನಡೆಸಲಿದ್ದು, ತಮ್ಮದೇ ಪಕ್ಷದ ನಾಯಕರು ಈಗಾಗಲೇ ಕೈಕೊಟ್ಟ ಹಿನ್ನಲೆಯಲ್ಲಿ ಸಾಕಷ್ಟು ಸಮಸ್ಯೆಗಳನ್ನು ಅನುಭವಿಸಿರುವ ಕಾಂಗ್ರೆಸ್ ಇದೀಗ ಅಭ್ಯರ್ಥಿಗಳ ಆಯ್ಕೆಯಲ್ಲಿ ಎಚ್ಚರಿಕೆ ಹೆಜ್ಜೆ ಇಡಲು ಆರಂಭಿಸಿದೆ.

published on : 26th September 2019

ಉಪಚುನಾವಣೆಗೆ ಸಿದ್ದವಾಗಿದ್ದೇವೆ, ಎಲ್ಲಾ 15 ಕ್ಷೇತ್ರಗಳಲ್ಲಿ ಗೆಲುವು ನಮ್ಮದಾಗಲಿದೆ: ದಿನೇಶ್ ಗುಂಡೂರಾವ್

ಉಪಚುನಾವಣೆ ಎದುರಿಸಲು ಕಾಂಗ್ರೆಸ್ ಸಿದ್ಧವಾಗಿದ್ದು, ಕ್ಷೇತ್ರದ ಜನತೆ ನ್ಯಾಯದ ಪರ ಮತ ಚಲಾವಣೆ ಮಾಡಲಿದ್ದು ನಮಗೆ ಗೆಲುವು ಸಿಗಲಿದೆ ಎಂಬ ವಿಶ್ವಾಸವನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವ್ಯಕ್ತಪಡಿಸಿದ್ದಾರೆ.

published on : 21st September 2019

'ನಾಯಕರ ಕೆಟ್ಟ ನಡವಳಿಕೆಯಿಂದ ಕಾಂಗ್ರೆಸ್- ಜೆಡಿಎಸ್ ಎದುರು ಭಿಕ್ಷಾಪಾತ್ರೆ ಹಿಡಿದು ಹೋಗುವಂತಾಯಿತು'

ವೈಯಕ್ತಿಕ ಲಾಲಸೆ, ಕೆಟ್ಟ ನಿರ್ಧಾರಗಳಿಂದ ಕಾಂಗ್ರೆಸ್ ನಾಯಕರಿಗೆ ಒಂದು ಸಣ್ಣ ಪಕ್ಷದ ಎದುರು ಭಿಕ್ಷೆ ಬೇಡುವ ಪರಿಸ್ಥಿತಿ ಬಂದಿತ್ತು ಎಂದು ಕಾಂಗ್ರೆಸ್ ಅನರ್ಹ ಶಾಸಕ ಡಾ.ಕೆ ಸುಧಾಕರ್ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಗೆ ತಿರುಗೇಟು ನೀಡಿದ್ದಾರೆ.

published on : 18th September 2019

ಕಾಂಗ್ರೆಸ್ ನಲ್ಲಿ ರಾಜರಂತಿದ್ದ ಅನರ್ಹರು ಬಿಜೆಪಿ ಮುಂದೆ ಭಿಕ್ಷುಕರಾಗಿದ್ದಾರೆ: ದಿನೇಶ್ ಗುಂಡೂರಾವ್

ಕಾಂಗ್ರೆಸ್ ಪಕ್ಷದಲ್ಲಿ ರಾಜ ಮರ್ಯಾದೆ ಹೊಂದಿದ್ದ ಅನರ್ಹ ಶಾಸಕರು ಇದೀಗ ಬಿಜೆಪಿಯ ಮುಂದೆ ಭಿಕ್ಷುಕರಾಗಿ ಪರಿವರ್ತನೆಯಾಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಲೇವಡಿ ಮಾಡಿದ್ದಾರೆ.  

published on : 17th September 2019

ದೇವೇಗೌಡರ ಆರೋಪದಲ್ಲಿ ಹುರುಳಿಲ್ಲ- ದಿನೇಶ್ ಗುಂಡೂರಾವ್

ಮೈತ್ರಿ ಸರ್ಕಾರ ಉರುಳಲು ಸಿದ್ದರಾಮಯ್ಯ ಕಾರಣ ಎಂದು ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಮಾಡಿರುವ ಆರೋಪವನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಲ್ಲಗಳೆದಿದ್ದಾರೆ.

published on : 23rd August 2019
1 2 3 4 >