• Tag results for FIR

ಉಜ್ಜೈನ್: ಟ್ರಕ್ ನಲ್ಲಿ ಕಾಣಿಸಿಕೊಂಡ ಬೆಂಕಿ. 13 ಹಸುಗಳು ಸಜೀವ ದಹನ!

13 ಹಸುಗಳನ್ನು ಕೊಂಡೊಯ್ಯುತ್ತಿದ್ದ ಟ್ರಕ್ ಬೆಂಕಿಗೆ ಹೊತ್ತಿದ್ದು, ಹಸುಗಳು ಸಜೀವ ದಹನವಾಗಿವೆ. 

published on : 22nd May 2022

'ವಿಕ್ರಾಂತ್ ರೋಣ' ಮೊದಲ ಲಿರಿಕಲ್ ಸಾಂಗ್ ಬಿಡುಗಡೆಗೆ ದಿನಗಣನೆ

ಕಿಚ್ಚ ಸುದೀಪ್ ನಟಿಸಿರುವ ಬಹುನಿರೀಕ್ಷಿತ ವಿಕ್ರಾಂತ್ ರೋಣ ಚಿತ್ರತಂಡದಿಂದ ಮತ್ತೊಂದು ಬಿಗ್ ಅಪ್ ಡೇಟ್ ಸಿಕ್ಕಿದೆ. ಈಗಾಗಲೇ ಸಿನಿಮಾ ಫೋಸ್ಟರ್, ಫಸ್ಟ್ ಲುಕ್ , ಟೀಸರ್ ನಿಂದ ಗಮನ ಸೆಳೆದಿರುವ ವಿಕ್ರಾಂತ್ ರೋಣ ಚಿತ್ರದ ಮೊದಲ ಲಿರಿಕಲ್ ಸಾಂಗ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

published on : 21st May 2022

ಶಿಗ್ಗಾಂವಿ ಥಿಯೇಟರ್ ನಲ್ಲಿ ಗುಂಡಿನ ದಾಳಿ: ತಿಂಗಳ ನಂತರ ಆರೋಪಿ ಬಂಧನ

ಹಾವೇರಿ ಜಿಲ್ಲೆಯ ಶಿಗ್ಗಾಂವಿಯ ಥಿಯೇಟರ್ ನಲ್ಲಿ ಗುಂಡಿನ ದಾಳಿ ಪ್ರಕರಣದ ಆರೋಪಿಯನ್ನು 30 ದಿನಗಳ ನಂತರ ಗುರುವಾರ ಬೆಳಗ್ಗೆ ಹಾವೇರಿ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಮಂಜುನಾಥ್ ಆಲಿಯಾಸ್ ಮಲ್ಲಿಕ್ ಪಾಟೀಲ್ ಘಟನೆ ನಡೆದ ಬಳಿಕ ತಲೆಮರೆಸಿಕೊಂಡಿದ್ದ. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದಲ್ಲಿ ಆತನನ್ನು ಬಂಧಿಸಲಾಗಿದೆ.

published on : 20th May 2022

ಮನುಷ್ಯನಾಗಿ ಅದು ನನ್ನ ಕರ್ತವ್ಯವಾಗಿತ್ತು: ಮುಂಡ್ಕಾ ಅಗ್ನಿ ದುರಂತದಲ್ಲಿ 50 ಮಂದಿಯನ್ನು ರಕ್ಷಿಸಿದ ಕ್ರೇನ್ ಆಪರೇಟರ್ 

ಕಳೆದ ವಾರ ದೆಹಲಿಯ ಮುಂಡ್ಕಾದಲ್ಲಿ ಬೆಂಕಿಗೆ ಆಹುತಿಯಾಗಿದ್ದ ಕಟ್ಟಡದಲ್ಲಿ ಸಿಲುಕಿದ್ದ ಹಲವು ಮಂದಿಗೆ ಕ್ರೇನ್ ಆಪರೇಟರ್ ದಯಾನಂದ್ ತಿವಾರಿ ಆಪತ್ಬಾಂಧವನಂತೆ ಕಂಡಿದ್ದರು. 

published on : 19th May 2022

ದೆಹಲಿಯಲ್ಲಿ ಮತ್ತೆ ಅಗ್ನಿ ಅವಘಡ: ಓರ್ವ ಸಜೀವ ದಹನ, 6 ಮಂದಿಗೆ ಗಾಯ

27 ಮಂದಿಯನ್ನು ಬಲಿ ಪಡೆದ ವಾಣಿಜ್ಯ ಕಟ್ಟಡವೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತ ಮಾಸುವ ಮುನ್ನವೇ ರಾಷ್ಟ್ರ ರಾಜಧಾನಿಯಲ್ಲಿ ಗುರುವಾರ ಮತ್ತೊಂದು ಅಗ್ನಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಓರ್ವ ಸಜೀವ ದಹನವಾಗಿದ್ದು,

published on : 19th May 2022

ಕೊಡಗು: ಹಲವು ಅನುಮಾನ ಹುಟ್ಟಿಸಿದ ಗೋಣಿಕೊಪ್ಪಲು ಸರ್ಕಲ್ ಇನ್ಸ್ ಪೆಕ್ಟರ್ ಎತ್ತಂಗಡಿ!

ಗೋಣಿಕೊಪ್ಪಲು ಸರ್ಕಲ್ ಇನ್ಸ್ ಪೆಕ್ಟರ್ ದಿಢೀರ್ ಎತ್ತಗಂಡಿ ಕೊಡಗು ಜಿಲ್ಲೆಯಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ. ಪೊನ್ನಂಪೇಟೆಯ ಶಾಲೆಯಲ್ಲಿ ಬಂದೂಕು ತರಬೇತಿ ನಡೆಸುತ್ತಿದ್ದ ಭಜರಂಗ ದಳ ಕಾರ್ಯಕರ್ತರನ್ನು ಪ್ರಶ್ನಿಸಿದ್ದಕ್ಕೆ ವೃತ್ತ ನಿರೀಕ್ಷಕರನ್ನು ವರ್ಗಾವಣೆ ಮಾಡಲಾಗಿದೆ ಎಂಬಂತಹ ಮಾತುಗಳು ಕೇಳಿಬರುತ್ತಿವೆ.

published on : 19th May 2022

ಎಲ್ಓಸಿ ಬಳಿ ಕಾಡ್ಗಿಚ್ಚು: ಅಕ್ರಮ ನುಸುಳುಕೋರರ ತಡೆಗೆ ಹುದುಗಿಸಿಟ್ಟಿದ್ದ ಹಲವು ನೆಲಬಾಂಬ್ ಸ್ಫೋಟ

ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ ಕಾಣಿಸಿಕೊಂಡ ಕಾಡ್ಗಿಚ್ಚು ಹಲವಾರು ನೆಲಬಾಂಬ್ ಸ್ಫೋಟಗೊಳ್ಳುವಂತೆ ಮಾಡಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. 

published on : 18th May 2022

ಫ್ಯಾಟ್ ಸರ್ಜರಿ ವೇಳೆ ಕನ್ನಡದ ನಟಿ ಚೇತನಾ ರಾಜ್ ಸಾವು: ಕ್ಲಿನಿಕ್ ವಿರುದ್ಧ ಕೇಸ್ ದಾಖಲು

ಕನ್ನಡದ ಕಿರುತೆರೆ ನಟಿಯೊಬ್ಬರು ‘ಫ್ಯಾಟ್ ಮುಕ್ತ’ ಕಾಸ್ಮೆಟಿಕ್ ಸರ್ಜರಿ ವೇಳೆ ಮೃತಪಟ್ಟಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಂಗಳವಾರ ಕ್ಲಿನಿಕ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.

published on : 17th May 2022

ಮಿಂಟೋ ಪ್ರಕರಣ: ಔಷಧ ಸಂಸ್ಥೆಗಳ ವಿರುದ್ಧದ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್

ನಗರದ ಮಿಂಟೋ ಆಸ್ಪತ್ರೆಯಲ್ಲಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಒಳಗಾದ ರೋಗಿಗಳಲ್ಲಿ ಕಣ್ಣಿನ ಸೋಂಕು ಕಾಣಿಸಿಕೊಂಡ ನಂತರ ಕಳಪೆ ಗುಣಮಟ್ಟದ ಔಷಧಿಗಳ ಉತ್ಪಾದನೆ ಆರೋಪದಲ್ಲಿ ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಕಾಯ್ದೆಯಡಿಯಲ್ಲಿ ಔಷಧಿ ಕಂಪನಿಗಳ ಮೂವರು ಪಾಲುದಾರರು, ಮಾಲೀಕರ ವಿರುದ್ಧ ಆರಂಭಿಸಲಾದ ಕ್ರಮವನ್ನು  ಹೈಕೋರ್ಟ್ ರದ್ದುಗೊಳಿಸಿದೆ.

published on : 17th May 2022

ನವದೆಹಲಿ: ಸಂಸತ್ ಭವನದ ಬಳಿ ಬೆಂಕಿ, ಅದೃಷ್ಟವಶಾತ್ ಕಾರ್ಮಿಕರು ಪಾರು!

ಸೆಂಟ್ರಲ್ ದೆಹಲಿಯ ಸಂಸತ್ ಭವನದ ಬಳಿ ಸೆಂಟ್ರಲ್ ವಿಸ್ತಾ ಯೋಜನೆಯಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರಿಗಾಗಿ ನಿರ್ಮಿಸಲಾಗಿರುವ ಮೂರು ತಾತ್ಕಾಲಿಕ ವಸತಿ ಕೇಂದ್ರಗಳಲ್ಲಿ ಸೋಮವಾರ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

published on : 16th May 2022

27 ಮಂದಿ ಬಲಿ ಪಡೆದಿದ್ದ ಮುಂಡ್ಕಾ ಅಗ್ನಿ ದುರಂತ ಪ್ರಕರಣ: ಪರಾರಿಯಾಗಿದ್ದ ಕಟ್ಟಡ ಮಾಲೀಕನ ಬಂಧನ

27 ಮಂದಿಯ ಸಜೀವ ದಹನಕ್ಕೆ ಕಾರಣವಾದ ಪಶ್ಚಿಮ ದೆಹಲಿಯ ಮುಂಡ್ಕಾ ಮೆಟ್ರೋ ನಿಲ್ದಾಣದ ಬಳಿಯ ಕಟ್ಟಡದಲ್ಲಿ ಸಂಭವಿಸಿದ ಬೆಂಕಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸರು ಕಟ್ಟಡದ ಮಾಲೀಕನನ್ನು ಬಂಧನಕ್ಕೊಳಪಡಿಸಿದ್ದಾರೆಂದು ಭಾನುವಾರ ತಿಳಿದುಬಂದಿದೆ.

published on : 15th May 2022

ಸಲ್ಮಾನ್ ಖಾನ್ ಅಭಿನಯದ ' ಕಬಿ ಈದ್, ಕಬಿ ದಿವಾಲಿ' ಫಸ್ಟ್ ಲುಕ್ ಬಿಡುಗಡೆ

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ಅಭಿನಯದ ಬಹು ನಿರೀಕ್ಷಿತ ಹೊಸ ಸಿನಿಮಾ 'ಕಬಿ ಈದ್ , ಕಬಿ ದಿವಾಲಿ' ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ.

published on : 14th May 2022

ದೆಹಲಿ ಅಗ್ನಿ ಅವಘಡಕ್ಕೆ 27 ಮಂದಿ ಬಲಿ: ಹಲವರು ನಾಪತ್ತೆ, ಇಬ್ಬರ ಬಂಧನ, ಕಟ್ಟಡ ಮಾಲೀಕ ಪರಾರಿ

ರಾಜಧಾನಿ ನವದೆಹಲಿಯ ಮೂರು ಮಹಡಿಯ ವಾಣಿಜ್ಯ ಕಟ್ಟಡವೊಂದರಲ್ಲಿ ಶುಕ್ರವಾರ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ 27 ಮಂದಿ ಸಜೀವ ದಹನವಾಗಿದ್ದು, ದುರ್ಘಟನೆಯಲ್ಲಿ ಹಲವರು ನಾಪತ್ತೆಯಾಗಿದ್ದಾರೆಂದು ತಿಳಿದುಬಂದಿದೆ.

published on : 14th May 2022

ಆ್ಯಸಿಡ್ ದಾಳಿ ಪ್ರಕರಣ: ಮೂತ್ರ ವಿಸರ್ಜನೆ ನೆಪದಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದ ನಾಗನಿಗೆ ಪೊಲೀಸರ ಗುಂಡೇಟು

ಮೂತ್ರವಿಸರ್ಜನೆ ನೆಪದಲ್ಲಿ ಪೊಲೀಸರ‌ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಆ್ಯಸಿಡ್ ದಾಳಿ ಪ್ರಕರಣದ ಆರೋಪಿ ನಾಗನ ಕಾಲಿಗೆ ಕಾಮಾಕ್ಷಿಪಾಳ್ಯ ಪೊಲೀಸರು ಗುಂಡು ಹೊಡೆದಿರುವ ಘಟನೆ ಶನಿವಾರ ನಡೆದಿದೆ.

published on : 14th May 2022

ಜಮ್ಮು: ಹೊತ್ತಿ ಉರಿದ ವೈಷ್ಣೋದೇವಿ ಯಾತ್ರಾರ್ಥಿಗಳ ಬಸ್, ನಾಲ್ವರು ಸಜೀವ ದಹನ, 22 ಮಂದಿಗೆ ಗಾಯ

ಜಮ್ಮುವಿನ ಕತ್ರಾ ಬಳಿ ವೈಷ್ಣೋದೇವಿ ಯಾತ್ರಾರ್ಥಿಗಳು ತೆರಳುತ್ತಿದ್ದ ಬಸ್‌ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ನಾಲ್ವರು ಪ್ರಯಾಣಿಕರು ಸಾವನ್ನಪ್ಪಿರುವ ಘೋರ ದುರಂತ ಶುಕ್ರವಾರ ಸಂಭವಿಸಿದೆ. ದುರ್ಘಟನೆಯಲ್ಲಿ ಕನಿಷ್ಠ 22 ಮಂದಿ ಗಾಯಗೊಂಡಿದ್ದಾರೆ.

published on : 13th May 2022
1 2 3 4 5 6 > 

ರಾಶಿ ಭವಿಷ್ಯ