• Tag results for Facebook

ದತ್ತಾಂಶ ಸುರಕ್ಷತೆ: ಕೇಂದ್ರ, ಫೇಸ್‌ಬುಕ್‌, ಗೂಗಲ್‌, ಅಮೇಜಾನ್‌, ವಾಟ್ಸ್‌ಆ್ಯಪ್‌ಗೆ ಸುಪ್ರೀಂ ನೋಟಿಸ್‌

ಆನ್‌ಲೈನ್‌ ಪಾವತಿಗಾಗಿ ಭಾರತೀಯ ಪ್ರಜೆಗಳಿಂದ ಸಂಗ್ರಹಿಸಿದ ದತ್ತಾಂಶದ ಸುರಕ್ಷತೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ಕೇಂದ್ರ ಸರ್ಕಾರ, ಗೂಗಲ್‌, ಫೇಸ್‌ಬುಕ್‌, ಅಮೇಜಾನ್‌ ಮತ್ತು ವಾಟ್ಸ್‌ ಆ್ಯಪ್‌ನಂತಹ ಅಂತರ್ಜಾಲ ಬೃಹತ್ ಸಂಸ್ಥೆಗಳಿಗೆ ಸುಪ್ರೀಂ ಕೋರ್ಟ್ ಗುರುವಾರ ನೋಟಿಸ್ ಜಾರಿ ಮಾಡಿದೆ.

published on : 15th October 2020

ಪವರ್ ಸುದ್ದಿ ವಾಹಿನಿ ಪ್ರಸಾರ ಬಂದ್: ಫೇಸ್‌ಬುಕ್ ಲೈವ್‌ನಲ್ಲಿ ಕಣ್ಣೀರಿಟ್ಟ ರಹಮಾನ್

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪುತ್ರ ವಿಜಯೇಂದ್ರ ಮಾಡಿದ್ದಾರೆ ಎನ್ನಲಾದ ಭ್ರಷ್ಟಾಚಾರದ ಬಗ್ಗೆ ವರದಿ ಮಾಡಿದ್ದ ಕನ್ನಡ ಸುದ್ದಿ ವಾಹಿನಿ ಪವರ್ ಟಿವಿಯನ್ನು ಬಂದ್ ಮಾಡಿರುವುದಕ್ಕೆ ನಿರೂಪಕ ರೆಹಮಾನ್ ಹಾಸನ್ ಫೇಸ್‌ಬುಕ್ ಲೈವ್‌ನಲ್ಲಿ ಕಣ್ಣೀರಿಟ್ಟಿದ್ದಾರೆ. 

published on : 29th September 2020

ಪೊಲೀಸ್‌ ಅಧಿಕಾರಿಗಳ ಹೆಸರಲ್ಲಿ ಫೇಸ್ ಬುಕ್ ನಕಲಿ ಖಾತೆ ಮೂಲಕ ಆನ್‌ಲೈನ್‌ ವಂಚನೆ

ವಂಚಕರು ತಮ್ಮ ಜಾಲ ವಿಸ್ತರಣೆ ಮಾಡಿದ್ದು, ಪೊಲೀಸ್ ಅಧಿಕಾರಿಗಳ ನಕಲಿ ಫೇಸ್ ಬುಕ್ ಖಾತೆ ಮೂಲಕ ಆನ್ ಲೈನ್ ವಂಚನೆ ಮಾಡುತ್ತಿದ್ದಾರೆ.

published on : 24th September 2020

ದೆಹಲಿ ಗಲಭೆ: ಫೇಸ್‌ಬುಕ್‌ ವಿರುದ್ಧ ಅ.15ರವರೆಗೆ ಒತ್ತಾಯದ ಕ್ರಮ ಕೈಗೊಳ್ಳದಂತೆ 'ಸುಪ್ರೀಂ' ನಿರ್ದೇಶನ

ಈಶಾನ್ಯ ದೆಹಲಿಯ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ತಂಡ ಜಾರಿಗೊಳಿಸಿದ ಸಮನ್ಸ್‌ಗೆ ಪ್ರತಿಕ್ರಿಯಿಸದ ಫೇಸ್‌ಬುಕ್‌ ಭಾರತದ ಉಪಾಧ್ಯಕ್ಷರ ವಿರುದ್ದ ಅ.15ರವರೆಗೆ ಯಾವುದೇ ಒತ್ತಾಯದ ಕ್ರಮ ಕೈಗೊಳ್ಳದಂತೆ ದೆಹಲಿ ವಿಧಾನಸಭೆಗೆ ಸುಪ್ರೀಂಕೋರ್ಟ್ ಬುಧವಾರ ಆದೇಶ ನೀಡಿದೆ.

published on : 23rd September 2020

ಫೇಸ್ ಬುಕ್ ಸ್ವಯಂ ಚಾಲಿತ ವಿಡಿಯೋದಿಂದ ಉಂಟಾಗುವ ಕಿರಿಕಿರಿ ತಪ್ಪಿಸಿಕೊಳ್ಳಲು ಹೀಗೆ ಮಾಡಿ...

ಡಿಜಿಟಲ್ ಮಾರ್ಕೆಟಿಂಗ್ ಯುಗದಲ್ಲಿ ಗ್ರಾಹಕರನ್ನು ಸೆಳೆಯುವುದಕ್ಕೆ ವಿಧವಿಧವಾದ ಪ್ರಯೋಗಗಳು ನಡೆಯುತ್ತಿರುತ್ತವೆ. ಸಾಮಾಜಿಕ ಜಾಲತಾಣಗಳಲ್ಲಿ ಸ್ವಯಂ ಚಾಲಿತವಾಗಿ ಪ್ರಕಟವಾಗುವ ಜಾಹಿರಾತು ವಿಡಿಯೋಗಳು ಸಹ ಇವುಗಳ ಪೈಕಿ ಪ್ರಮುಖವಾದದ್ದು. 

published on : 9th September 2020

'ರಾಜಕೀಯ ಪಕ್ಷಪಾತ' ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಫೇಸ್ ಬುಕ್

ಭಾರತದ ಪ್ರಜಾಪ್ರಭುತ್ವ ಪ್ರಕ್ರಿಯೆ (ಚುನಾವಣೆ)ಯಲ್ಲಿ ಫೇಸ್ ಬುಕ್ ಹಸ್ತಕ್ಷೇಪ ಮಾಡಿದ್ದು, ರಾಜಕೀಯ ಪಕ್ಷಪಾತ ನಡೆಸಿದೆ ಎಂಬ ಕಾಂಗ್ರೆಸ್ ನ ಆರೋಪಕ್ಕೆ ಫೇಸ್ ಬುಕ್ ಪ್ರತಿಕ್ರಿಯೆ ನೀಡಿದೆ. 

published on : 3rd September 2020

ದ್ವೇಷ ಭಾಷಣ ವಿವಾದ: ಹಲವು ಒತ್ತಡಗಳ ಬಳಿಕ ಬಿಜೆಪಿ ನಾಯಕ ರಾಜಾ ಸಿಂಗ್ ಖಾತೆ ನಿಷೇಧಿಸಿದ ಫೇಸ್'ಬುಕ್

ದ್ವೇಷ ಭಾಷಣ, ಪ್ರಚೋದನಕಾರಿ ಹೇಳಿಕೆ ಕುರಿತು ಸೃಷ್ಟಿಯಾದ ವಿವಾದ ಹಾಗೂ ಚರ್ಚೆಗಳ ಬಳಿಕ ಕೊನೆಗೂ ಒತ್ತಡಗಳಿಗೆ ಮಣಿದಿರುವ ಫೇಸ್ಬುಕ್ ಬಿಜೆಪಿ ನಾಯಕ ಟಿ.ರಾಜಾ ಸಿಂಗ್ ಅವರ ಫೇಸ್'ಬುಕ್ ಹಾಗೂ ಇಸ್ಟಾಗ್ರಾಂ ಖಾತೆಗಳನ್ನು ನಿಷೇಧಿಸಿದೆ ಎಂದು ತಿಳಿದುಬಂದಿದೆ. 

published on : 3rd September 2020

ಪೊಲೀಸ್ ಇಲಾಖೆಯ ಗರಿಮೆ ಹೆಚ್ಚಿಸಿದ ಘಟನೆ: ಸಚಿವ ಸುರೇಶ್ ಕುಮಾರ್ ಶ್ಲಾಘನೆ

ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು ಇಂದು ಬೆಳಗ್ಗೆಯೇ ಫೇಸ್​ಬುಕ್​ನಲ್ಲಿ ಒಂದು ಪ್ರೇರಣಾದಾಯಕವಾದ ಘಟನೆಯನ್ನು ಹಂಚಿಕೊಂಡಿದ್ದಾರೆ. ಎಲ್ಲರಿಗೂ ಆ ಘಟನೆ ಸ್ಪೂರ್ತಿಯನ್ನು ತುಂಬಲಿ, ಪ್ರೇರಣೆಯನ್ನು ನೀಡಲಿ ಎಂಬ ಸದುದ್ದೇಶದಿಂದ ಅವರು ಕೆಲವು ಫೋಟೋಗಳೊಂದಿಗೆ ಶೇರ್ ಮಾಡಿದ್ದಾರೆ.

published on : 3rd September 2020

ಹಿಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಫೇಸ್ ಬುಕ್ ಬಿಜೆಪಿ ಪರ ಪ್ರಚಾರ ಮಾಡಿತ್ತು: ಟಿಎಂಸಿ ಗಂಭೀರ ಆರೋಪ

ಸೋಷಿಯಲ್ ಮೀಡಿಯಾದಲ್ಲಿ ಫೇಸ್ ಬುಕ್ ಬಿಜೆಪಿ ಪರ ಒಲವು ತೋರಿಸುತ್ತಿದೆ ಎಂದು ಆರೋಪಿಸಿ ತೃಣಮೂಲ ಕಾಂಗ್ರೆಸ್ ಅದರ ಸಿಇಒ ಮಾರ್ಕ್ ಝುಕರ್ ಬರ್ಗ್ ಗೆ ಪತ್ರ ಬರೆದಿದ್ದು, ತನ್ನ ಆರೋಪವನ್ನು ಪುಷ್ಟೀಕರಿಸಲು ಸಾಕಷ್ಟು ಉದಾಹರಣೆಗಳಿವೆ ಎಂದು ಹೇಳಿದೆ.

published on : 2nd September 2020

ಫೇಸ್ ಬುಕ್ ಇಂಡಿಯಾ ಸಿಬ್ಬಂದಿಯಿಂದ ಪ್ರಧಾನಿ, ಕೇಂದ್ರ ಸಚಿವರುಗಳ ವಿರುದ್ಧ ಅಪಪ್ರಚಾರ: ರವಿಶಂಕರ್ ಪ್ರಸಾದ್

ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ಸಂಪುಟದ ಹಿರಿಯ ಸಚಿವರನ್ನು ಸೋಷಿಯಲ್ ಮೀಡಿಯಾದಲ್ಲಿ ಅವಹೇಳನಕಾರಿಯಾಗಿ ನಿಂದಿಸುವ ಕೆಲಸವನ್ನು ತಮ್ಮ ಸಂಸ್ಥೆಯ ಹಿರಿಯ ಅಧಿಕಾರಿಗಳು ಮಾಡುತ್ತಿದ್ದಾರೆ ಎಂದು ಆರೋಪಿಸಿ ಫೇಸ್ ಬುಕ್ ಸಿಇಒ ಮಾರ್ಕ್ ಝುಕರ್ ಬರ್ಗ್ ಅವರಿಗೆ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಖಾತೆ ಸಚಿವ ರವಿಶಂಕರ್ ಪ್ರಸಾದ್ ಪತ್ರ ಬರೆದಿದ್ದಾರೆ.

published on : 2nd September 2020

ತನ್ನ ಹೆಸರಿನಲ್ಲಿ 10 ನಕಲಿ ಫೇಸ್ ಬುಕ್ ಖಾತೆ ಸೃಷ್ಟಿಸಿದವರ ವಿರುದ್ಧ ಕೇಸ್ ದಾಖಲಿಸಿದ ಐಎಎಸ್ ಅಧಿಕಾರಿ ಟೀನಾ

ಐಎಎಸ್ ಅಧಿಕಾರಿ ಟೀನಾ ದಾಬಿ ಅವರು ತನ್ನ ಹೆಸರಿನಲ್ಲಿ 10 ನಕಲಿ ಫೇಸ್‌ಬುಕ್ ಖಾತೆಗಳನ್ನು ನಿರ್ವಹಿಸುತ್ತಿದ್ದ ಅಪರಿಚಿತ ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಿದ್ದಾರೆ.

published on : 26th August 2020

ದಾವಣಗೆರೆ: ವಾಟ್ಸಾಪ್  ಗ್ರೂಪ್ ನಲ್ಲಿ 'ಪವರ್ ಆಫ್ ಪಾಕಿಸ್ತಾನ್' ಫೇಸ್‌ಬುಕ್  ಪೇಜ್ ಹಂಚಿಕೊಂಡ ಕಾನ್‌ಸ್ಟೆಬಲ್  ಅಮಾನತು

ಪೊಲೀಸ್ ಕಾನ್‌ಸ್ಟೆಬಲ್ ಒಬ್ಬ ವಾಟ್ಸಾಪ್  ಗ್ರೂಪ್ ನಲ್ಲಿ  'ಪವರ್ ಆಫ್ ಪಾಕಿಸ್ತಾನ್' ಫೇಸ್‌ಬುಕ್ ಪುಟವನ್ನು ಹಂಚಿಕೊಂಡಿದ್ದಕ್ಕಾಗಿ ಸೇವೆಯಿಂದ ಅಮಾನತುಗೊಂಡಿರುವ ಘಟನೆ ದಾವಣಗೆರೆ ಬಸವನಗರೆ ಠಾಣೆಯಲ್ಲಿ ನಡೆದಿದೆ.

published on : 24th August 2020

ಡಿಜೆ ಹಳ್ಳಿ ಗಲಭೆ ಕುರಿತು ಪೋಸ್ಟ್ : ನಟ ಪ್ರಥಮ್ ವಿರುದ್ಧ ದೂರು ದಾಖಲು

ಕೆಜೆ ಹಳ್ಳಿ, ಡಿಜೆ ಹಳ್ಳಿ ಗಲಭೆ ಕುರಿತು ನಟ ಪ್ರಥಮ್ ಹಾಕಿದ್ದ ಪೋಸ್ಟ್ ಗೆ ಸಂಬಂಧಿಸಿ ಬೆಂಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

published on : 18th August 2020

ದ್ವೇಷ ಭಾಷಣ ಪ್ರಕರಣ: ಫೇಸ್ ಬುಕ್ ಕಾರ್ಯನಿರ್ವಾಹಕ ಅಧಿಕಾರಿ ವಿರುದ್ಧ ಪ್ರಕರಣ ದಾಖಲು

ಭಾರತದಲ್ಲಿ ಫೇಸ್ ಬುಕ್ ನ ನೀತಿ ನಿರೂಪಣೆ ಮುಖ್ಯಸ್ಥರಾಗಿರುವ ಅಂಕಿ ದಾಸ್ ವಿರುದ್ಧ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಡಿ ಚತ್ತೀಸ್ ಗಢದಲ್ಲಿದಲ್ಲಿ ಪ್ರಕರಣದ ದಾಖಲಾಗಿದೆ. 

published on : 18th August 2020

ಪಕ್ಷಪಾತ ಆರೋಪ: ಯಾವುದೇ ರಾಜಕೀಯ ಪಕ್ಷ, ಯಾವುದೇ ಸ್ಥಾನದಲ್ಲಿದ್ದರೂ ಹಿಂಸಾಚಾರ ಪ್ರಚೋದಿಸುವ ವಿಚಾರವನ್ನು ನಿಷೇಧಿಸುತ್ತೇವೆ- ಫೇಸ್'ಬುಕ್ ಸ್ಪಷ್ಟನೆ

ಯಾವುದೇ ರಾಜಕೀಯ ಪಕ್ಷವಾದರೂ, ಆ ಪಕ್ಷ ಯಾವುದೇ ಸ್ಥಾನದಲ್ಲಿದ್ದರೂ ಕೂಡ ಹಿಂಸಾಚಾರ ಪ್ರಚೋದಿಸುವ ದ್ವೇಷದ ಮಾತುಗಳು ಹಾಗೂ ವಿಷಯಗಳನ್ನು ನಾವು ನಿಷೇಧಿಸುದ್ದೇವೆ. ಈ ನೀತಿ ಇಡೀ ವಿಶ್ವದಲ್ಲಿ ಜಾರಿಯಲ್ಲಿದೆ ಎಂದು ತನ್ನ ವಿರುದ್ಧ ಕೇಳಿ ಬಂದಿರುವ ಪಕ್ಷಪಾತ ಆರೋಪ ಕುರಿತು ವಿಶ್ವವ್ಯಾಪಕವಾದ ಸಾಮಾಜಿಕ ಸಂಪರ್ಕದ ಜಾಲತಾಣ ಫೇಸ್'ಬುಕ್ ಸ್ಪಷ್ಟನೆ ನೀಡಿದೆ...

published on : 17th August 2020
1 2 3 4 5 6 >