• Tag results for Government School

ಸಂಕಷ್ಟದಲ್ಲಿರುವ ಖಾಸಗಿ ಶಾಲಾ ಶಿಕ್ಷಕರಿಗೆ ನೆರವು ನೀಡಿ: ಸರ್ಕಾರಿ ಶಿಕ್ಷಕರಿಗೆ ಸುರೇಶ್ ಕುಮಾರ್ ಮನವಿ

ಕೊರೋನಾ ಕಾಲಘಟ್ಟದ ಸಂಕಷ್ಟದ ಹಿನ್ನೆಲೆಯಲ್ಲಿ ಆರ್ಥಿಕವಾಗಿ ತೀವ್ರ ದುಃಸ್ಥಿತಿಯಲ್ಲಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಖಾಸಗಿ ಅನುದಾನ ರಹಿತ ಶಾಲೆಗಳ ಶಿಕ್ಷಕರ ನೆರವಿಗೆ ಇಲಾಖೆಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಶಿಕ್ಷಕರು ಧಾವಿಸಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಶ್ರೀ ಎಸ್. ಸುರೇಶ್ ಕುಮಾರ್ ಮನವಿ ಮಾಡಿದ್ದಾರೆ.

published on : 7th July 2020

ಈ ದಂಪತಿಗೆ ಸುಧಾಮೂರ್ತಿಯವರೇ ಪ್ರೇರಣೆ: ಸರ್ಕಾರಿ ಶಾಲೆ ನಿರ್ಮಾಣಕ್ಕೆ 1.9 ಕೋಟಿ ರೂ. ಕೊಡುಗೆ

ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿಯವರಿಂದ ಸ್ಪೂರ್ತಿ ಪಡೆದು ಕಂಪೆನಿಯ ಮಾಜಿ ಉದ್ಯೋಗಿಗಳಾದ ಹರ್ಷ ಮತ್ತು ಮಮತ ದಂಪತಿ ತುಮಕೂರು ಜಿಲ್ಲೆಯ ಕೋರಾ ಗ್ರಾಮದಲ್ಲಿ ಸುಸಜ್ಜಿತ ಸರ್ಕಾರಿ ಶಾಲೆಯನ್ನು ನಿರ್ಮಿಸಲು ಮುಂದಾಗಿದ್ದಾರೆ.  

published on : 13th March 2020

ಮೈಸೂರು: ಸರ್ಕಾರಿ ಶಾಲೆಯಲ್ಲಿ ಹಾಲು ಕುಡಿದ 25 ವಿದ್ಯಾರ್ಥಿಗಳು ಅಸ್ವಸ್ಥ!

ಶಾಲೆಯಲ್ಲಿ ಹಾಲು ಕುಡಿದ ಸುಮಾರು 25 ಮಕ್ಕಳು ಅಸ್ವಸ್ಥರಾದ ಘಟನೆ ಹುಣಸೂರು ತಾಲೂಕಿನ ಕಿರಂಗೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಬುಧವಾರ ನಡೆದಿದೆ

published on : 27th February 2020

ಸರ್ಕಾರಿ ಶಾಲೆಗಳಲ್ಲಿ ಎಲ್ ಕೆಜಿ, ಯುಕೆಜಿ ಪ್ರಾರಂಭಿಸಲು ಚಿಂತನೆ: ಎಸ್.ಸುರೇಶ್ ಕುಮಾರ್

ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಎಲ್ ಕೆಜಿ ಮತ್ತು ಯುಕೆಜಿ ಪ್ರಾರಂಭಿಸಲು ಚಿಂತನೆ ನಡೆಸಿರುವುದಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ

published on : 22nd February 2020

ರಾಜ್ಯದ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಉದ್ಯೋಗ ಮಾಹಿತಿ ಕೇಂದ್ರ ಪ್ರಾರಂಭ: ಅಶ್ವತ್ಥನಾರಾಯಣ

ಪ್ರಸಕ್ತ ಶೈಕ್ಷಣಿಕ‌ ಸಾಲಿನಿಂದ ವಿದ್ಯಾರ್ಥಿಗಳಲ್ಲಿ ಕೌಶಲಾಭಿವೃದ್ಧಿ ಹೆಚ್ಚಿಸಲು ರಾಜ್ಯದ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಉದ್ಯೋಗ ಮಾಹಿತಿ ಕೇಂದ್ರ ಪ್ರಾರಂಭಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ.  

published on : 11th February 2020

ಕಾಡೊಳಗಿನ ಶಾಲೆಯಲ್ಲಿ ಶಿಕ್ಷಣ ಸಚಿವರ ಮೂರನೇ ಶಾಲಾ ವಾಸ್ತವ್ಯ

ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಫೆ.10 ರಂದು ಹನೂರು ತಾಲ್ಲೂಕಿನ ಕಾಡಂಚಿನ ಗ್ರಾಮವಾದ ಪಚ್ಚೆ ದೊಡ್ಡಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ತಮ್ಮ ಮೂರನೇಯ ಶಾಲಾ ವಾಸ್ತವ್ಯವನ್ನು ಹೂಡಲಿದ್ದಾರೆ. 

published on : 9th February 2020

ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಯೂಟದಲ್ಲಿ ಮಶ್ರೂಮ್ ರಸಂ!

ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದಲ್ಲಿ ಮಶ್ರೂಮ್ ರಸಂ ಸೇರಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. 

published on : 1st February 2020

ಉನ್ನತ ಶ್ರೇಣಿ ಪಡೆದ ಸರ್ಕಾರಿ ವಿದ್ಯಾರ್ಥಿಗಳಿಗೆ ದೆಹಲಿ ಸರ್ಕಾರದಿಂದ ಟ್ಯಾಬ್, ಕಂಪ್ಯೂಟರ್! 

ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ದೆಹಲಿ ಸರ್ಕಾರ ಟ್ಯಾಬ್ ಲೆಟ್ ಹಾಗೂ ಕಂಪ್ಯೂಟರ್ ಗಳನ್ನು ವಿತರಣೆ ಮಾಡಿದೆ. 

published on : 3rd January 2020

ನೆಚ್ಚಿನ ಮೇಷ್ಟ್ರ ವರ್ಗಾವಣೆ: ಮಕ್ಕಳ ಆಕ್ರೋಶ, ರೋಧನ

ನೆಚ್ಚಿನ ಮೇಷ್ಟು ದಿಢೀರ್ ವರ್ಗಾವಣೆ ಆಗಿರುವುದನ್ನು ತಿಳಿದ ಶಾಲಾ ಮಕ್ಕಳು ರೋಧಿಸಿ ಪ್ರತಿಭಟನೆ ನಡೆಸಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮೀಣ್ಯಂನಲ್ಲಿ ನಡೆದಿದೆ.

published on : 30th November 2019

ದಂತಚೋರ ವೀರಪ್ಪನ್ ಹುಟ್ಟಿದ ಊರಿನ ಶಾಲೆಯಲ್ಲಿ ಶಿಕ್ಷಣ ಸಚಿವರ ವಾಸ್ತವ್ಯ

ಶಿಕ್ಷಣ ಸಚಿವ ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎನ್. ಸುರೇಶ್ ಕುಮಾರ್ ಸೋಮವಾರ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಗೋಪಿನಾಥಂ ಶಾಲೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ.

published on : 17th November 2019

ನಕಲಿ ಶೂ ವಿತರಣೆ ಬಗ್ಗೆ ತನಿಖೆ, ಶಾಲೆಗಳ ದುರಸ್ತಿ ಎಸ್​ಡಿಎಂಸಿಗಳ ಹೆಗಲಿಗೆ:ಶಿಕ್ಷಣ ಹಾಗೂ ಸಕಾಲ ಸಚಿವ ಸುರೇಶ್​​ ಕುಮಾರ್

ಶಾಲಾ ಮಕ್ಕಳಿಗೆ ಶೂ ನೀಡುವ ಯೋಜನೆಯಲ್ಲಿ ಗೋಲ್​​ಮಾಲ್ ಆಗಿರುವ ಕುರಿತು ತನಿಖೆ ನಡೆಸಲಾಗುವುದು ಎಂದು ಸಚಿವ ಸುರೇಶ್​ ಕುಮಾರ್ ತಿಳಿಸಿದರು.

published on : 4th November 2019

ಮುಖ್ಯೋಪಾಧ್ಯಾಯರೇ ಇಲ್ಲದz ನಡೆಯುತ್ತಿದೆ ರಾಜ್ಯದ ಅರ್ಧದಷ್ಟು ಸರ್ಕಾರಿ ಶಾಲೆಗಳು!

ಮುಖ್ಯೋಪಧ್ಯಾಯರೇ ಇಲ್ಲದೇ ರಾಜ್ಯದಲ್ಲಿ ಶೇ.49ರಷ್ಟು ಸರ್ಕಾರಿ ಶಾಲೆಗಳು ಮುನ್ನಡೆಯುತ್ತಿರುವ ಇದೀಗ ಬಹಿರಂಗಗೊಂಡಿದೆ. 

published on : 3rd October 2019

ರಾಯಚೂರು: ಸರ್ಕಾರಿ ಶಾಲೆಯಲ್ಲಿ ವಿದ್ಯುತ್ ತಂತಿ ತಗುಲಿ 6ನೇ ತರಗತಿ ವಿದ್ಯಾರ್ಥಿ ಸಾವು

ವಿದ್ಯುತ್ ತಂತಿ ತಗುಲಿ ವಿದ್ಯಾರ್ಥಿಯೊರ್ವ ಮೃತಪಟ್ಟಿರುವ ದಾರುಣ ಘಟನೆ ಜಿಲ್ಲೆಯ ಮಸ್ಕಿ ತಾಲೂಕಿನ ಬಸಾಪುರ‌ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆದಿದೆ.

published on : 27th September 2019

ಅನುದಾನ ನೀಡದ ಕೇಂದ್ರ: ವಿದ್ಯಾರ್ಥಿಗಳಿಗೆ ಸಿಗದ 2ನೇ ಸಮವಸ್ತ್ರ

ಕೇಂದ್ರ ಸರ್ಕಾರ ಅನುದಾನ ನೀಡದ ಕಾರಣ ಸರ್ಕಾರಿ ಶಾಲಾ ಮಕ್ಕಳಿಗೆ ನೀಡುವ ಎರಡನೇ ಜೊತೆ ಸಮವಸ್ತ್ರ ಪ್ರಸಕ್ತ ಸಾಲಿನಲ್ಲಿ ನೀಡಲಾಗುತ್ತಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. 

published on : 27th September 2019

ಸರ್ಕಾರಿ ಶಾಲೆ ದತ್ತು ಪಡೆದ 'ಡಿಬಾಸ್' ಫ್ಯಾನ್ಸ್-ಶಿಕ್ಷಣ ಸಚಿವರ ಅಭಿನಂದನೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಸಂಘ ’ಡಿ ಕಂಪನಿ’ ಹಾಸನ ಜಿಲ್ಲೆಯ ಕುಗ್ರಾಮದಲ್ಲಿರುವ ಸರ್ಕಾರಿ ಶಾಲೆಯೊಂದನ್ನು ದತ್ತು ಪಡೆದಿದ್ದು, ಸಾರ್ವಜನಿಕರ ಪ್ರಶಂಸೆ ಹಾಗೂ ಶಿಕ್ಷಣ ಸಚಿವರು ಮೆಚ್ಚುಗೆಗೆ ಪಾತ್ರವಾಗಿದೆ

published on : 25th September 2019
1 2 3 >