• Tag results for Mysuru

ಮೈಸೂರು: ಶಾಸಕ ತನ್ವೀರ್ ಸೇಠ್ ಮೇಲೆ ಹಲ್ಲೆ, ಕುತ್ತಿಗೆ ಭಾಗಕ್ಕೆ ಚೂರಿ ಇರಿತ

ಶಾಸಕ ತನ್ವೀರ್ ಸೇಠ್ ಅವರ ಮೇಲೆ ಯುವಕನೊಬ್ಬ ಕತ್ತಿಯಿಂದ ಕುತ್ತಿಗೆ ಭಾಗಕ್ಕೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.ಗಾಯಗೊಂಡಿರುವ ತನ್ವೀರ್ ಸೇಠ್ ಅವರನ್ನು ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

published on : 18th November 2019

ಹುಣಸೂರು: ಲಾರಿ ಕಾರು ಢಿಕ್ಕಿ, ಇಬ್ಬರು ಸಾವು

 ಜಿಲ್ಲೆಯ ಹುಣಸೂರು ತಾಲ್ಲೂಕಿನ ಚಿಕುಂಡಾ ಗ್ರಾಮದ ಬಳಿ ಭಾನುವಾರ ಕಾರೊಂದು ಟಿಪ್ಪರ್ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಇತರ ನಾಲ್ವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

published on : 17th November 2019

ಸಿಪಿ ಯೋಗೇಶ್ವರ್ ಸೀರೆ ರಾಜಕೀಯ: ಮತದಾರರಿಗೆ ಹಂಚಲು ತಂದಿದ್ದ 30 ಸಾವಿರ ಸೀರೆ ವಶ

ಉಪ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಹಂಚಲು ತಂದಿದ್ದ 30 ಸಾವಿರ ಸೀರೆಗಳನ್ನು ಮೈಸೂರಿನಲ್ಲಿ ವಶಕ್ಕೆ ಪಡೆಯಲಾಗಿದೆ.

published on : 16th November 2019

ಮೈಸೂರು: ಆನೆ ದಾಳಿಗೆ ರೈತ ಬಲಿ

ಜಿಲ್ಲೆಯ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಕಾಡು ಆನೆ ದಾಳಿಯಿಂದ ಗಾಯಗೊಂಡಿದ್ದ ರೈತನೊಬ್ಬ ಮೃಪಟ್ಟಿದ್ದಾನೆ .  

published on : 10th November 2019

ಚಂದನ್ ಶೆಟ್ಟಿ ಮಾತ್ರವಲ್ಲ, ಎಲ್ಲ ಕಲಾವಿದರಿಗೂ ಈ ಘಟನೆ ಪಾಠವಾಗಬೇಕು: ಮೈಸೂರು ಎಸ್ಪಿ ಎಚ್ಚರಿಕೆ 

ದಸರಾ ಹಬ್ಬದ ಸಂದರ್ಭದಲ್ಲಿ ಮೈಸೂರಿನ ಯುವ ದಸರಾ ವೇದಿಕೆಯಲ್ಲಿ ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಅವರಿಗೆ ಗಾಯಕ ಚಂದನ್ ಶೆಟ್ಟಿ ಪ್ರೇಮ ನಿವೇದನೆ ಮಾಡಿದ್ದು ವ್ಯಾಪಕ ಸುದ್ದಿಯಾಗಿತ್ತು. ಸರ್ಕಾರಿ ಕಾರ್ಯಕ್ರಮದ ವೇದಿಕೆ ದುರುಪಯೋಗದ ಆರೋಪ ಚಂದನ್ ಶೆಟ್ಟಿ ಮೇಲೆ ಕೇಳಿಬಂದಿತ್ತು. 

published on : 8th November 2019

ಮುಂದಿನ ರಾಜಕೀಯ ಭವಿಷ್ಯಕ್ಕಾಗಿ ಬಿಜೆಪಿ ಸೇರ್ಪಡೆ: ಸಿ.ಎಚ್.ವಿಜಯ್ ಶಂಕರ್ ಸ್ಪಷ್ಟನೆ

ಮುಂದಿನ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಬಿಜೆಪಿ ಸೇರುವ ನಿರ್ಧಾರ ಕೈಗೊಂಡಿರುವೆ ಎಂದು ಮಾಜಿ ಸಂಸದ ಸಿಎಚ್.ವಿಜ ಯ್ ಶಂಕರ್ ತಿಳಿಸಿದ್ದಾರೆ.

published on : 5th November 2019

ಮಹಿಳಾ ರೈಲ್ವೆ ಪ್ರಯಾಣಿಕರಿಗೆ ಸಿಹಿಸುದ್ದಿ! ಪ್ರತ್ಯೇಕ ಮಹಿಳಾ ಬೋಗಿಗೆ ಸಂಸದೆ ಸುಮಲತಾ ಚಾಲನೆ

ರೈಲಿನಲ್ಲಿ ಪ್ರಯಾಣಿಸು  ಮಹಿಳಾ ಪ್ರಯಾಣಿಕರಿಗೆ ಶುಭ ಸುದ್ದಿಯೊಂದು ಹೊರಬಿದ್ದಿದ್ದು ಮಹಿಳೆಯರಿಗಾಗಿ ಪ್ರತ್ಯೇಕ ವಿಶೇಷ ಬೋಗಿಗೆ  ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಇಂದು ಚಾಲನೆ ನೀಡಿದರು..

published on : 31st October 2019

ಕಳ್ಳತನ ಪ್ರಕರಣ; ವಿಚಾರಣೆಗೆ ಹೆದರಿ ದೂರುದಾರನೇ ಆತ್ಮಹತ್ಯೆ

ಖಾಸಗಿ ಕಂಪನಿಯೊಂದರಲ್ಲಿ ನಡೆದ ಕಳ್ಳತನದ ಹಿನ್ನೆಲೆಯಲ್ಲಿ ಪೊಲೀಸರ ವಿಚಾರಣೆಗೆ ಹೆದರಿ ಉದ್ಯೋಗಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕುವೆಂಪುನಗರದ ಠಾಣಾ ವ್ಯಾಪ್ತಿಯ ಮಧುವನದಲ್ಲಿ ನಡೆದಿದೆ. 

published on : 29th October 2019

ರಾಜಕಾರಣ ನಿಂತ ನೀರಲ್ಲ, ನಾನು ಹರಿಯ ನೀರಾಗಬೇಕು- ಸಿ.ಎಚ್. ವಿಜಯ್ ಶಂಕರ್ 

ರಾಜಕಾರಣ ನಿಂತ ನೀರಲ್ಲ, ನಾನು ಹರಿಯ ನೀರಾಗಬೇಕು ಎಂದು ಹೇಳುವ ಮೂಲಕ ಮಾಜಿ ಶಾಸಕ ಸಿ.ಎಚ್. ವಿಜಯ್ ಶಂಕರ್ ಬಿಜೆಪಿ ಸೇರ್ಪಡೆಯನ್ನು ದೃಢಪಡಿಸಿದ್ದಾರೆ.

published on : 27th October 2019

ಮಾಜಿ ಪತಿ ಮೇಲೆ ಸುಳ್ಳು ದೌರ್ಜನ್ಯ ಪ್ರಕರಣ: ಮಹಿಳೆ ರೂ.25,000 ದಂಡ 

ಮಾಜಿ ಪತಿ ವಿರುದ್ಧ ಸುಳ್ಳು ದೌರ್ಜನ್ಯ ಪ್ರಕರಣ ದಾಖಲಿಸಿದ್ದ ಮೈಸೂರು ಮೂಲದ ಮಹಿಳೆಯೊಬ್ಬರಿಗೆ ಹೈಕೋರ್ಟ್ ರೂ.25,000 ದಂಡ ವಿಧಿಸಿದೆ.

published on : 27th October 2019

ಬಿಜೆಪಿಗೆ ಮರಳುವಂತೆ ವರಿಷ್ಠರಿಂದ ಆಹ್ವಾನ ಬಂದಿದೆ: ಸಿ.ಎಚ್. ವಿಜಯ್ ಶಂಕರ್

 ಬಿಜೆಪಿಗೆ ಮರಳುವಂತೆ ವರಿಷ್ಠರಿಂದ ಆಹ್ವಾನ ಬಂದಿದೆ. ರಾಜಕೀಯದಲ್ಲಿ ಇಂತಹ ರಾಜಕೀಯ ಸ್ಥಿತ್ಯಂತರ ಸಹಜ.ಪಕ್ಷಕ್ಕಾಗಿ ದುಡಿದಿದ್ದೀರಿ. ಮರಳಿ ಬರುವುದಾದರೆ ಸ್ವಾಗತ ಎಂದಿದ್ದಾರೆ.

published on : 26th October 2019

ಮೈಸೂರು: ಚಾಮುಂಡಿ ಬೆಟ್ಟದಲ್ಲಿ ರಸ್ತೆ ಕುಸಿತ

ಮೈಸೂರಿನಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಚಾಮುಂಡಿ ಬೆಟ್ಟದಲ್ಲಿ ಭೂ ಕುಸಿತ ಸಂಭವಿಸಿದೆ. 

published on : 22nd October 2019

ದನ, ಕುರಿ ಮಾರಾಟದಲ್ಲಿ‌ ಸಿದ್ದರಾಮಯ್ಯ ನಿಪುಣ: ಬಿ.ಸಿ.ಪಾಟೀಲ್ ತಿರುಗೇಟು

ದನ, ಕುರಿ ಮಾರಾಟದ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ನಿಪುಣ‌. ಅವರಿಗಿಂತ ಚೆನ್ನಾಗಿ ಬಲ್ಲವರು ಯಾರೂ ಇಲ್ಲ ಎಂದು ಹೇಳುವ ಮೂಲಕ ಹಿರೇಕೆರೂರು ಅನರ್ಹ ಶಾಸಕ ಬಿ.ಸಿ.ಪಾಟೀಲ್

published on : 21st October 2019

ಹುಣಸೂರು ಜಿಲ್ಲೆಗೆ ವಿಶ್ವನಾಥ್ ಬೇಡಿಕೆ: ಸಿದ್ದರಾಮಯ್ಯ ವ್ಯಂಗ್ಯ 

ಜೆಡಿಎಸ್ ಅನರ್ಹ ಶಾಸಕ ಎಚ್. ವಿಶ್ವನಾಥ್ ಅವರ ಪ್ರತ್ಯೇಕ ಹುಣಸೂರು ಜಿಲ್ಲೆ ಬೇಡಿಕೆ ಬಗ್ಗೆ  ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

published on : 21st October 2019

ವಲಸಿಗರಂತೆ ರಾಜ್ಯ ಪ್ರವೇಶಿಸಿರುವ ಜೆಎಂಬಿ: ಉಗ್ರರ ಸ್ಲೀಪರ್ ಸೆಲ್ ಆಗುತ್ತಿದೆ ಬೆಂಗಳೂರು, ಮೈಸೂರು!

ಬಾಂಗ್ಲಾದೇಶದ ಅಕ್ರಮ ವಲಸಿಗರ ಸೋಗಿನಲ್ಲಿ ಬಾಂಗ್ಲಾದೇಶದ ಮುಜಾಹಿದ್ದೀನ್ ಸಂಘಟನೆಯ ಭಯೋತ್ಪಾದಕರು ರಾಜ್ಯ ಪ್ರವೇಶಿಸಿದ್ದು, ಮೈಸೂರು, ಕರಾವಳಿ ಪ್ರದೇಶ ಹಾಗೂ ಬೆಂಗಳೂರು ನಗರದಲ್ಲಿ ಸಕ್ರಿಯರಾಗಿದ್ದಾರೆಂದು ತಿಳಿದುಬಂದಿದೆ.

published on : 19th October 2019
1 2 3 4 5 6 >