• Tag results for Police complaint

ಮಧ್ಯ ಪ್ರದೇಶ: ಮಗನಿಗೆ ಕಚ್ಚಿದ ನಾಯಿಯನ್ನು ಹೊಡೆದು ಕೊಂದ ವ್ಯಕ್ತಿ; ಪ್ರಾಣಿ ಪ್ರೀಯರ ಆಕ್ರೋಶ, ದೂರು ದಾಖಲು

ಮಗನಿಗೆ ಕಚ್ಚಿದ ನಾಯಿಯನ್ನು ವ್ಯಕ್ತಿಯೊಬ್ಬ ಕೊಂದು ಹಾಕಿರುವ ಘಟನೆ ಮಧ್ಯ ಪ್ರದೇಶದ ಗ್ವಾಲಿಯರ್ ನಲ್ಲಿ ನಡೆದಿದೆ. ಗ್ವಾಲಿಯರ್ ಜಿಲ್ಲೆಯ ಸಿಮರಿಯತಲ್ ಗ್ರಾಮದಲ್ಲಿ ಒಂದು ತಿಂಗಳ ಹಿಂದೆ ಈ ಘಟನೆ ನಡೆದಿದ್ದು ನಾಯಿಯನ್ನು ಕ್ರೂರವಾಗಿ ಹತ್ಯೆ ಮಾಡಿರುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಓಡಾಡುತ್ತಿದೆ.

published on : 1st December 2021

ಆನ್‌ಲೈನ್ ಗಾಂಜಾ ಮಾರಾಟ ಪ್ರಕರಣ: ಅಮೆಜಾನ್ ಇಂಡಿಯಾ ಅಧಿಕಾರಿಗಳ ವಿರುದ್ಧ ಎಫ್‌ಐಆರ್

ಮಧ್ಯಪ್ರದೇಶದ ಭಿಂಡ್ ಜಿಲ್ಲೆಯ ಪೊಲೀಸರು ಆನ್‌ಲೈನ್ ಗಾಂಜಾ ಮಾರಾಟ ದಂಧೆಯನ್ನು ಭೇದಿಸಿದ ನಂತರ ಅಮೆಜಾನ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

published on : 21st November 2021

ವಿಜಯ್ ಸೇತುಪತಿ ವಿರುದ್ಧ ಹಿಂಸಾಚಾರಕ್ಕೆ ಪ್ರಚೋದನೆ: ಹಿಂದೂ ಸಂಘಟನೆ ಮುಖಂಡನ ವಿರುದ್ಧ ದೂರು

ನಟ ವಿಜಯ್ ಸೇತುಪತಿ ಅವರ ಮೇಲೆ ಹಲ್ಲೆ ಮಾಡುವವರಿಗೆ 1,001 ರೂಪಾಯಿ ನಗದು ಬಹುಮಾನವನ್ನು ಘೋಷಿಸಿದ್ದ, ಹಿಂದೂ ಪರ ಸಂಘಟನೆಯ ಹಿಂದೂ ಮಕ್ಕಳ್ ಕಚ್ಚಿ ನಾಯಕ ಅರ್ಜುನ್ ಸಂಪತ್ ವಿರುದ್ಧ ಕೊಯಮತ್ತೂರು ಪೊಲೀಸರು ಇಂದು ದೂರು ದಾಖಲಿಸಿದ್ದಾರೆ.

published on : 18th November 2021

ಪುನೀತ್ ರಾಜ್ ಕುಮಾರ್ ನಿಧನ: ಡಾ. ರಮಣರಾವ್ ವಿರುದ್ಧ ಮತ್ತೊಂದು ದೂರು

ಪುನೀತ್ ರಾಜ್ ಕುಮಾರ್ ಅವರ ಹಠಾತ್ ನಿಧನದ ಹಿನ್ನಲೆಯಲ್ಲಿ ಡಾ.ರಮಣ ರಾವ್ ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಮತ್ತೊಂದು ದೂರು ದಾಖಲಾಗಿದೆ.

published on : 8th November 2021

ಮಹಾ ಸಚಿವ ನವಾಬ್ ಮಲಿಕ್ ವಿರುದ್ಧ ಪೊಲೀಸರಿಗೆ ಸಮೀರ್ ವಾಂಖೆಡೆ ಸಹೋದರಿ ದೂರು

ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್‌ಸಿಬಿ)ದ ಮುಂಬೈ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಅವರ ಸಹೋದರಿ ಯಾಸ್ಮೀನ್ ವಾಂಖೆಡೆ ಅವರು ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅವರು ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

published on : 28th October 2021

ತಂದೆ-ತಾಯಿ ವಿರುದ್ಧವೇ ದೂರು ದಾಖಲಿಸಿದ ತಮಿಳು ನಟ ವಿಜಯ್!

ಖ್ಯಾತ ತಮಿಳು ನಟ ವಿಜಯ್ ಅವರು ತಮ್ಮ ಸ್ವಂತ ಪೋಷಕರ ವಿರುದ್ಧವೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವ ಮೂಲಕ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ.

published on : 20th September 2021

ಪ್ರಶಾಂತ್ ಸಂಬರಗಿ ವಿರುದ್ಧ ತಿರುಗಿ ಬಿದ್ದಿದ್ದೇಕೆ ಚಕ್ರವರ್ತಿ ಚಂದ್ರಚೂಡ್; ಪೊಲೀಸ್ ಆಯುಕ್ತರಿಗೆ ಕೊಟ್ಟ ದೂರಿನಲ್ಲಿ ಏನಿದೆ?

ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ವಿರುದ್ಧ ಕನ್ನಡ ಬಿಗ್ ಬಾಸ್ ಸೀಸನ್ 8ರ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ದೂರು ನೀಡಿದ್ದಾರೆ.

published on : 15th September 2021

ಹೊಟೇಲ್ ಸಪ್ಲೈಯರ್ ಮೇಲೆ ರೇಗಿದ್ದು ನಿಜ, ಹಲ್ಲೆ ಮಾಡಿಲ್ಲ; ವಂಚನೆ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿಲ್ಲ: ನಟ ದರ್ಶನ್

ನನ್ನ ವಿರುದ್ಧ ಬ್ಯಾಂಕಿನಲ್ಲಿ ಸಾಲ ಪಡೆಯುವ ವಿಚಾರದಲ್ಲಿ ವಂಚನೆಯೆಸಗಲು ಯತ್ನಿಸಿದ ಕೇಸಿನಲ್ಲಿ  ಪೊಲೀಸರಿಗೆ ದೂರು ನೀಡಿ ಎಫ್ಐಆರ್ ದಾಖಲಾಗಿದೆ. ಈ ಪ್ರಕರಣವನ್ನು ಮುಚ್ಚಿಹಾಕಲು ನಾವು ಯತ್ನಿಸುತ್ತಿಲ್ಲ ಎಂದು ಸ್ಯಾಂಡಲ್ ವುಡ್ ನಟ ದರ್ಶನ್ ಹೇಳಿದ್ದಾರೆ.

published on : 15th July 2021

ಕಾಂಗ್ರೆಸ್ ಬಗ್ಗೆ ಅಪಪ್ರಚಾರ: ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಚಕ್ರವರ್ತಿ ಸೂಲಿಬೆಲೆ ವಿರುದ್ಧ ದೂರು

ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

published on : 20th June 2021

ಕಳ್ಳತನದ ಕೇಂದ್ರವಾದ ಮಡಿಕೇರಿ ಕೋವಿಡ್ ಆಸ್ಪತ್ರೆ: ಮೃತರ ಸಂಬಂಧಿಕರಿಂದ ದೂರು ದಾಖಲು!

ಇಲ್ಲಿನ ಕೋವಿಡ್-19 ಆಸ್ಪತ್ರೆ  ಕಳ್ಳತನದ ಕೇಂದ್ರವಾಗಿ ಹೂರಹೊಮ್ಮಿದ್ದು, ದೂರುಗಳನ್ನು ಸ್ವೀಕರಿಸುವುದರಲ್ಲಿ ಕೊಡಗು ಪೊಲೀಸರು ಬ್ಯುಸಿಯಾಗಿದ್ದಾರೆ. ದುಷ್ಕರ್ಮಿಗಳ ಪತ್ತೆಗಾಗಿ ತನಿಖೆಯನ್ನು ಚುರುಕುಗೊಳಿಸಿದ್ದಾರೆ. 

published on : 24th May 2021

ನಕಲಿ ಟ್ವಿಟರ್ ಖಾತೆ: ಸಿಜೆಐ ಎನ್.ವಿ. ರಮಣ ಪೊಲೀಸ್ ದೂರು ದಾಖಲು

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ಎನ್.ವಿ. ರಮಣ ಅವರ ಹೆಸರಿನ ಟ್ವಿಟರ್ ಖಾತೆಯಲ್ಲಿ ನಕಲಿ ಸಂದೇಶಗಳನ್ನು ಪೋಸ್ಟ್ ಮಾಡುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ಅವರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

published on : 26th April 2021

'ಹಿಂದಿ ಟಿವಿ ಜಗತ್ತಿನ ರಾಣಿ' ಏಕ್ತಾ ಕಪೂರ್ ವಿರುದ್ಧ ನಟ ಸುನಿಲ್ ಶೆಟ್ಟಿ ದೂರು

ಬಾಲಿವುಡ್ ನಟ ಸುನಿಲ್ ಶೆಟ್ಟಿ ಅವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಖ್ಯಾತ ನಿರ್ಮಾಪಕಿ ಏಕ್ತಾ ಕಪೂರ್ ವಿರುದ್ಧ ದೂರು ನೀಡಿದ್ದಾರೆ.

published on : 6th March 2021

ರಾಶಿ ಭವಿಷ್ಯ