• Tag results for RJD

ಲಾಲೂ ಹಿರಿಯ ಪುತ್ರ RJD ನಾಯಕ ತೇಜ್ ಪ್ರತಾಪ್ ಯಾದವ್ ವಿರುದ್ಧ FIR ದಾಖಲು

ಬಿಹಾರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಸಲ್ಲಿಸಿದ ಅಫಿಡವಿಟ್‍ನಲ್ಲಿ ಆಸ್ತಿ ವಿವರಗಳನ್ನು ಮರೆಮಾಚಿದ ಆರೋಪ ಅವರ ಮೇಲೆ ದಾಖಲಾಗಿತ್ತು.

published on : 30th December 2021

ರಾಷ್ಟ್ರೀಯ ಪಾಲಿಟಿಕ್ಸ್ ಧುಮುಕಲು ಲಾಲೂ ಕಾತರ: ಬಿಹಾರ ಚುನಾವಣಾ ಫಲಿತಾಂಶದ ನಿರೀಕ್ಷೆ

ಲಾಲು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಬಡವರು, ರೈತರು ದಮನಿತರ ದನಿಯನ್ನು ಕೇಳುವವರು ಸರ್ಕಾರದಲ್ಲೊಬ್ಬರೂ ಇಲ್ಲ ಎಂದು ಕಿಡಿ ಕಾರಿದ್ದರು.

published on : 31st October 2021

ಬಿಹಾರದಲ್ಲಿ ಪಕ್ಷವನ್ನು ಪುನರುಜ್ಜೀವನಗೊಳಿಸಲು ಆರ್ ಜೆಡಿ ಜೊತೆ ಮೈತ್ರಿ ತೊರೆದ ಕಾಂಗ್ರೆಸ್

ಬಿಹಾರ ರಾಜಕಾರಣಕ್ಕೆ ಜಿಗ್ನೇಶ್ ಮೇವಾನಿ, ಹಾರ್ದಿಕ್ ಪಟೇಲ್, ಕನ್ಹಯ್ಯ ಕುಮಾರ್ ಅವರ ಪ್ರವೇಶದ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ತನ್ನ ಕಾರ್ಯತಂತ್ರವನ್ನು ಬದಲಾಯಿಸಿಕೊಂಡಿದ್ದು, ಆರ್ ಜೆಡಿಯೊಂದಿಗಿನ ಮೈತ್ರಿಯಿಂದ ಹೊರ ನಡೆದಿದೆ. 

published on : 23rd October 2021

ಕನ್ಹಯ್ಯ ಮತ್ತೋರ್ವ ಸಿಧು, ಕಾಂಗ್ರೆಸ್ ಪಕ್ಷಕ್ಕೆ ಉಳಿಗಾಲವಿಲ್ಲ: ಆರ್ ಜೆಡಿ

ಜವಹರ್ ಲಾಲ್ ನೆಹರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ಮತ್ತೋರ್ವ ನವಜೋತ್ ಸಿಂಗ್ ಸಿಧುವಿನಂತೆ ದೇಶದ ಅತ್ಯಂತ ಹಳೆಯ ಪಕ್ಷವನ್ನು ನಾಶಪಡಿಸುವುದಾಗಿ ಎಂದು ಬಿಹಾರದ ಪ್ರಮುಖ ವಿರೋಧ ಪಕ್ಷ ಆರ್ ಜೆಡಿ, ಕನ್ಹಯ್ಯ ಕುಮಾರ್ ಕಾಂಗ್ರೆಸ್ ಸೇರ್ಪಡೆ ಕುರಿತು ವ್ಯಂಗ್ಯವಾಡಿದೆ.

published on : 1st October 2021

ಆರ್ ಜೆಡಿ ಬಿಕ್ಕಟ್ಟು: ಪ್ರತ್ಯೇಕ ಸಂಘಟನೆ ಆರಂಭಿಸಿದ ಲಾಲು ಪುತ್ರ ತೇಜ್ ಪ್ರತಾಪ್ ಯಾದವ್

ತಮ್ಮದೇ ರಾಜಕೀಯ ಪಕ್ಷದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಬಿಹಾರ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಪುತ್ರ ತೇಜ್ ಪ್ರತಾಪ್ ಯಾದವ್ ಅವರು ತಮ್ಮದೇ ಪ್ರತ್ಯೇಕ ಸಂಘಟನೆಯನ್ನು ಸ್ಥಾಪಿಸಿದ್ದಾರೆ.

published on : 7th September 2021

"ಸಂಸತ್ ಕಲಾಪ ಬಿಕ್ಕಟ್ಟು ಅಂತ್ಯಕ್ಕೆ ಪ್ರಧಾನಿ ಮಧ್ಯಪ್ರವೇಶಿಸಲಿ": ಮುಂಗಾರು ಅಧಿವೇಶನ ವಿಸ್ತರಣೆಗೆ ಆರ್ ಜೆಡಿ ಸಂಸದ ಆಗ್ರಹ 

ಪೆಗಾಸಸ್ ವಿಷಯವಾಗಿ ಸಂಸತ್ ಕಲಾಪ ವ್ಯರ್ಥವಾಗುತ್ತಿದ್ದು, ಬಿಕ್ಕಟ್ಟು ನಿವಾರಿಸಲು ಪ್ರಧಾನಿ ಮೋದಿ ಮಧ್ಯಪ್ರವೇಶಿಸಬೇಕೆಂದು ಆರ್ ಜೆಡಿಯ ಸಂಸದ ಮನೋಜ್ ಕುಮಾರ್ ಝಾ ಆಗ್ರಹಿಸಿದ್ದಾರೆ. 

published on : 8th August 2021

ಯೋಗಿಯನ್ನು ಅಭಿನಂದಿಸಿದ ಸೈನಾ ನೆಹ್ವಾಲ್; 'ಸರ್ಕಾರಿ ಶಟ್ಲರ್' ಎಂದ ಆರ್ ಜೆಡಿ ಮುಖ್ಯಸ್ಥ ಟೀಕೆ

ಜಿಲ್ಲಾ ಪಂಚಾಯತ್ ಮುಖ್ಯಸ್ಥ ಸ್ಥಾನಕ್ಕೆ  ನಡೆದ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಅಭಿನಂದಿಸಿದ ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಅವರನ್ನು ಸರ್ಕಾರಿ ಶಟ್ಲರ್ ಎಂದು ಆರ್ ಜೆಡಿ ಅಧ್ಯಕ್ಷ ಜಯಂತ್ ಚೌದರಿ ಕರೆದಿದ್ದಾರೆ.

published on : 4th July 2021

ರಸಗೊಬ್ಬರ ಹಗರಣ: ಮನಿ ಲಾಂಡರಿಂಗ್ ಪ್ರಕರಣದಲ್ಲಿ ಆರ್‌ಜೆಡಿ ಸಂಸದ ಅಮರೇಂದ್ರ ಧಾರಿ ಸಿಂಗ್ ಬಂಧಿಸಿದ ಇಡಿ!

ರಸಗೊಬ್ಬರ ಹಗರಣ ಮತ್ತು 685 ಕೋಟಿ ರೂ.ಗೆ ಕಿಕ್‌ಬ್ಯಾಕ್ ಪಾವತಿಗಾಗಿ ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಜೆಡಿ ಸಂಸದ ಅಮರೇಂದ್ರ ಧಾರಿ ಸಿಂಗ್ ರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ. 

published on : 4th June 2021

ಡಿಎಲ್ಎಫ್ ಲಂಚ ಪ್ರಕರಣ: ಲಾಲು ಪ್ರಸಾದ್ ಯಾದವ್ ಗೆ ಸಿಬಿಐ ಕ್ಲೀನ್ ಚಿಟ್!

ಡಿಎಲ್ಎಫ್ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಜನತಾದಳ (ಆರ್ ಜೆಡಿ) ಪಕ್ಷದ ಮುಖ್ಯಸ್ಥ ಹಾಗೂ ಮಾಜಿ ಕೇಂದ್ರ ಸಚಿವ ಲಾಲು ಪ್ರಸಾದ್ ಯಾದವ್ ಅವರಿಗೆ ಸಿಬಿಐ ಕ್ಲೀನ್ ಚಿಟ್ ನೀಡಿದೆ ಎನ್ನಲಾಗಿದೆ.

published on : 22nd May 2021

ಆರ್ ಜೆಡಿ ಮಾಜಿ ಸಂಸದ ಮೊಹಮ್ಮದ್‌ ಶಹಾಬುದ್ದಿನ್‌ ಕೋವಿಡ್ ಗೆ ಬಲಿ

ರಾಷ್ಟ್ರೀಯ ಜನತಾದಳದ (ಆರ್‌ಜೆಡಿ) ಮಾಜಿ ಸಂಸದ ಮೊಹಮ್ಮದ್‌ ಶಹಾಬುದ್ದಿನ್‌ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

published on : 1st May 2021

ಮೇವು ಹಗರಣ:  ಜಾರ್ಖಂಡ್ ಹೈಕೋರ್ಟ್ ನಿಂದ ಲಾಲು ಯಾದವ್ ಜಾಮೀನು ಅರ್ಜಿ ತಿರಸ್ಕೃತ

ಜೈಲಿನಲ್ಲಿರುವ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್‌ಗೆ ಪ್ರಮುಖ ಹಿನ್ನಡೆಯಾಗಿದ್ದು ಮೇವು ಹಗರಣದ ಡುಮ್ಕಾ ಖಜಾನೆ ಪ್ರಕರಣದಲ್ಲಿ ಅವರ ಜಾಮೀನು ಅರ್ಜಿಯನ್ನು ಜಾರ್ಖಂಡ್ ಹೈಕೋರ್ಟ್ ಶುಕ್ರವಾರ ತಿರಸ್ಕರಿಸಿದೆ.

published on : 19th February 2021

ಲಾಲು ಪ್ರಸಾದ್ ಆರೋಗ್ಯ ಸ್ಥಿತಿ ಗಂಭೀರ, ದೆಹಲಿ ಏಮ್ಸ್ ಆಸ್ಪತ್ರೆಗೆ ರವಾನೆ

ರಾಷ್ಟ್ರೀಯ ಜನತಾದಳದ ಮುಖ್ಯಸ್ಥ ಲಾಲೂ ಪ್ರಸಾದ್​ ಯಾದವ್​ ಆರೋಗ್ಯದಲ್ಲಿ ತೀವ್ರ ಹದಗೆಟ್ಟ ಪರಿಣಾಮ ಅವರನ್ನು ದೆಹಲಿ ಏಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

published on : 23rd January 2021

ಸಂಕ್ರಾಂತಿ ಆಚರಣೆ ಸಂದರ್ಭದಲ್ಲಿ ಬಿಹಾರದಲ್ಲಿ ರಾಜಕೀಯ ಸಂಕ್ರಮಣ?!

ಮಕರ ಸಂಕ್ರಮಣದ ಕಾಲದಲ್ಲೇ ಬಿಹಾರದಲ್ಲಿ ರಾಜಕೀಯ ಸಂಕ್ರಮಣದ ಲಕ್ಷಣಗಳೂ ಗೋಚರಿಸುತ್ತಿವೆ. 

published on : 15th January 2021

'ರಾಜಕೀಯ ಅಸೂಯೆ'ಯಿಂದ ಲಾಲು ಯಾದವ್ ಬಿಹಾರ ಸರ್ಕಾರವನ್ನು 'ಅಸ್ಥಿರಗೊಳಿಸುತ್ತಿದ್ದಾರೆ': ಸುಶೀಲ್ ಮೋದಿ

ರಾಂಚಿಯ ಜೈಲಿನಲ್ಲಿದ್ದುಕೊಂಡೇ ಬಿಹಾರದ ಮಾಜಿ ಸಿಎಂ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಗಳನ್ನು ಮಾಡಿದ್ದಾರೆ ಎಂದು ಬಿ ಜೆಪಿ ರಾಜ್ಯಸಭಾ ಸಂಸದ ಸುಶೀಲ್ ಕುಮಾರ್ ಮೋದಿ ಆರೋಪಿಸಿದ್ದಾರೆ. 

published on : 4th January 2021

ಬಿಹಾರ ಸಿಎಂ ನಿತೀಶ್ ಕುಮಾರ್ ಗೆ ಸಂಕಷ್ಟ: ಆರ್ ಜೆಡಿಗೆ ಜೆಡಿ(ಯು) ಪಕ್ಷದ 17 ಶಾಸಕರು?

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಸಂಯುಕ್ತ ಜನತಾದಳ(ಜೆಡಿಯು) ಪಕ್ಷದ ಶಾಸಕರು, ರಾಷ್ಟ್ರೀಯ ಜನತಾದಳ(ಆರ್‌ಜೆಡಿ) ಸೇರಲಿದ್ದಾರೆ ಎಂದು ಆರ್ ಜೆ ಡಿ ನಾಯಕ ಶ್ಯಾಮ್ ರಜಾಕ್ ಹೇಳಿದ್ದಾರೆ.

published on : 30th December 2020
1 2 > 

ರಾಶಿ ಭವಿಷ್ಯ