Australia

ಆಸ್ಟ್ರೇಲಿಯಾ ಕ್ರಿಕೆಟ್ ದಿಗ್ಗಜ ಡೀನ್ ಜೋನ್ಸ್ ಮುಂಬೈನಲ್ಲಿ ನಿಧನ
ಆಸ್ಟ್ರೇಲಿಯಾ ಕ್ರಿಕೆಟ್ ದಿಗ್ಗಜ ಡೀನ್ ಜೋನ್ಸ್ ಅವರು ಗುರುವಾರ ಮುಂಬೈನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಪಂದ್ಯದ ದಿಕ್ಕನ್ನೇ ಬದಲಿಸಿದ ಮ್ಯಾಕ್ಸ್ ವೆಲ್, ಅಲೆಕ್ಸ್ ಕರಿ ಶತಕ, ಇಂಗ್ಲೆಂಡ್ ವಿರುದ್ಧ 2-1 ಏಕದಿನ ಸರಣಿ ಗೆದ್ದ ಆಸ್ಟ್ರೇಲಿಯಾ
ಆರಂಭಿಕ ಆಘಾತದ ನಡುವೆಯೂ ಮ್ಯಾಕ್ಸ್ ವೆಲ್, ಅಲೆಕ್ಸ್ ಕರಿ ಸಿಡಿಸಿದ ಅಮೋಘ ಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್ ವಿರುದ್ಧ ಅಂತಿಮ ಏಕದಿನ ಪಂದ್ಯವನ್ನು ಗೆಲ್ಲುವ ಮೂಲಕ ಏಕದಿನ ಸರಣಿಯನ್ನು 2-1 ಅಂತರದಲ್ಲಿ ತನ್ನದಾಗಿಸಿಕೊಂಡಿದೆ.

ಐಪಿಎಲ್ 2020: ಕೋವಿಡ್ ಕ್ವಾರಂಟೈನ್ ಅವಧಿ ಕಡಿತಗೊಳಿಸುವಂತೆ ಬಿಸಿಸಿಐಗೆ ಆಸೀಸ್-ಇಂಗ್ಲೆಂಡ್ ಕ್ರಿಕೆಟಿಗರ ಮನವಿ!
ಐಪಿಎಲ್ ಟೂರ್ನಿಯಲ್ಲಿ ಆಡಲಿರುವ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಆಟಗಾರರು ಕೋವಿಡ್ ಕ್ವಾರಂಟೈನ್ ಅವಧಿಯನ್ನು ಆರು ದಿನದ ಬದಲಿಗೆ ಮೂರು ದಿನಕ್ಕೆ ಇಳಿಸುವಂತೆ ಬಿಸಿಸಿಐಗೆ ಮನವಿ ಮಾಡಿದ್ದಾರೆ.

ಟಿ-20: ಸಾಂಪ್ರದಾಯಿಕ ಎದುರಾಳಿ ಆಸಿಸ್ ವಿರುದ್ಧ ಇಂಗ್ಲೆಂಡ್ ಗೆ ಎರಡು ರನ್ ರೋಚಕ ಜಯ
ಕೊನೆಯ ಗಳಿಗೆಯಲ್ಲಿ ಬಿಗುವಿನ ಬೌಲಿಂಗ್ ದಾಳಿ ಮೂಲಕ ಆಸಿಸ್ ದಾಂಡಿಗರನ್ನು ಕಟ್ಟಿಹಾಕಿದ ಇಂಗ್ಲೆಂಡ್ ತಂಡ ಮೂರು ಪಂದ್ಯಗಳ ಟಿ20 ಟೂರ್ನಿಯಲ್ಲಿ ರೋಚಕ ಜಯ ಸಾಧಿಸಿದೆ.

ಚೀನಾಗೆ ತಿರುಗೇಟು ನೀಡಲು ಭಾರತ, ಆಸ್ಟ್ರೇಲಿಯಾ, ಜಪಾನ್ ಜೊತೆ ನ್ಯಾಟೋ ತರಹದ ಮೈತ್ರಿಗೆ ಅಮೆರಿಕಾ ಸ್ಕೆಚ್!
ಭಾರತ, ಆಸ್ಟ್ರೇಲಿಯಾ ಮತ್ತು ಜಪಾನ್ ನಂತಹ ಇಂಡಿಯಾ ಫೆಸಿಪಿಕ್ ವಲಯದ ರಾಷ್ಟ್ರಗಳೊಂದಿಗೆ ನ್ಯಾಟೋ ತರಹದ ರಕ್ಷಣಾ ಒಪ್ಪಂದ ಮಾಡಿಕೊಳ್ಳುವ ಮೂಲಕ ಚೀನಾ ಪ್ರಾಬಲ್ಯಕ್ಕೆ ಅಂಕುಶ ಹಾಕುವ ನಿಟ್ಟಿನಲ್ಲಿ ಅಮೆರಿಕಾ ಗುರಿ ಹೊಂದಿರುವುದಾಗಿ ಅಮೆರಿಕಾ ರಾಜ್ಯ ಉಪ ಕಾರ್ಯದರ್ಶಿ ಸ್ಟೀಫನ್ ಬೀಗನ್ ಹೇಳಿದ್ದಾರೆ.

ವೃತ್ತಿ ಜೀವನಕ್ಕೆ ವಿದಾಯ ಹೇಳಲು ಪ್ರಮುಖ ಕಾರಣ ತಿಳಿಸಿದ ಗಿಲ್‌ಕ್ರಿಸ್ಟ್!
ವಿಶ್ವದ ಶ್ರೇಷ್ಠ ವಿಕೆಟ್ ಕೀಪರ್‌ಗಳಲ್ಲಿ ಆಸ್ಟ್ರೇಲಿಯಾದ ಮಾಜಿ ಆಟಗಾರ ಆಡಮ್ ಗಿಲ್‌ಕ್ರಿಸ್ಟ್ ಕೂಡ ಒಬ್ಬರು. 2008ರಲ್ಲಿ ಭಾರತದ ವಿರುದ್ಧ ಅಡಿಲೇಡ್‌ನಲ್ಲಿ ನಡೆದಿದ್ದ 4ನೇ ಟೆಸ್ಟ್ ವೇಳೆ ವಿಕೆಟ್ ಕೀಪರ್ ತಕ್ಷಣ ತಮ್ಮ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದರು. ಅಂದು ವಿವಿಯಸ್ ಲಕ್ಷ್ಮಣ್ ಅವರ ಕ್ಯಾಚ್ ಬಿಟ್ಟಿದ್ದೆ ಪ್ರಮುಖ ಕಾರಣ ಎಂಬುದು ವರದಿಗಾರರಿಗೆ ಮನವರಿಕೆಯ

ಪ್ರೇಕ್ಷಕರಿಗೆ ಅನುಮತಿಸಿದರೆ ಮೆಲ್ಬೋರ್ನ್ನಲ್ಲೆ ಆಸ್ಟ್ರೇಲಿಯಾ VS ಭಾರತ ಬಾಕ್ಸಿಂಗ್ ಡೇ ಟೆಸ್ಟ್: ಕ್ರಿಕೆಟ್ ಆಸ್ಟ್ರೇಲಿಯಾ
ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವನ್ನು ಆಯೋಜಿಸುವ ಇಚ್ಛೆಯನ್ನು ಮೆಲ್ಬೋರ್ನ್ ಕ್ರಿಕೆಟ್ ಕ್ರೀಡಾಂಗಣ ಕೈಬಿಟ್ಟಿಲ್ಲ.

ಕೋವಿಡ್-19 ನಿರ್ಬಂಧ: ಕುಟುಂಬದ ಕಡೆ ಮೊದಲ ಆದ್ಯತೆ, ವೃತ್ತಿ ಭವಿಷ್ಯದ ಬಗ್ಗೆ ಮರು ಚಿಂತನೆ- ವಾರ್ನರ್
ಜಾಗತಿಕ ಕೋವಿಡ್-19 ನಿರ್ಬಂಧದಿಂದಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರನಾಗಿ ತನ್ನ ಭವಿಷ್ಯದ ಬಗ್ಗೆ ಮರು ಚಿಂತಿಸಬೇಕಾಗುತ್ತದೆ ಎಂದು ಆಸ್ಟ್ರೇಲಿಯಾ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಹೇಳಿದ್ದಾರೆ.

ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ಹಕ್ಕು ಅಕ್ರಮ ಎಂಬ ಅಮೆರಿಕ ಘೋಷಣೆಗೆ ಆಸ್ಟ್ರೇಲಿಯಾ ಬೆಂಬಲ!
ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ಹಕ್ಕನ್ನು ಅಕ್ರಮ ಎಂಬ ಅಮೆರಿಕಾದ ಅಭಿಪ್ರಾಯಕ್ಕೆ ಆಸ್ಟ್ರೇಲಿಯಾ ಸಹ ಧ್ವನಿಗೂಡಿಸಿದೆ.

