• Tag results for bJp

'ನಮ್ಮ ಸರ್ಕಾರದಲ್ಲಿ ತಂದಿದ್ದ ಯೋಜನೆಗಳನ್ನು ನಿಲ್ಲಿಸಿದ್ದು, ಹಳೆಯ ಕಾರ್ಯಕ್ರಮಗಳಿಗೆ ಹೊಸ ಹೆಸರು ನೀಡಿದ್ದು ಬಿಜೆಪಿ ಸಾಧನೆ': ಸಿದ್ದರಾಮಯ್ಯ ಟೀಕೆ

ತಮ್ಮ ನೇತೃತ್ವದ ಸರ್ಕಾರದ 6 ತಿಂಗಳ ಸಾಧನೆಗಳನ್ನು ಬಿಂಬಿಸುವ ಕಿರುಹೊತ್ತಿಗೆಯನ್ನು ನಿನ್ನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಡುಗಡೆ ಮಾಡಿದ್ದರು. ತಮ್ಮ ಸರ್ಕಾರವನ್ನು ಸಮರ್ಥಿಸಿಕೊಂಡಿದ್ದರು.

published on : 29th January 2022

ಬಿಜೆಪಿ ದೇಶದ ಶ್ರೀಮಂತ ರಾಜಕೀಯ ಪಕ್ಷ: ಬರೋಬ್ಬರಿ 4 ಸಾವಿರ ಕೋಟಿ ರೂ. ಆಸ್ತಿ!

ದೇಶದಲ್ಲೇ ಭಾರತೀಯ ಜನತಾ ಪಾರ್ಟಿ ಅತ್ಯಂತ ಶ್ರೀಮಂತ ಪಕ್ಷವಾಗಿದೆ. ಶುಕ್ರವಾರ ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ತನ್ನ ವರದಿ ಬಿಡುಗಡೆ ಮಾಡಿದ್ದು ಅದರ ಪ್ರಕಾರ...

published on : 29th January 2022

ಜಾರಕಿಹೊಳಿ ಸಹೋದರರ ವಿರುದ್ಧ ತಿರುಗಿಬಿದ್ದ ಬೆಳಗಾವಿ ಬಿಜೆಪಿ ನಾಯಕರು!

ಪಕ್ಷದ ಹಿತಾಸಕ್ತಿಗೆ ವಿರುದ್ಧವಾಗಿರುವ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಬೆಳಗಾವಿಯ ಬಿಜೆಪಿ ಶಾಸಕರು ಹಾಗೂ ಮುಖಂಡರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಗುರುವಾರ ಒತ್ತಾಯಿಸಿದ್ದಾರೆ.

published on : 29th January 2022

ದೆಹಲಿಯಲ್ಲಿ ನನ್ನನ್ನು ತಡೆಯಲಾಗಿದೆ, ಮುಜಾಫರ್‌ನಗರಕ್ಕೆ ಹೋಗಲು ಅವಕಾಶ ನೀಡುತ್ತಿಲ್ಲ: ಅಖಿಲೇಶ್ ಯಾದವ್

ದೆಹಲಿಯಲ್ಲಿ ನನ್ನನ್ನು ತಡೆಯಲಾಗಿದೆ. ಉತ್ತರ ಪ್ರದೇಶದ ಮುಜಾಫರ್‌ನಗರಕ್ಕೆ ತೆರಳಲು ನನ್ನ ಹೆಲಿಕಾಪ್ಟರ್‌ ಗೆ ಅನುಮತಿ ನೀಡುತ್ತಿಲ್ಲ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌ ಶುಕ್ರವಾರ ಆರೋಪಿಸಿದ್ದಾರೆ.

published on : 28th January 2022

ಸೂಪರ್ ಮಾರ್ಕೆಟ್‍ನಲ್ಲಿ ವೈನ್ ಮಾರಾಟ: ವೈನ್ ಮದ್ಯವಲ್ಲ; ರೈತರ ಆದಾಯ ದ್ವಿಗುಣದ ಮೂಲ - ಸಂಜಯ್ ರಾವುತ್

ರಾಜ್ಯದಲ್ಲಿನ ಸೂಪರ್‌ಮಾರ್ಕೆಟ್ ಗಳು ಮತ್ತು ಅಂಗಡಿಗಳಲ್ಲಿ ವೈನ್ ಮಾರಾಟಕ್ಕೆ ಅನುಮತಿ ನೀಡುವ ಮಹಾರಾಷ್ಟ್ರ ಸರ್ಕಾರದ ನಿರ್ಧಾರದಿಂದ ರೈತರ ಆದಾಯವು ದ್ವಿಗುಣಗೊಳಲಿದೆ ಎಂದು ಶಿವಸೇನೆ ನಾಯಕ ಸಂಜಯ್ ರಾವುತ್ ಶುಕ್ರವಾರ ಹೇಳಿದ್ದಾರೆ.

published on : 28th January 2022

ಗೋವಾದಲ್ಲಿ ಬಿಜೆಪಿ ಮಾಸ್ಟರ್ ಸ್ಟ್ರೋಕ್: ಚುನಾವಣಾ ಕಣದಿಂದ ಹಿಂದೆ ಸರಿದ ಕಾಂಗ್ರೆಸ್ ಮುಖಂಡ ರಾಣೆ

ಮಾಜಿ ಮುಖ್ಯಮಂತ್ರಿ ಪ್ರತಾಪ್ ಸಿಂಗ್ ರಾಣೆ ಚುನಾವಣಾ ಕಣದಿಂದ ಹಿಂದೆ ಸರಿದಿದ್ದು,  ಗೋವಾದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಹಿನ್ನೆಡೆಯಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಪೊರಿಯಮ್ ಕ್ಷೇತ್ರದಿಂದ ಸ್ಪರ್ಧಿಸಲು ಪ್ರತಾಪ್ ಸಿಂಗ್ ರಾಣೆ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತು. ಆದರೆ, ಇದೀಗ ಚುನಾವಣೆಗೆ ಸ್ಪರ್ಧಿಸದಿರಲು ರಾಣೆ ನಿರ್ಧರಿಸಿದ್ದಾರೆ.

published on : 28th January 2022

ನಮ್ಮ ಬಸ್ಸು ಖಾಲಿ ಇಲ್ಲ; ದೇವೇಗೌಡರು ಬದುಕಿರುವವರೆಗೂ ಜೆಡಿಎಸ್ ಮುಗಿಸೋಕೆ ಯಾರಿಂದಲೂ ಸಾಧ್ಯವಿಲ್ಲ: ಹೆಚ್ ಡಿ ರೇವಣ್ಣ

ನಮ್ಮ ಬಸ್ಸು ಖಾಲಿ ಇಲ್ಲ, ಖಾಲಿ ಇರುವ ಬಸ್ಸುಗಳಲ್ಲಿ ಸಂಪರ್ಕ ಬೆಳೆಸಲು ಹೋಗುತ್ತಾರೆ, ಎರಡೂ ರಾಷ್ಟ್ರೀಯ ಪಕ್ಷಗಳು 2023ರ ಚುನಾವಣೆಗೆ ಮೊದಲು ನಮ್ಮ ಬಸ್ಸು ಹತ್ತಿರಿ ಎಂದು ಕರೆಯುತ್ತಿರುತ್ತಾರೆ. ಎರಡೂ ರಾಷ್ಟ್ರೀಯ ಪಕ್ಷಗಳ ಸವಾಲುಗಳನ್ನು ಸ್ವೀಕರಿಸುತ್ತೇವೆ ಎಂದು ಜೆಡಿಎಸ್ ನಾಯಕ ಹೆಚ್ ಡಿ ರೇವಣ್ಣ ಹೇಳಿದ್ದಾರೆ.

published on : 28th January 2022

ಪ್ರಧಾನಿ ಮೋದಿ ತೆಗಳುವ ಹುಚ್ಚುತನದಿಂದ ಭಾರತದ ವ್ಯಕ್ತಿತ್ವಕ್ಕೆ ಧಕ್ಕೆ: ಹಮೀದ್ ಅನ್ಸಾರಿ ವಿರುದ್ಧ ಬಿಜೆಪಿ ವಾಗ್ದಾಳಿ

ಭಾರತ ಹಿಂದೂ ರಾಷ್ಟ್ರವಾಗುತ್ತಿದ್ದು, ಜನರಿಗೆ ಅಭದ್ರತೆ ಕಾಡುತ್ತಿದೆ ಎಂದು ಭಾರತದ ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಹೇಳಿಕೆಗೆ ಬಿಜೆಪಿ ವಿರೋಧ ವ್ಯಕ್ತ ಪಡಿಸಿದೆ.

published on : 28th January 2022

ಫೆಬ್ರವರಿ 14 ರಿಂದ ಜಂಟಿ ಅಧಿವೇಶನ: ಸರ್ಕಾರದ ವಿರುದ್ಧ ಹರಿಹಾಯಲು ಕಾಂಗ್ರೆಸ್, ಜೆಡಿಎಸ್ ಸಿದ್ಧತೆ

ಫೆಬ್ರವರಿ 14 ರಿಂದ ವಿಧಾನಸಭೆ ಮತ್ತು ಪರಿಷತ್ತಿನ ಜಂಟಿ ಅಧಿವೇಶನ ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ಆಡಳಿತಾರೂಢ ಬಿಜೆಪಿ ವಿರುದ್ಧ ಹರಿಹಾಯಲು ಪ್ರತಿಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್ ಕಸರತ್ತು ಆರಂಭಿಸಿವೆ.

published on : 28th January 2022

ಮಹಾರಾಷ್ಟ್ರದ 12 ಬಿಜೆಪಿ ಶಾಸಕರ ಒಂದು ವರ್ಷದ ಅಮಾನತು ನಿರ್ಣಯ ರದ್ದುಪಡಿಸಿದ ಸುಪ್ರೀಂ ಕೋರ್ಟ್

 ಮಹಾರಾಷ್ಟ್ರ ವಿಧಾನಸಭೆಯಿಂದ 12 ಬಿಜೆಪಿ ಶಾಸಕರ ಒಂದು ವರ್ಷದ ಅಮಾನತು ನಿರ್ಣಯವನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದೆ. ಇದು ಅಸಂವಿಧಾನಿಕ ಮತ್ತು ಕಾನೂನು ಬಾಹಿರ ಎಂದು ಕರೆದಿದೆ.

published on : 28th January 2022

ಬೆಳಗಾವಿ ಬಿಜೆಪಿಯಲ್ಲಿ ಆಂತರಿಕ ಜಗಳ: ಜಾರಕಿಹೊಳಿ ಬ್ರದರ್ಸ್ ವಿರುದ್ಧ ಸಿಎಂ ಬಳಿ ದೂರು ಹೊತ್ತು ತರಲಿದ್ದಾರೆ ಶಾಸಕರು!

ಇತ್ತೀಚಿನ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶದ ಸೋಲು ಇನ್ನೂ ಹಲವು ರಾಜಕೀಯ ಮುಖಂಡರನ್ನು ಮರೆಸಿದಂತೆ ಕಾಣುತ್ತಿಲ್ಲ. ಅದರಲ್ಲೂ ಕುಂದಾನಗರಿ ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿ ಸೋಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಬಲವು ಬಿಜೆಪಿ ನಾಯಕರಿಗೆ ತೀರಾ ಕಹಿ ಅನುಭವವನ್ನುಂಟುಮಾಡಿತ್ತು. 

published on : 28th January 2022

ಶಾಸಕರ ಭವನ ಬಳಿ ಪೊಲೀಸ್ ಸಿಬ್ಬಂದಿ ಮೇಲೆ ವಾಗ್ವಾದ, ಹಲ್ಲೆ ಆರೋಪ: ಬಿಜೆಪಿ ಶಾಸಕ ಎಂ ಪಿ ಕುಮಾರಸ್ವಾಮಿ ಹೇಳಿದ್ದೇನು?

ವಿಧಾನ ಸೌಧದ ಶಾಸಕರ ಭವನ ಬಳಿ ಮೂಡಿಗೆರೆ ಶಾಸಕ ಎಂ ಪಿ ಕುಮಾರಸ್ವಾಮಿ ಕಳೆದ ರಾತ್ರಿ ಪೊಲೀಸ್ ಸಿಬ್ಬಂದಿ ಮೇಲೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.

published on : 28th January 2022

ರಾಜ್ಯದಲ್ಲಿ 'ಆಯಾ ರಾಮ್, ಗಯಾ ರಾಮ್' ಸೀಸನ್ ಶೀಘ್ರದಲ್ಲೇ ಆರಂಭ: ಸತೀಶ್ ಜಾರಕಿಹೊಳಿ

ಶಾಸಕರ ಪಕ್ಷಾಂತರಕ್ಕೆ ಸಂಬಂಧಿಸಿದಂತೆ ಬಿಜೆಪಿ-ಕಾಂಗ್ರೆಸ್ ವಾಗ್ಯುದ್ಧ ಮುಂದುವರೆದಿದ್ದು, ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುವಾಗ ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಶಾಸಕರ ಪಕ್ಷಾಂತರಗೊಳ್ಳುವುದು ಶೀಘ್ರದಲ್ಲೇ ಆರಂಭಗೊಳ್ಳಲಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಗುರುವಾರ ಹೇಳಿದ್ದಾರೆ.

published on : 28th January 2022

ಉತ್ತರಾಖಂಡ: ಕಾಂಗ್ರೆಸ್ ಉಚ್ಛಾಟಿತ ನಾಯಕ ಕಿಶೋರ್ ಉಪಾಧ್ಯಾಯ ಬಿಜೆಪಿ ಸೇರ್ಪಡೆ

ಕಿಶೋರ್ ಉಪಾಧ್ಯಾಯ ತಾವು ಬಿಜೆಪಿ ನಾಯಕರೊಡನೆ ಇರುವ ಚಿತ್ರವು ವೈರಲ್ ಆಗಿದ್ದೇ ತಮ್ಮ ಉಚ್ಛಾಟನೆಗೆ ಕಾರಣ ಎಂದಿದ್ದಾರೆ.

published on : 27th January 2022

ಈ ಬಾರಿ ನಿಮ್ಮದು ಕ್ಷೇತ್ರಾಂತರವೋ, ಪಕ್ಷಾಂತರವೋ? ಮತ್ತೊಮ್ಮೆ ವಲಸೆಗೆ ವೇದಿಕೆ ಸೃಷ್ಟಿಸಿಕೊಳ್ಳುತ್ತಿದ್ದೀರಾ?

ಬಿಜೆಪಿ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ನೀಡಿದ್ದ ಹೇಳಿಕೆ ಸಂಬಂಧ ಬಿಜೆಪಿ ಟ್ವೀಟ್ ಮೂಲಕ ತಿರುಗೇಟು ನೀಡಿದೆ.

published on : 27th January 2022
1 2 3 4 5 6 > 

ರಾಶಿ ಭವಿಷ್ಯ