Centre

ಲಾಕ್ ಡೌನ್ ಸಡಿಲಿಕೆ, ನಿಯಮ ಪಾಲನೆ ನಿರ್ಲಕ್ಷ್ಯ ಕೋವಿಡ್-19 ಏರಿಕೆಗೆ ಕಾರಣ: ಕೇಂದ್ರ
ಲಾಕ್ ಡೌನ್ ಸಡಿಲಿಕೆ, ಸಮುದಾಯಗಳಲ್ಲಿ ಕೋವಿಡ್-19 ನಿಯಮ ಪಾಲನೆಯೆಡೆಗೆ ತೋರುತ್ತಿರುವ ನಿರ್ಲಕ್ಷ್ಯಗಳು ಕೋವಿಡ್-19 ಪ್ರಕರಣಗಳ ಏರಿಕೆಗೆ ಕಾರಣ ಎಂದು ಕೇಂದ್ರ ಸರ್ಕಾರ ಹೇಳಿದೆ.

ಪೆಗಾಸಸ್ ವಿವಾದ: ರಾಹುಲ್ ಗಾಂಧಿ 'ಅಪ್ರಬುದ್ಧ'ರಂತೆ ಮಾತನಾಡುತ್ತಿದ್ದಾರೆ: ಕೇಂದ್ರ ಸರ್ಕಾರ
ಪೆಗಾಸಸ್ ವಿವಾದ ಸಂಬಂಧ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್'ಡಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಕೇಂದ್ರ ಸರ್ಕಾರ ಗುರುವಾರ ತಿರುಗೇಟು ನೀಡಿದೆ.

ರಾಜ್ಯಗಳ ಬಳಿ ಇನ್ನೂ 2.98 ಕೋಟಿ ಡೋಸ್ ಕೋವಿಡ್ ಲಸಿಕೆಗಳಿವೆ: ಕೇಂದ್ರ ಸರ್ಕಾರ
ರಾಜ್ಯಗಳು ಕೇಂದ್ರಾಡಳಿತ ಪ್ರದೇಶಗಳ ಹಾಗೂ ಖಾಸಗಿ ಆಸ್ಪತ್ರೆಗಳ ಬಳಿ 2.98 ಕೋಟಿಗೂ ಹೆಚ್ಚು ಡೋಸ್ ಕೋವಿಡ್-19 ಲಸಿಕೆಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಶನಿವಾರ ಹೇಳಿದೆ.

ಅಧ್ಯಯನಗಳು ಹೇಳುವಂತೆ ಕೋವಿಡ್ ಸಾವುಗಳ ಅಪಾರ ಲೆಕ್ಕಾಚಾರ ಅವಾಸ್ತವಿಕ: ಕೇಂದ್ರ ಸರ್ಕಾರ
ದೇಶದಲ್ಲಿ ಕೋವಿಡ್ ಸಾವುಗಳ ಲೆಕ್ಕಾಚಾರದ ವಿವಾದ ಮಧ್ಯೆ, ಆಸ್ಪತ್ರೆಗಳಲ್ಲಿ ಕೋವಿಡ್ ಸಾವಿನ ಆಡಿಟ್ ನಡೆಸುವಂತೆ ಹಾಗೂ ಯಾವುದೇ ಪ್ರಕರಣಗಳು ಅಥವಾ ಸಾವಿನ ವರದಿ ಕೈಬಿಡದಂತೆ ವರದಿ ಸಲ್ಲಿಸುವಂತೆ ಯಾವಾಗಲೂ ರಾಜ್ಯಗಳಿಗೆ ಸಲಹೆ ನೀಡುತ್ತಿದ್ದಾಗಿ ಕೇಂದ್ರ ಸರ್ಕಾರ ಗುರುವಾರ ಪುನರುಚ್ಚರಿಸಿದೆ.

'ಆಕ್ಸಿಜನ್ ಕೊರತೆಯಿಂದ ದೇಶದಲ್ಲಿ ಯಾರೊಬ್ಬರೂ ಸತ್ತಿಲ್ಲ': ಕೇಂದ್ರದ ಹೇಳಿಕೆ ವಿರುದ್ಧ ದೆಹಲಿ ಆರೋಗ್ಯ ಸಚಿವ ತೀವ್ರ ಕಿಡಿ
ಆಕ್ಸಿಜನ್ ಕೊರತೆಯಿಂದ ದೇಶದಲ್ಲಿ ಯಾರೊಬ್ಬರೂ ಸತ್ತಿಲ್ಲ ಎಂಬ ಕೇಂದ್ರ ಸರ್ಕಾರದ ಹೇಳಿಕೆ ವಿರುದ್ಧ ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಅವರು ಬುಧವಾರ ತೀವ್ರವಾಗಿ ಕಿಡಿಕಾರಿದ್ದಾರೆ.

ರಾಜ್ಯದ 30 ಲಕ್ಷ ಡೋಸ್ ಕೋವಿಡ್ ಲಸಿಕೆ ಬೇಡಿಕೆ ಶೀಘ್ರಗತಿಯಲ್ಲಿ ಪರಿಗಣಿಸಿ: ಕೇಂದ್ರಕ್ಕೆ ಹೈಕೋರ್ಟ್ ಸೂಚನೆ
ಕೋವಿಡ್ ಸಾಂಕ್ರಾಮಿಕ ರೋಗ ನಿಯಂತ್ರಿಸಲು ಕೈಗೊಂಡಿರುವ ಲಸಿಕಾ ಅಭಿಯಾನಕ್ಕೆ ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ 2ನೇ ಡೋಸ್ಗೆ ಲಸಿಕೆ ಕೊರತೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯದ 30 ಲಕ್ಷ ಡೋಸ್ ಲಸಿಕೆ ಬೇಡಿಕೆಯನ್ನು ಶೀಘ್ರಗತಿಯಲ್ಲಿ ಪರಿಗಣಿಸುವಂತೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಶುಕ್ರವಾರ ಸೂಚನೆ ನೀಡಿದೆ.

ತೈಲ ಬೆಲೆ ಇಳಿಸಿ, ಜಿಎಸ್ ಟಿ ಸರಳೀಕರಣಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಶಶಿ ತರೂರ್ ಒತ್ತಾಯ
ಇಂಧನದ ಮೇಲಿನ ತೆರಿಗೆಯನ್ನು ಕೇಂದ್ರ ಸರ್ಕಾರದ ಬೊಕ್ಕಸವನ್ನು ತುಂಬುವ ಸಾಧನವನ್ನಾಗಿ ಪ್ರಧಾನಿ ನರೇಂದ್ರ ಮೋದಿ ಬಳಸಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಶಶಿ ತರೂರ್ ಆರೋಪಿಸಿದ್ದಾರೆ.

ಕೇಂದ್ರದಿಂದ ಕರ್ನಾಟಕಕ್ಕೆ 8,542 ಕೋಟಿ ರೂ. ಜಿಎಸ್ ಟಿ ಪರಿಹಾರ ಬಿಡುಗಡೆ
ಜಿಎಸ್‌ಟಿ ಪರಿಹಾರದ ಬದಲಾಗಿ 75,000 ಕೋಟಿ ರೂ.ಗಳನ್ನು ‘ಬ್ಯಾಕ್-ಟು-ಬ್ಯಾಕ್ ಸಾಲ ಸೌಲಭ್ಯ’ ಅಡಿಯಲ್ಲಿ ರಾಜ್ಯಗಳಿಗೆ ಬಿಡುಗಡೆ ಮಾಡಿರುವುದಾಗಿ ಕೇಂದ್ರ ಹಣಕಾಸು ಸಚಿವಾಲಯ ಗುರುವಾರ ತಿಳಿಸಿದೆ.

ಜಿಎಸ್ ಟಿ ಪರಿಹಾರವಾಗಿ ಕೇಂದ್ರದಿಂದ ರಾಜ್ಯಗಳಿಗೆ 75,000 ಕೋಟಿ ರೂ. ಬಿಡುಗಡೆ
ಜಿಎಸ್ ಟಿ ಆದಾಯದ ಕೊರತೆಯನ್ನು ಸರಿದೂಗಿಸಲು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ 75,000 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಗುರುವಾರ ತಿಳಿಸಿದೆ.

