Centre

ಮಕ್ಕಳಲ್ಲಿ ಕೊರೋನಾ ಬಂದರೆ ಏನು ಮಾಡಬೇಕು, ಮುನ್ನೆಚ್ಚರಿಕೆ ಹೇಗೆ?: ಕೇಂದ್ರದಿಂದ ಮಾರ್ಗಸೂಚಿ ಪ್ರಕಟ
ಕೊರೊನಾ ಸೋಂಕಿನ ಎರಡನೇ ಅಲೆಯ ತೀವ್ರತೆ ದೇಶದಲ್ಲಿ ನಿಧಾನವಾಗಿ ಇಳಿಕೆಯಾಗುತ್ತಿದೆ. ಇದೇ ಹೊತ್ತಿಗೆ ಕೊರೋನಾ ಮೂರನೇ ಅಲೆ ಏಳುವ ಆತಂಕ ಜನರನ್ನು ತೀವ್ರವಾಗಿ ಕಾಡುತ್ತಿದೆ.

ನನ್ನ ಮುಂದಿನ ಗುರಿ ನರೇಂದ್ರ ಮೋದಿ ಸರ್ಕಾರವನ್ನು ಅಸ್ಥಿರಗೊಳಿಸುವುದು: ಮಮತಾ ಬ್ಯಾನರ್ಜಿ
ನನ್ನ ಗುರಿ ಈಗ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರವನ್ನು ಅಸ್ಥಿರಗೊಳಿಸುವುದು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

14,788 ಕೋಟಿ ರೂ. ವೆಚ್ಚದ ನಮ್ಮ ಮೆಟ್ರೋ 2ಎ, 2ಬಿ ಯೋಜನೆಗೆ ಕೇಂದ್ರ ಸಮ್ಮತಿ
14,788 ಕೋಟಿ ರೂ. ವೆಚ್ಚದ ನಮ್ಮ ಮೆಟ್ರೋ ಯೋಜನೆಯ 2ಎ, 2ಬಿ ಹಂತಕ್ಕೆ ಕೇಂದ್ರ ಸರ್ಕಾರ ಸೋಮವಾರ ಹಸಿರು ನಿಶಾನೆ ತೋರಿದೆ.

ದೇಶಾದ್ಯಂತ ಮನೆ ಬಾಗಿಲಿಗೆ ಪಡಿತರ ಪೂರೈಕೆ ಯೋಜನೆ ಅನುಷ್ಠಾನಕ್ಕೆ ಕೇಜ್ರಿವಾಲ್ ಒತ್ತಾಯ
ಸಾರ್ವಜನಿಕರ ಮನೆ ಬಾಗಿಲಿಗೆ ಪಡಿತರ ಪೂರೈಕೆ ಯೋಜನೆಯನ್ನು ಕೇಂದ್ರದಿಂದ ಸರ್ಕಾರದಿಂದ ಏಕೆ ಸ್ಥಗಿತಗೊಳಿಸಲಾಗಿದೆ ಎಂದು ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ರಾಷ್ಟ್ರೀಯ ಹಿತಾಸಕ್ತಿಯಿಂದ ಈ ಯೋಜನೆ ಅನುಷ್ಠಾನಕ್ಕೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದ್ದಾರೆ.

ಕೇಂದ್ರದ ರಾಜಕೀಯ ಭವಿಷ್ಯ ಬಿಜೆಪಿ, ಕಾಂಗ್ರೆಸ್ ಕೈಯಲ್ಲಿದೆ: ಹೆಚ್ ಡಿ ದೇವೇಗೌಡ
ಕರ್ನಾಟಕದ 'ಮಣ್ಣಿನ ಮಗ' ಎಂದು ಹೆಸರು ಪಡೆದ ಹೆಚ್ ಡಿ ದೇವೇಗೌಡರು ದೇಶದ ಅತ್ಯುನ್ನತ ಹುದ್ದೆ ಪ್ರಧಾನ ಮಂತ್ರಿಯಾಗಿ 25 ವರ್ಷ ಕಳೆದಿದೆ.

ಐಟಿ ನಿಯಮ ಅನುಸರಣೆ: ಕೇಂದ್ರ ಸರ್ಕಾರದಿಂದ ಟ್ವಿಟರ್ ಗೆ 'ಕೊನೆಯ' ನೋಟಿಸ್!
ಹೊಸ ಐಟಿ ನಿಯಮಗಳನ್ನು ಕೂಡಲೇ ಪಾಲಿಸುವಂತೆ ಕೊನೆಯದಾದ ಅವಕಾಶವೊಂದನ್ನು ನೀಡಿ ಕೇಂದ್ರ ಸರ್ಕಾರ ಶನಿವಾರ ಟ್ವಿಟರ್ ಗೆ ನೋಟಿಸ್ ನೀಡಿದೆ.ನಿಯಮಗಳನ್ನು ಪಾಲಿಸುವಲ್ಲಿ ವಿಫಲವಾದರೆ ಐಟಿ ಕಾಯ್ದೆಯಡಿ ಕಾನೂನು ಹೊಣೆಗಾರಿಕೆಯಿಂದ ವಿನಾಯಿತಿ ಕಳೆದುಕೊಳ್ಳಲು ಕಾರಣವಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ಜೋಕೆ... ಎಚ್ಚರ ತಪ್ಪಿದರೆ ಕೊರೋನಾ 3ನೇ ಅಲೆ ಅಪಾಯ ಕಟ್ಟಿಟ್ಟ ಬುತ್ತಿ: ಕೇಂದ್ರ ಸರ್ಕಾರ
ಕೋವಿಡ್-19 ಎರಡನೇ ಅಲೆಯನ್ನು ನಿಯಂತ್ರಿಸಲು ಈಗ ಕೈಗೊಳ್ಳುತ್ತಿರುವ ನಿರ್ಬಂಧಗಳು ಮತ್ತು ಕ್ರಮಗಳನ್ನು ಕೈಬಿಟ್ಟರೆ, ನಿರ್ಬಂಧ ಸಡಿಲಿಸಿದರೆ ಮೂರನೇ ಕೋವಿಡ್-19 ಅಲೆಯು ದೇಶವನ್ನು ಅಪ್ಪಳಿಸಿ ಇನ್ನಷ್ಟು ಸಾವು ನೋವು ಆಗಬಹುದು ಎಂದು ಕೇಂದ್ರ ಸರ್ಕಾರದ ಉನ್ನತ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಕೋವಿಡ್ ಚಿಕಿತ್ಸೆ ಕೋರಿ ಅಸಾರಾಮ್ ಬಾಪು ಅರ್ಜಿ: ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್
ಉತ್ತರಾಖಂಡದ ಹರಿದ್ವಾರ ಬಳಿಯ ಆಯುರ್ವೇದ ಕೇಂದ್ರವೊಂದರಲ್ಲಿಯೇ ಚಿಕಿತ್ಸೆ ಪಡೆಯಬೇಕೆಂದು ಶಿಕ್ಷೆಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸುವಂತೆ ಕೋರಿ ಸ್ವಯಂ ಘೋಷಿತ ದೇವಮಾನವ ಮತ್ತು ಅತ್ಯಾಚಾರ ಅಪರಾಧಿ ಅಸರಾಮ್ ಬಾಪು ಸಲ್ಲಿಸಿದ್ದ ಅರ್ಜಿ ಸಂಬಂಧ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ನೋಟಿಸ್ ನೀಡಿದೆ.

ರಾಜ್ಯಗಳ ಬಳಿ ಇನ್ನೂ 1.93 ಕೋಟಿ ಕೋವಿಡ್ ಲಸಿಕೆ ಲಭ್ಯ: ಕೇಂದ್ರ ಆರೋಗ್ಯ ಸಚಿವಾಲಯ
ರಾಜ್ಯಗಳ ಬಳಿ ಇನ್ನೂ 1.93 (1.93,95,287) ಕೋಟಿಗೂ ಹೆಚ್ಚು ಕೋವಿಡ್ ಲಸಿಕೆಗಳು ಲಭ್ಯವಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಸಚಿವಾಲಯ ಶುಕ್ರವಾರ ತಿಳಿಸಿದೆ.

