Centre

ವಲಸೆ ಕಾರ್ಮಿಕರು ಕಾಲ್ನಡಿಗೆಯಲ್ಲಿ ಊರುಗಳಿಗೆ ತೆರಳದಂತೆ ನೋಡಿಕೊಳ್ಳಿ: ರಾಜ್ಯಗಳಿಗೆ ಕೇಂದ್ರ ಸೂಚನೆ
ದೇಶದ ವಿವಿಧ ಭಾಗಗಳಿಂದ ಕಾಲ್ನೆಡಿಗೆಯಲ್ಲಿ ತಮ್ಮ ಊರುಗಳಿಗೆ ತೆರಳುತ್ತಿರುವ ವಲಸೆ ಕಾರ್ಮಿಕರ ಸಂಕಷ್ಟ ಪರಿಸ್ಥಿತಿಯನ್ನು ಪರಿಹರಿಸುವ ಕ್ರಮವಾಗಿ ಸಮನ್ವಯದ ಮೂಲಕ ಸಹಕರಿಸುವಂತೆ ಎಲ್ಲ ರಾಜ್ಯ ಸರ್ಕಾರಗಳಿಗೆ ಕೇಂದ್ರ ಗೃಹ ಸಚಿವಾಲಯ ಸೂಚನೆ ನೀಡಿದೆ.

ಆಂಫಾನ್ ಚಂಡಮಾರುತ:ಶ್ರಮಿಕ್ ರೈಲನ್ನು 3 ದಿನ ಸ್ಥಗಿತಗೊಳಿಸಿ ಎಂದು ಕೇಂದ್ರವನ್ನು ಕೇಳಿಕೊಂಡ ಒಡಿಶಾ ಸರ್ಕಾರ
ಆಂಫಾನ್ ಚಂಡಮಾರುತ ಹಿನ್ನೆಲೆಯಲ್ಲಿ ನಾಳೆಯಿಂದ ಮೂರು ದಿನಗಳ ಕಾಲ ಶ್ರಮಿಕ್ ವಿಶೇಷ ರೈಲು ಸೇವೆಯನ್ನು ಸ್ಥಗಿತಗೊಳಿಸುವಂತೆ ಒಡಿಶಾ ಸರ್ಕಾರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

ನೂತನ ಲಾಕ್'ಡೌನ್ ಮಾರ್ಗದರ್ಶನದಲ್ಲಿ ಸಾರಿಗೆ ಬಸ್ ಸಂಚಾರಕ್ಕೆ ಅವಕಾಶ ಕಲ್ಪಿಸಿ: ಕೇಂದ್ರಕ್ಕೆ ಸಚಿವ ಲಕ್ಷ್ಮಣ್ ಸವದಿ ಮನವಿ
ನೂತನ ಲಾಕ್'ಡೌನ್ ಮಾರ್ಗದರ್ಶನದಲ್ಲಿ ಸಾರಿಗೆ ಬಸ್ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಕೇಂದ್ರ ಸರ್ಕಾರಕ್ಕೆ ಸಾರಿಗೆ ಸಚಿವ ಹಾಗೂ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿಯವರು ಭಾನುವಾರ ಮನವಿ ಮಾಡಿಕೊಂಡಿದ್ದಾರೆ.

ಸಾರ್ವಜನಿಕ ವಲಯ ನೀತಿ, ಮನ್ರೇಗಾ ನೆರವು, ಬ್ಯಾಂಕ್ ದಿವಾಳಿತನ ಕಾಯ್ದೆಯ ಹೊಸ ನಿಯಮ ಪ್ರಕಟಿಸಿದ ವಿತ್ತ ಸಚಿವೆ
ಇನ್ನು ಮುಂದೆ ಎಲ್ಲಾ ವಲಯಗಳಲ್ಲಿ ಖಾಸಗಿ ಕಂಪೆನಿಗಳಿಗೆ ಹೂಡಿಕೆ ಮಾಡಲು ಕೇಂದ್ರ ಸರ್ಕಾರ ಅವಕಾಶ ಮಾಡಿಕೊಡಲಿದೆ ಎಂದು ಕೇಂದ್ರ ವಿತ್ತ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ರಾಜ್ಯಗಳೊಂದಿಗೆ ತಾರತಮ್ಯ ಮಾಡಿಲ್ಲ: ವಂದೇ ಭಾರತ್ ಮಿಷನ್ ಕುರಿತು ಪಶ್ಚಿಮ ಬಂಗಾಳ ಆರೋಪ ತಿರಸ್ಕರಿಸಿದ ಕೇಂದ್ರ
ವಂದೇ ಭಾರತ್ ಮಿಷನ್'ನಲ್ಲಿ ಕೇಂದ್ರ ಸರ್ಕಾರ ಪಶ್ಚಿಮ ಬಂಗಾಳ ರಾಜ್ಯಕ್ಕೆ ತಾರತಮ್ಯ ಮಾಡುತ್ತಿದೆ ಎಂಬ ಆರೋಪವನ್ನು ವಿದೇಶಾಂಗ ಸಚಿವಾಲಯ ತಿರಸ್ಕರಿಸಿದ್ದು, ರಾಜ್ಯಗಳೊಂದಿಗೆ ಕೇಂದ್ರ ಸರ್ಕಾರ ಎಂದಿಗೂ ತಾರತಮ್ಯ ಮಾಡಿಲ್ಲ ಎಂದು ಶುಕ್ರವಾರ ಹೇಳಿದೆ.

ಬ್ಯಾಂಕ್ ಗಳಿಂದ ಸಾಲ, ವೇತನ ಪ್ರೋತ್ಸಾಹ ಧನಕ್ಕೆ ಎಂಎಸ್ ಎಂಇ ಉದ್ಯಮಗಳ ಒತ್ತಾಯ
ಲಾಕ್ ಡೌನ್ ತೀವ್ರತೆಯನ್ನು ಭರಿಸಲು ಅತಿಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಕೇಂದ್ರ ಸರ್ಕಾರ ಪ್ಯಾಕೇಜ್ ಘೋಷಿಸಿದ್ದರೂ ಈ ವಲಯದಲ್ಲಿ ಅಸಮಾಧಾನ ಕೇಳಿಬರುತ್ತಿದೆ.

10 ಲಕ್ಷ ಕೋಟಿ ರೂ. ಪ್ರೋತ್ಸಾಹಕ ಧನ ನೀಡುವಂತೆ ಎಫ್ ಐಸಿಸಿಐ ಒತ್ತಾಯ!
ದೀರ್ಘಕಾಲೀನ ಆರ್ಥಿಕ ಕುಸಿತವನ್ನು ತಪ್ಪಿಸಲು ಬೇಡಿಕೆ ಮತ್ತು ಪೂರೈಕೆಯನ್ನು ಪ್ರೋತ್ಸಾಹಿಸಲು 9 ರಿಂದ 10 ಲಕ್ಷ ಕೋಟಿ ಅಥವಾ ಜಿಡಿಪಿಯ ಶೇಕಡಾ ನಾಲ್ಕರಿಂದ ಐದರಷ್ಟು ಪ್ರೋತ್ಸಾಹಕದ ಅವಶ್ಯಕತೆ ಇದೆ ಎಂದು ಭಾರತೀಯ ವಾಣಿಜ್ಯ ಮತ್ತು ಕೈಗಾರಿಕೆಗಳ ಮಹಾ ಒಕ್ಕೂಟ - ಎಫ್ ಐಸಿಸಿಐ ಒತ್ತಾಯಿಸಿದೆ.

ಕೇಂದ್ರದಿಂದ ಬರಬೇಕಿರುವ ಬಾಕಿ ಹಣ ಕೇಳಿ: ಮುಖ್ಯಮಂತ್ರಿಗೆ ಎಚ್‌ಡಿಕೆ ಸಲಹೆ
ಕೋವಿಡ್ ಪ್ಯಾಕೇಜ್' ಜೊತೆಗೆ ಜಿಎಸ್‌ಟಿ ಬಾಕಿ, ನೆರೆ-ಬರ ಪರಿಹಾರ ಸೇರಿದಂತೆ ಕೇಂದ್ರದಿಂದ ಬರಬೇಕಾದ ಇತರ ಬಾಕಿ ಹಣದ ಬಗ್ಗೆಯೂ ಬಿ.ಎಸ್.ಯಡಿಯೂರಪ್ಪ ಅವರು ಮೋದಿ ಜೊತೆಗಿನ ಸಭೆಯಲ್ಲಿ ಕೇಳಬೇಕು. ಲಾಕ್ ಡೌನ್ ನಿಂದಾಗಿ ರಾಜ್ಯ ಹಣಕಾಸಿನ ತೊಂದರೆ ಅನುಭವಿಸುತ್ತಿದೆ...

ಕೇಂದ್ರದಿಂದ ಮುಂದಿನವಾರ ಮತ್ತೊಂದು ಕೊರೋನ ಪ್ಯಾಕೇಜ್?
ಕೊರೊನಾ ಸಂಕಷ್ಟ ಮತ್ತು ಲಾಕ್ ಡೌನ್ ನಿಂದ ತೊಂದರೆಗೆ ಸಿಲುಕಿದ ದೇಶದ ಬಡವರ ಕಷ್ಟ ನಿವಾರಣೆಗಾಗಿ ಕೇಂದ್ರ ಶೀಘ್ರದಲ್ಲೇ ಮತ್ತೊಂದು ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಿದೆ ಎಂದು ಹೇಳಲಾಗುತ್ತಿದೆ.

