Chennai

ಐಪಿಎಲ್ ಹಿನ್ನೆಲೆ: ತರಬೇತಿ ಶಿಬಿರಕ್ಕಾಗಿ ಚೆನ್ನೈಗೆ ಆಗಮಿಸಿದ ಧೋನಿ, ಮತ್ತಿತರ ಸಿಎಸ್ ಕೆ ಆಟಗಾರರು
ಯುಎಇನಲ್ಲಿ ಸೆಪ್ಟೆಂಬರ್ 19ರಿಂದ ನಡೆಯಲಿರುವ ಐಪಿಎಲ್ ಹಿನ್ನೆಲೆಯಲ್ಲಿ ಮಾಜಿ ಟೀಂ ಇಂಡಿಯಾ ನಾಯಕ ಎಂ.ಎಸ್. ಧೋನಿ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕೆಲ ಆಟಗಾರರು ಅಲ್ಪಾವಧಿಯ ತರಬೇತಿ ಶಿಬಿರಕ್ಕಾಗಿ ಶುಕ್ರವಾರ ಚೆನ್ನೈಗೆ ಆಗಮಿಸಿದ್ದಾರೆ.

ಕೊರೋನಾ ಪಾಸಿಟಿವ್ ಬಂದಿದ್ದ ಗಾಯಕ ಎಸ್ಪಿ ಬಾಲಸುಬ್ರಹ್ಮಣ್ಯಂ ಸ್ಥಿತಿ ಗಂಭೀರ, ಐಸಿಯುನಲ್ಲಿ ಚಿಕಿತ್ಸೆ!
ಮಹಾಮಾರಿ ಕೊರೋನಾಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ವೆಂಟಿಲೇಟರ್ ಅಳವಡಿಸಲಾಗಿದೆ.

ಬೈರುತ್ ಸ್ಫೋಟ ಹಿನ್ನೆಲೆ: 700 ಟನ್ ಅಮೋನಿಯಂ ನೈಟ್ರೇಟ್ ಚೆನ್ನೈ ನಿಂದ ಹೈದರಾಬಾದ್ ಗೆ ಸ್ಥಳಾಂತರ
ಲೆಬನಾನ್ ರಾಜಧಾನಿ ಬೈರುತ್ ನಗರದ ಬಂದರಿನಲ್ಲಿ ಸಂಭವಿಸಿದ್ದ ಭೀಕರ ಸ್ಫೋಟಕ್ಕೆ ಕಾರಣವಾಗಿದ್ದ ಅಮೋನಿಯಂ ನೈಟ್ರೇಟ್ ಅನ್ನು ಚೆನ್ನೈ ಬಂದರಿನಿಂದ ಹೈದರಾಬಾದ್ ಗೆ ಸ್ಥಳಾಂತರ ಮಾಡಲಾಗಿದೆ.

ಚೆನ್ನೈ-ಅಂಡಮಾನ್ ಸಬ್'ಮರೈನ್ ಆಪ್ಟಿಕಲ್ ಫೈಬರ್ ಕನೆಕ್ಟಿವಿಟಿಗೆ ಪ್ರಧಾನಿ ಮೋದಿ ಚಾಲನೆ
ಬಹು ನಿರೀಕ್ಷಿತ ಚೆನ್ನೈ-ಅಂಡಮಾನ್ ಸಬ್ ಮರೈನ್ ಆಪ್ಟಿಕಲ್ ಫೈಬರ್ ಕನೆಕ್ಟಿವಿಟಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ಚಾಲನೆ ನೀಡಿದ್ದಾರೆ.

ನೂತನ ಶಿಕ್ಷಣ ನೀತಿಗೆ ತಮಿಳುನಾಡು ವಿರೋಧ: ತ್ರಿಭಾಷಾ ಸೂತ್ರಕ್ಕೆ ಅವಕಾಶ ನೀಡುವುದಿಲ್ಲ ಎಂದ ಸಿಎಂ ಪಳನಿ ಸ್ವಾಮಿ
ಕೇಂದ್ರ ಸರ್ಕಾರ ಜಾರಿಗೆ ತರಲು ಇಚ್ಛಿಸಿರುವ ನೂತನ ಶಿಕ್ಷಣ ನೀತಿಗೆ ತಮಿಳುನಾಡು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ರಾಜ್ಯದಲ್ಲಿ ತ್ರಿಭಾಷಾ ಸೂತ್ರಕ್ಕೆ ಅವಕಾಶ ನೀಡುವುದಿಲ್ಲ ಎಂದು ಸಿಎಂ ಪಳನಿ ಸ್ವಾಮಿ ಹೇಳಿದ್ದಾರೆ.

ತಮಿಳುನಾಡು: ಒಂದೇ ದಿನ 5,879 ಹೊಸ ಕೊರೋನಾ ಸೋಂಕು ಪ್ರಕರಣಗಳ ದಾಖಲು, 99 ಸಾವು!
ತಮಿಳುನಾಡಿನಲ್ಲಿ ಮಾರಕ ಕೊರೋನಾ ವೈರಸ್ ಆರ್ಭಟ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 5,879 ಹೊಸ ಸೋಂಕು ಪ್ರಕರಣಗಳು ದಾಖಲಾಗಿವೆ.

ನಾಳಿನ ಆಡಳಿತಾತ್ಮಕ ಸಮಿತಿ ಸಭೆಯ ನಂತರ ಐಪಿಎಲ್ 2020 ಮಾರ್ಗಸೂಚಿ ಬಿಡುಗಡೆ ಸಾಧ್ಯತೆ
ನಾಳೆ ಮಹತ್ವದ ಐಪಿಎಲ್ ಆಡಳಿತಾತ್ಮಕ ಸಮಿತಿ ಸಭೆ ನಡೆಯಲಿದೆ. ಅಧಿಕೃತ ಸ್ಪಷ್ಟನೆ ನಂತರ ಯುಎಇಗೆ ಪ್ರವಾಸ ಪ್ರಕ್ರಿಯೆಯನ್ನು ಆರಂಭಿಸಲು ಫ್ರಾಂಚೈಸಿಗಳು ಈ ಸಭೆಯನ್ನು ಎದುರು ನೋಡುತ್ತಿದ್ದಾರೆ.

ನನ್ನನ್ನು ಬೆದರಿಸುತ್ತಿದ್ದಾರೆ; ಸಂಗೀತ ನಿರ್ದೇಶಕ ಇಳಯರಾಜ ಪೊಲೀಸರಿಗೆ ದೂರು
ಭಾರತೀಯ ಚಿತ್ರರಂಗದ ಸುಪ್ರಸಿದ್ದ ಸಂಗೀತ ನಿರ್ದೇಶಕ ಇಳಯರಾಜ ಹಾಗೂ ಪ್ರಸಾದ್ ಸ್ಟುಡಿಯೋ ನಡುವಣ ವಿವಾದ ಮತ್ತೊಮ್ಮೆ ಬಯಲಿಗೆ ಬಂದಿದೆ. ಎಲ್.ವಿ.ಪ್ರಸಾದ್ ಅವರ ಮೊಮ್ಮಗ ಸಾಯಿ ಪ್ರಸಾದ್ ವಿರುದ್ಧ ಇಳಯರಾಜ ಪೊಲೀಸರಿಗೆ ದೂರು ನೀಡಿದ್ದಾರೆ.

ಲಾಕ್ಡೌನ್ ನಿಯಮ ಮೀರಿ ಮನೆಯಲ್ಲೇ ಜೂಜಾಟ: ದಕ್ಷಿಣ ಭಾರತದ ಖ್ಯಾತ ನಟ ಶ್ಯಾಮ್ ಸೇರಿ ಹಲವರ ಬಂಧನ
ಮಾರಕ ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಚೆನ್ನೈನಲ್ಲಿ ಹೇರಲಾಗಿರುವ ಲಾಕ್ಡೌನ್ ನಿಯಮಾವಳಿಗಳನ್ನು ಗಾಳಿಗೆ ತೂರಿ ಮನೆಯಲ್ಲಿ ಗುಂಪು ಸೇರಿಕೊಂಡು ಜೂಜಾಟ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ತಮಿಳುನಾಡು ಪೊಲೀಸರು ದಕ್ಷಿಣ ಭಾರತದ ಖ್ಯಾತ ನಟ ಶ್ಯಾಮ್ ಸೇರಿ ಹಲವರನ್ನು ಬಂಧಿಸಿದ್ದಾರೆ.

