Corona Virus

ಆರೋಗ್ಯ ಇಲಾಖೆ ನೌಕರರ ವೇತನಕ್ಕೆ 82.20 ಕೋಟಿ ರೂ.ಬಿಡುಗಡೆ: ಸಚಿವ ಬಿ ಶ್ರೀರಾಮುಲು
ಕೋವಿಡ್-19 ಸೋಂಕಿನ ವಿರುದ್ಧ ಹೋರಾಡುತ್ತಿರುವ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನೌಕರರಿಗೆ ಮಾರ್ಚ್ ನಿಂದ ಬಾಕಿಯಿದ್ದ ವೇತನ ಬಿಡುಗಡೆಗೊಳಿಸಲಾಗಿದೆ.

ನಾಳೆ ವಿಡಿಯೋ ಕಾನ್ಫರೆನ್ಸ್ ಮೂಲಕ ಬಜೆಟ್ ಮಂಡನೆಗೆ ಬಿಬಿಎಂಪಿ ಸಿದ್ಧತೆ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 2020-21ನೇ ಸಾಲಿನ ಆಯವ್ಯಯವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಮಂಡಿಸಲು ಪೂರ್ವ ಸಿದ್ಧತೆ ಆರಂಭಿಸಿದೆ.

ಕೊರೋನಾ ವೈರಸ್ ಕುರಿತು ರಾಜನಾಥ್ ಸಿಂಗ್ ನೇತೃತ್ವದ ಸಚಿವ ತಂಡದ ಐದನೇ ಸಭೆ
ಕೊರೋನಾ ವೈರಸ್ ತಡೆಯಲು ದೇಶದಲ್ಲಿ ಘೋಷಣೆಯಾಗಿರುವ ಲಾಕ್ ಡೌನ್ ನಿಂದ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಕಡಿತಗೊಳಿಸುವ ಕುರಿತು ಚರ್ಚಿಸಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಸಚಿವರ ತಂಡ ಶನಿವಾರ ಐದನೇ ಬಾರಿಗೆ ಸಭೆ ನಡೆಸಿತು.

ಅರುಣಾಚಲ ಪ್ರದೇಶ ಬಳಿಕ ಮಣಿಪುರ ಕೊರೋನಾ ಮುಕ್ತ ?:ಹಿ.ಪ್ರ.ದಲ್ಲಿ ಗುಣಮುಖ ಹೊಂದಿದ್ದ ವ್ಯಕ್ತಿಯಲ್ಲಿ ಮತ್ತೆ ಸೋಂಕು
ದೇಶದ 12 ರಾಜ್ಯಗಳ 22 ಜಿಲ್ಲೆಗಳಲ್ಲಿ ಕಳೆದ 14 ದಿನಗಳಿಂದ ಯಾವುದೇ ಕೊರೋನಾ ಸೋಂಕು ಪತ್ತೆಯಾಗಿಲ್ಲ.ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 36 ಕೊರೋನಾ ಸಾವು ಮತ್ತು 957 ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಕೊರೋನಾ ಸೋಂಕಿತರ ಸಂಖ್ಯೆ 14 ಸಾವಿರದ 792ಕ್ಕೇರಿದೆ ಮತ್ತು ಸಾವಿನ ಸಂಖ್ಯೆ 448ಕ್ಕೇರಿದೆ.

ಸಮೋಸಾ, ಗುಟ್ಕಾ, ಪಾನ್, ರಸಗುಲ್ಲ, ಕೋವಿಡ್–19 ಸಹಾಯವಾಣಿಗೆ ಕರೆ; ಯೋಗಿ ಸರ್ಕಾರಕ್ಕೆ ಲಾಕ್ ಡೌನ್ ತಲೆನೋವು!
ಕೊರೋನಾ ವೈರಸ್ ನಿಂದಾಗಿ ತತ್ತರಿಸಿರುವ ಉತ್ತರ ಪ್ರದೇಶ ಸರ್ಕಾರಕ್ಕೆ ಇದೀಗ ಹೊಸ ತಲೆನೋವು ಶುರುವಾಗಿದ್ದು, ಅಗತ್ಯ ವಸ್ತುಗಳು ಮತ್ತು ತುರ್ತು ಸೇವೆಗಳಿಗಾಗಿ ತೆರೆಯಲಾಗಿರುವ ಸಹಾಯವಾಣಿಗೆ ಜನರು ಸಮೋಸಾ, ಗುಟ್ಕಾ, ಪಾನ್ಬೀಡಾ, ರಸಗುಲ್ಲ ಕೇಳಿಕೊಂಡು ಕರೆ ಮಾಡುತ್ತಿದ್ದಾರೆ.

ಓಲಾ, ಊಬರ್ ಮಾದರಿಯಂತೆ ರೈತರ ನೆರವಿಗೆ ಈಗ ಕಿಸಾನ್ ರಥ
ಲಾಕ್ ಡೌನ್ ಹಿನ್ನಲೆಯಲ್ಲಿ ತಾವು ಬೆಳೆದ ಬೆಳೆಯನ್ನು ಸಾಗಾಟ ಮಾಡಲಾಗದ ಕಷ್ಟ ಪಡುತ್ತಿರುವ ರೈತರ ಪಾಲಿಗೆ ಇದೀಗ ಸಿಹಿಸುದ್ದಿಯೊಂದು ಬಂದಿದ್ದು, ಓಲಾ-ಊಬರ್ ಮತ್ತು ಪೋರ್ಟರ್ ಮಾದರಿಯಲ್ಲೇ ರೈತರ ಬೆಳೆಗಳನ್ನು ಸಾಗಿಸುವ ಸಲುವಾಗಿ ಕಿಸಾನ್ ರಥ ಕಾರ್ಯ ನಿರ್ವಹಿಸಲಿದೆ.

ಎಚ್ ಡಿಕೆ ಅವರದ್ದು ದೊಡ್ಡ ಕುಟುಂಬ, ಆದರೂ ನಿಖಿಲ್ ವಿವಾಹ ಸರಳವಾಗಿ ನಡೆದಿದೆ: ಸಿಎಂ ಬಿಎಸ್ ಯಡಿಯೂರಪ್ಪ
ಎಚ್ ಡಿ ಕುಮಾರಸ್ವಾಮಿ ಅವರದ್ದು ದೊಡ್ಡ ಕುಟುಂಬ.. ಆದರೆ ನಿಖಿಲ್ ಮತ್ತು ರೇವತಿ ವಿವಾಹ ಸರಳವಾಗಿ ನಡೆದಿದೆ. ಈ ಬಗ್ಗೆ ಚರ್ಚೆ ಅನಗತ್ಯ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

ಕೊರೋನಾ ವೈರಸ್: ರಾಜ್ಯದಲ್ಲಿ ಇಂದು ಮತ್ತೆ 12 ಪಾಸಿಟಿವ್ ಪ್ರಕರಣ ಪತ್ತೆ; ಸೋಂಕಿತರ ಸಂಖ್ಯೆ 371ಕ್ಕೆ ಏರಿಕೆ
ಕರ್ನಾಟಕದಲ್ಲಿ ಇಂದು ಮತ್ತೆ 12 ಕೊರೋನಾ ವೈರಸ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಆ ಮೂಲಕ ರಾಜ್ಯದಲ್ಲಿ ಒಟ್ಟಾರೆ ವೈರಸ್ ಸೋಂಕಿತರ ಸಂಖ್ಯೆ 371ಕ್ಕೆ ಏರಿಕೆಯಾಗಿದೆ.

ಲಾಕ್ ಡೌನ್: ಜನ ಮನೆಯಿಂದ ಹೊರಬರದಂತೆ ತಡೆಯಲು ಚಾಮರಾಜನಗರ ಡಿಸಿ ಮಾಸ್ಟರ್ ಪ್ಲಾನ್, ಮನೆ ಬಾಗಿಲಿಗೇ ಮೆಡಿಸಿನ್!
ಕೊರೋನಾ ವೈರಸ್ ಲಾಕ್ ಡೌನ್ ನಿಂದ ಜನತೆ ಮನೆಯಿಂದ ಹೊರಗೆ ಬರುವುದನ್ನು ತಡೆಯಲು ಚಾಮರಾಜನಗರ ಡಿಸಿ ಎಂ.ಆರ್. ರವಿ ವಿನೂತನ ಔಷಧಿ ಮಿತ್ರ ಯೋಜನೆ ಜಾರಿಗೆ ತಂದಿದ್ದು, ಈ ಯೋಜನೆ ಅನ್ವಯ ಜಿಲ್ಲೆಯ ಜನರ ಮನೆ ಬಾಗಿಲಿಗೇ ಔಷಧಿ ತಂದು ನೀಡಲಾಗುತ್ತದೆ.

