corona

ಕೋವಿಡ್-19: ದೇಶದಲ್ಲಿಂದು 43,733 ಹೊಸ ಕೇಸ್ ಪತ್ತೆ; 930 ಮಂದಿ ಸಾವು
ಭಾರತದಲ್ಲಿ ಬುಧವಾರ ಬೆಳಿಗ್ಗೆ 8 ಗಂಟೆಗೆ ಅಂತ್ಯವಾದ 24 ಗಂಟೆಗಳ ಅವಧಿಯಲ್ಲಿ 43,733 ಮಂದಿಯಲ್ಲಿ ಹೊಸದಾಗಿ ಕೊರೋನಾ ಸೋಂಕು ಪತ್ತೆಯಾಗಿದ್ದು, ಇದೇ ಅವಧಿಯಲ್ಲಿ 930 ಮಂದಿ ಕೋವಿಡ್ ಗೆ ಬಲಿಯಾಗಿದ್ದಾರೆಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಕೋವಿಡ್ ಸೋಂಕು ತಗುಲದಿರಲು ಬಿಸಿ ನೀರು, ಕಷಾಯ ಸೇವನೆ: ಸ್ವ-ಚಿಕಿತ್ಸೆ ಕುರಿತು ವೈದ್ಯರ ಎಚ್ಚರಿಕೆ!
ಕೊರೋನಾ ಮಹಾಮಾರಿ ವೈರಸ್ ನಮ್ಮ ಜೀವನದ ಮೇಲೆ ಪರಿಣಾಮ ಬೀರಿದಾಗಿನಿಂದಲೂ, ನಿತ್ಯ ಅನೇಕ ಮನೆಗಳಲ್ಲಿ ಕಷಾಯ, ಶಕ್ತಿವರ್ಧಕ ಪಾನೀಯಗಳು, ಬಿಸಿ ನೀರು ಕುಡಿಯುವ ದಿನಚರಿಯನ್ನು ಅನುಸರಿಸಲಾಗುತ್ತಿದೆ.

ಅನ್ಲಾಕ್ 3.0 ಜಾರಿ: ರಾಜ್ಯದಲ್ಲಿ ಬಹುತೇಕ ಎಲ್ಲಾ ನಿರ್ಬಂಧಗಳೂ ತೆರವು; ಸಹಜ ಸ್ಥಿತಿಯತ್ತ ಕರ್ನಾಟಕ
ರಾಜ್ಯ ಸರ್ಕಾರ ಘೋಷಿಸಿರುವ ಅನ್'ಲಾಕ್ 3.0 ಸೋಮವಾರ ಜಾರಿಗೊಂಡಿದ್ದು, ಈ ಹಿನ್ನೆಲೆಯಲ್ಲಿ ದೇವಾಲಯಗಳು, ಪ್ರವಾಸಿ ತಾಣಗಳು ಓಪನ್ ಆಗಿವೆ. ಮಾಲ್, ಕೈಗಾರಿಕೆ, ಕಚೇರಿಗಳು ಪೂರ್ಣ ಪ್ರಮಾಣದಲ್ಲಿ ಆರಂಭಗೊಂಡಿರುವ ಹಿನ್ನೆಲೆಯೆಲ್ಲಿ ವಾಣಿಜ್ಯ ಚಟುವಟಿಕೆಗಳು ಚುರುಕುಗೊಳ್ಳಲಿವೆ.

ಭಾರತದಲ್ಲಿ ಕೊರೋನಾ ಮತ್ತಷ್ಟು ಇಳಿಕೆ: ದೇಶದಲ್ಲಿಂದು 39,796 ಹೊಸ ಕೇಸ್ ಪತ್ತೆ, 723 ಮಂದಿ ಸಾವು
ಭಾರತದಲ್ಲಿ ಕೊರೋನಾ ವೈರಸ್ ಪ್ರಕರಣಗಳಲ್ಲಿ ಮತ್ತಷ್ಟು ಇಳಿಕೆಯಾಗಿದ್ದು, ಸೋಮವಾರ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ 39,796 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 3,05,85,229ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ವಾರದಲ್ಲಿ 48 ಮಂದಿಗೆ ಕೊರೋನಾ ಸೋಂಕು: ತುಮಕೂರಿನ ಸಿಂಗಾಪುರ ಗ್ರಾಮ ಸಂಪೂರ್ಣ ಸೀಲ್ಡೌನ್
ಕೋವಿಡ್ ನಿಯಂತ್ರಣಕ್ಕೆ ಬರುತ್ತಿರುವ ಹಿನ್ನೆಲೆ ಸರ್ಕಾರ ಹಂತ ಹಂತವಾಗಿ ಅನ್ಲಾಕ್ ಮಾಡುತ್ತಿದ್ದರೆ, ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಸಿಂಗಾಪುರ ಗ್ರಾಮದಲ್ಲಿ ಸೋಂಕು ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಗ್ರಾಮವನ್ನು ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ.

ರಾಜ್ಯದಲ್ಲಿ ಮೂರು ತಿಂಗಳ ಬಳಿಕ ಭಾರೀ ಪ್ರಮಾಣದಲ್ಲಿ ಇಳಿದ ಕೊರೋನಾ: ನಿನ್ನೆ 2,082 ಹೊಸ ಕೇಸ್ ಪತ್ತೆ!
ರಾಜ್ಯದಲ್ಲಿ ಮೂರು ತಿಂಗಳ ಬಳಿಕ ಕೊರೋನಾ ಸೋಂಕು ಹಾಗೂ ಪಾಸಿಟಿವಿಟಿ ದರ ಗಮನಾರ್ಹ ಪ್ರಮಾಣದಲ್ಲಿ ಇಳಿಕೆಯಾಗಿದೆ. ಶನಿವಾರ ರಾಜ್ಯದಲ್ಲಿ ಕೇವಲ 2,082 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

ಪ್ರಧಾನಿ ಮೋದಿಯವರನ್ನು ದೂರಿದರೆ ಒಳ್ಳೆಯದಾಗಲ್ಲ: ಸಚಿವ ಮಾಧುಸ್ವಾಮಿ
ಕೋವಿಡ್–19 ಲಸಿಕೆ ವಿಚಾರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಟೀಕೆ ಮಾಡುವವರಿಗೆ ಒಳ್ಳೆಯದಾಗುವುದಿಲ್ಲ ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿಯನರು ಭಾನುವಾರ ಹೇಳಿದ್ದಾರೆ.

ಕೋವಿಡ್-19: ಭಾರತದಲ್ಲಿಂದು 43,071 ಹೊಸ ಕೇಸ್ ಪತ್ತೆ, 955 ಮಂದಿ ಸಾವು
ಭಾರತದಲ್ಲಿ ಭಾನುವಾರ ಬೆಳಿಗ್ಗೆ 8 ಗಂಟೆಗೆ ಅಂತ್ಯವಾದ 24 ಗಂಟೆಗಳ ಅವಧಿಯಲ್ಲಿ 43,071 ಮಂದಿಯಲ್ಲಿ ಹೊಸದಾಗಿ ಕೊರೋನಾ ಸೋಂಕು ಪತ್ತೆಯಾಗಿದ್ದು, ಇದೇ ಅವಧಿಯಲ್ಲಿ 955 ಮಂದಿ ಕೋವಿಡ್ ಗೆ ಬಲಿಯಾಗಿದ್ದಾರೆಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಹೊರರಾಜ್ಯದಿಂದ ಬಂದವರೊಂದಿಗೆ ಎಚ್ಚರಿಕೆಯಿಂದಿರಿ: ಜನತೆಗೆ ಬಿಬಿಎಂಪಿ
ರಾಜ್ಯದಲ್ಲಿ ಲಾಕ್ಡೌನ್ ನಿಯಮ ಸಡಿಲಗೊಂಡಿದ್ದು, ಹೊರ ರಾಜ್ಯದಿಂದ ನಗರಕ್ಕೆ ಬರುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಸೋಂಕು ಉಲ್ಬಣಗೊಳ್ಳುವ ಸಾಧ್ಯತೆಗಳಿದ್ದು, ಹೊರ ರಾಜ್ಯದಿಂದ ಬಂದವರೊಂದಿಗೆ ಎಚ್ಚರಿಕೆಯಿಂದಿರುವಂತೆ ಜನತೆಗೆ ಬಿಬಿಎಂಪಿ ಹೇಳಿದೆ.

