coronavirus

ಕೊರೋನಾ: ರಾಜ್ಯ ಪರಿಸ್ಥಿತಿ ಕುರಿತು ಉನ್ನತಾಧಿಕಾರಿಗಳೊಂದಿಗೆ ಸಿಎಂ ಸಭೆ
ಜೂನ್.17ರಂದು ಕೊರೋನಾ ಪರಿಸ್ಥಿತಿ ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಿಡಿಯೋ ಕಾನ್ಫರೆನ್ಸ್ ನಡೆಸಲಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದ ಕೊರೋನಾ ಪರಿಸ್ಥಿತಿ ಕುರಿತಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಉನ್ನಾತಾಧಿಕಾರಿಗಳೊಂದಿಗೆ ಜು.15ರಂದು ಸಭೆ ನಡೆಸಿ ಮಾತುಕತೆ ನಡೆಸಲಿದ್ದಾರೆ.

ಇದ್ದಕ್ಕಿದ್ದಂತೆ ವಾಸನೆ, ರುಚಿ ಗ್ರಹಣ ಶಕ್ತಿ ನಷ್ಟವೂ ಕೊರೋನಾ ಲಕ್ಷಣ: ಆರೋಗ್ಯ ಸಚಿವಾಲಯ
ದೇಶಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಮೇಲಿನ ಸಂಶೋಧನೆ ಮುಂದುವರೆದಿದ್ದು, ಇದ್ದಕ್ಕಿದ್ದಂತೆ ವಾಸನೆ, ರುಚಿ ಗ್ರಹಣ ಶಕ್ತಿ ನಷ್ಟವಾಗುವುದೂ ಕೂಡ ಕೋವಿಡ್-19 ಸೋಂಕಿನ ಲಕ್ಷಣವಾಗಿರಬಹುದು ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಕೊರೋನಾ ವಾರಿಯರ್ಸ್ ಮೇಲೆ ಹಲ್ಲೆ: ಓರ್ವ ಬಂಧನ, 8 ಜನರ ವಿರುದ್ಧ ಪ್ರಕರಣ ದಾಖಲು
ಸಾಂಸ್ಥಿಕ ಕ್ವಾರಂಟೈನ್ ನಲ್ಲಿ ಇರಿಸಲಾಗಿದ್ದ ಶಂಕಿತರ ಗಂಟಲು ದ್ರವ ತೆಗೆದುಕೊಲ್ಳಲು ಮುಂದಾಗಿದ್ದ ಕೊರೋನಾ ವಾರಿಯರ್ಸ್ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಶನಿವಾರ ಓರ್ವ ಆರೋಪಿಯನ್ನು ಬಂಧನಕ್ಕೊಳಪಡಿಸಿದ್ದಾರೆ.

ಭಾರತದಲ್ಲಿ ಕೊರೋನಾ ಸ್ಫೋಟ: ಒಂದೇ ದಿನ ಬರೋಬ್ಬರಿ ದಾಖಲೆಯ 11,929 ಮಂದಿಯಲ್ಲಿ ವೈರಸ್ ಪತ್ತೆ, 3.20 ಲಕ್ಷಕ್ಕೇರಿದ ಸೋಂಕಿತರ ಸಂಖ್ಯೆ, 9,195 ಮಂದಿ ಬಲಿ
ಭಾರತದಲ್ಲಿ ಕೊರೋನಾ ಸ್ಫೋಟಗೊಂಡಿದ್ದು, ಒಂದೇ ದಿನ ಬರೋಬ್ಬರಿ ದಾಖಲೆಯ 11,929 ಮಂದಿಯಲ್ಲಿ ವೈರಸ್ ದೃಢಪಟ್ಟಿದೆ. ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ 3.20 ಲಕ್ಷಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಭಾನುವಾರ ಮಾಹಿತಿ ನೀಡಿದೆ.

ರಾಜ್ಯದಲ್ಲಿ ಕೊರೋನಾ ರಣಕೇಕೆ: ಸಿಲಿಕಾನ್ ಸಿಟಿಯಲ್ಲಿ 23 ವರ್ಷದ ಯುವಕನನ್ನು ಬಲಿ ಪಡೆದ ಮಹಾಮಾರಿ
ರಾಜ್ಯದಲ್ಲಿ ಕೊರೋನಾ ವೈರಸ್ ರಣಕೇಕೆ ಹಾಕುತ್ತಿದ್ದು, ಸಿಲಿಕಾನ್ ಸಿಟಿಯಲ್ಲಿ ಇದೇ ಮೊದಲ ಬಾರಿಗೆ 23 ಯುವಕರೊಬ್ಬರು ಮಹಾಮಾರಿ ವೈರಸ್'ಗೆ ಬಲಿಯಾಗಿದ್ದಾರೆ. ನಗರದಲ್ಲಿ ಈ ವರೆಗೆ ಮೃತಪಟ್ಟ ಅತೀ ಕಿರಿಯರಾಗಿದ್ದಾರೆ.

ಕರ್ನಾಟಕಕ್ಕೆ ಕೊರೋನಾಘಾತ: ಇಂದು ಹೊಸದಾಗಿ 308 ಪ್ರಕರಣ ಪತ್ತೆ, 3 ಸಾವು, ಸೋಂಕಿತರ ಸಂಖ್ಯೆ 6,824ಕ್ಕೆ ಏರಿಕೆ!
ಕರ್ನಾಟಕದಲ್ಲಿ ಇಂದು ಕೊರೋನಾ ಮಹಾಮಾರಿ ತ್ರಿಶತಕ ಬಾರಿಸಿದ್ದು ಒಟ್ಟಾರೆ ಸೋಂಕಿತರ ಸಂಖ್ಯೆ 6,824ಕ್ಕೆ ಏರಿಕೆಯಾಗಿದೆ. ಇನ್ನು ಮೂವರು ಕೊರೋನಾಗೆ ಬಲಿಯಾಗಿದ್ದಾರೆ.

ಕರ್ನಾಟಕ ಜನತೆ ಗಂಭೀರ ಪರಿಸ್ಥಿತಿ ಎದುರಿಸಲು ಸಿದ್ಧರಾಗಿ: ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್
ಕೊರೋನಾ ಹರಡುವಿಕೆ ಮುಂದಿನ ದಿನಗಳಲ್ಲಿ ಗಂಭೀರ ಸ್ವರೂಪ ಪಡೆಯಬಹುದು ಎಂದು ಭಾವಿಸಿ ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾಡಳಿತಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಸೂಚನೆ ನೀಡಿದ್ದಾರೆ.

ಆತಂಕ ಶುರು: ಕೊರೋನಾ ಸಂಖ್ಯೆ ಗಣನೀಯ ಹೆಚ್ಚಳ; ದೇಶದಲ್ಲಿ 9ನೇ ಸ್ಥಾನಕ್ಕೇರಿದ ಕರ್ನಾಟಕ
ರಾಜ್ಯದಲ್ಲಿ ಕೊರೋನಾ ಸೋಂಕು ಗಣನೀಯವಾಗಿ ಏರಿಕೆಯಾಗುತ್ತಿದ್ದು, ಕರ್ನಾಟಕ ದೇಶದ ಸೋಂಕಿತ ರಾಜ್ಯಗಳ ಪಟ್ಟಿಯಲ್ಲಿ 9ನೇ ಸ್ಥಾನಕ್ಕೇರಿದೆ.

ಮಹಾರಾಷ್ಟ್ರ: ಕೊರೋನಾ ಗೆದ್ದ 1,233 ಪೊಲೀಸರು; ಕೋವಿಡ್ ಟೆಸ್ಟ್ ದರ ರೂ.4,500 ರಿಂದ 2,200ಕ್ಕೆ ಇಳಿಕೆ!
ದೇಶವನ್ನೇ ಮಹಾಮಾರಿ ಕೊರೋನಾ ಬೆಂಬಿದಡೆ ಕಾಡುತ್ತಿದೆ. ಇದರ ಮಧ್ಯೆ ಕೊರೋನಾ ವಾರಿಯರ್ಸ್ ಆಗಿದ್ದ ಪೊಲೀಸರಿಗೂ ಕೊರೋನಾ ಮಹಾಮಾರಿಗೆ ತುತ್ತಿಗಿದ್ದರು. ಈ ಪೈಕಿ 1,233 ಮಂದಿ ಪೊಲೀಸರು ಗುಣಮುಖರಾಗಿದ್ದು 334 ಮಂದಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

