coronavirus

ಕೋವಿಡ್-19: 3.25 ಲಕ್ಷ ಸೋಂಕಿತರಲ್ಲಿ 1.68 ಲಕ್ಷ ಜನ ಚೇತರಿಕೆ, ಚೇತರಿಕೆ ಪ್ರಮಾಣ ಶೇ.50ಕ್ಕೂ ಹೆಚ್ಚು!
ದೇಶದಾದ್ಯಂತ ಭಾರೀ ಪ್ರಮಾಣದಲ್ಲಿ ಹೊಸ ಸೋಂಕಿತರು ಮತ್ತು ಸಾವಿನ ಪ್ರಮಾಣ ದಾಖಲಾಗುತ್ತಿರುವ ನಡುವೆಯೂ ಸಮಾಧಾನಕರ ಸುದ್ದಿಯೊಂದು ಹೊರಬಿದ್ದಿದೆ. ಇದೇ ಮೊದಲ ಬಾರಿಗೆ ಕೊರೋನಾ ವೈರಸ್ ನಿಂದ ಚೇತರಿಸಿಕೊಂಡವರ ಪ್ರಮಾಣ ಶೇ.50ರ ಗಡಿ ದಾಡಿದೆ.

ಕೊರೋನಾ ವಜ್ರಮುಷ್ಠಿಯಲ್ಲಿ ಇಡೀ ವಿಶ್ವ: 70 ಲಕ್ಷ ಗಡಿಯತ್ತ ಸೋಂಕಿತರ ಸಂಖ್ಯೆ, 4.27 ಲಕ್ಷ ಮಂದಿ ಸಾವು
ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಕೊರೋನಾ ತನ್ನ ರಣಕೇಕೆಯನ್ನು ಮುಂದುವರೆಸಿದ್ದು, ಸೋಂಕಿತರ ಸಂಖ್ಯೆ 70 ಲಕ್ಷ ಗಡಿದಾಟಿದೆ. ಅಲ್ಲದೆ, 4.27 ಲಕ್ಷ ಮಂದಿ ಮಹಾಮಾರಿ ವೈರಸ್'ಗೆ ಬಲಿಯಾಗಿದ್ದಾರೆಂದು ವಿಶ್ವ ಆರೋಗ್ಯ ಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿದೆ.

ಕೊರೋನಾ ನಿಭಾಯಿಸುವಲ್ಲಿ ಅತ್ಯುತ್ತಮ ಕಾರ್ಯ: ಸಿಎಂ ಯಡಿಯೂರಪ್ಪಗೆ ಭೇಷ್ ಎಂದ ಜೆಪಿ ನಡ್ಡಾ
ಕೊರೋನಾ ಸೋಂಕು ಹರಡದಂತೆ ತಡೆಯಲು ದೆಹಲಿ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ತಮಿಳುನಾಡಿನಲ್ಲಿ ಅಲ್ಲಿನ ಸರ್ಕಾರಗಳು ಸಾಕಷ್ಟು ಪರಿಶ್ರಮ ಪಡುತ್ತಿದ್ದು, ಈ ನಡುವೆ ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅತ್ಯಂತ ಕ್ಷಿಪ್ರಗತಿಯಲ್ಲಿ ಪೂರ್ವಭಾವಿ...

ಜಗತ್ತಿನಾದ್ಯಂತ ಕೊರೋನಾ ನರ್ತನ: 79 ಲಕ್ಷ ದಾಟಿದ ಸೋಂಕು, 4.33 ಲಕ್ಷ ಬಲಿ!
ಜಗತ್ತಿನಾದ್ಯಂತ ಕೊರೋನಾ ಮಹಾಮಾರಿ ತನ್ನ ನರ್ತನವನ್ನು ಮುಂದುವರೆಸಿದ್ದು ಸೋಂಕಿತರ ಸಂಖ್ಯೆ 79 ಲಕ್ಷ ದಾಟಿದ್ದು 4.33 ಲಕ್ಷ ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ಕುಡಿಯುವ ನೀರಿನ ಗ್ಲಾಸು ಹಿಡಿದುಕೊಳ್ಳಲು ಕಷ್ಟ ಪಟ್ಟ ಟ್ರಂಪ್, ಆರೋಗ್ಯದ ಬಗ್ಗೆ ಚರ್ಚೆ ಶುರು, ವಿಡಿಯೋ ನೋಡಿ!
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಗ್ಯದ ಬಗ್ಗೆ ಸಂದೇಹಗಳು ವ್ಯಕ್ತವಾಗುತ್ತಿದೆ. ಅಮೆರಿಕಾ ಸೇನಾ ಅಕಾಡೆಮಿಯಲ್ಲಿ ಶನಿವಾರ ಟ್ರಂಪ್ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಬಲಗೈಮೂಲಕ ಗ್ಲಾಸಿನಿಂದ ನೀರು ಕುಡಿಯಲು ತೊಂದರೆ ಅನುಭವಿಸಿದ ವಿಡಿಯೋ ವೈರಲ್ ಆಗಿದೆ.

ಕರ್ನಾಟಕಕ್ಕೆ ಕೊರೋನಾಘಾತ: ಇಂದು ಹೊಸದಾಗಿ 176 ಪ್ರಕರಣ ಪತ್ತೆ, 5 ಬಲಿ, ಸೋಂಕಿತರ ಸಂಖ್ಯೆ 7000ಕ್ಕೆ ಏರಿಕೆ!
ಕರ್ನಾಟಕದಲ್ಲಿ ಇಂದು ಹೊಸದಾಗಿ 176 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು ಈ ಮೂಲಕ ಒಟ್ಟಾರೆ ಸೋಂಕಿತರ ಸಂಖ್ಯೆ 7000ಕ್ಕೆ ಏರಿಕೆಯಾಗಿದೆ. ಇನ್ನು ರಾಜ್ಯದಲ್ಲಿ 5 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ.

ಕೊರೋನಾ ಸೋಂಕಿತ ಆಫ್ರಿದಿ ಶೀಘ್ರವೇ ಗುಣಮುಖರಾಗಲಿ, ದ್ವೇಷ ಬಿಟ್ಟು ಶುಭ ಹಾರೈಸಿದ ಗೌತಮ್ ಗಂಭೀರ್
ಕ್ರೀಡಾಂಗಣದ ಹೊರಗೆ ಮತ್ತು ಒಳಗೆ ಎಷ್ಟೇ ಜಿದ್ದಾಜಿದ್ದಿನ ವೈರಿಗಳಾದರೂ, ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿರುವ ಪಾಕಿಸ್ತಾನದ ಮಾಜಿ ಆಲ್‌ರೌಂಡರ್ ಶಾಹಿದ್ ಅಫ್ರಿದಿ ಬಹುಬೇಗನೆ ಗುಣಮುಖರಾಗಲಿ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಹಾರೈಸುವ ಮೂಲಕ ಮಾನವೀಯತೆ ಪ್ರದರ್ಶಿಸಿದ್ದಾರೆ.

ಬೆಂಗಳೂರು: ಕಣ್ಣೀರು ಸಹ ಕೊರೊನಾ ತರಿಸಬಲ್ಲದು: ಬಿಎಂಸಿಆರ್‌ಐ ಮಹತ್ವದ ಸಂಶೋಧನೆ
ಕೊರೋನಾ ಸೋಂಕಿನ ವೈರಸ್ ಹರಡಲು ಕಣ್ಣು, ಕಿವಿ, ಮೂಗು, ಬಾಯಿ ಜೀವಕೊಡುವ ಅಂಗಗಳು. ಪದೇಪದೇ ಇವುಗಳನ್ನು ಮುಟ್ಟುತ್ತಿರಬಾರದು ಎಂದೂ ಸಲಹೆ ವಿಶ್ವ ವ್ಯಾಪಿಯಾಗಿಯೇ ಇದೆ.

ಯುಪಿ ಮಾಜಿ ಸಿಎಂ ಅಖಿಲೇಶ್ ಸಂಬಂಧಿ ಧರ್ಮೇಂದ್ರ ಯಾದವ್ ಗೆ ಕೊರೋನಾ ಸೋಂಕು!
ಸಮಾಜವಾದಿ ಪಕ್ಷದ ಮಾಜಿ ಸಂಸದ, ಉತ್ತರ ಪ್ರದೇಶದ ಮಾಜಿ ಸಿಎಂ ಅಖಿಲೇಶ್ ಯಾದವ್ ಸಮೀಪದ ಸಂಬಂಧಿಯೂ ಆದ ಧರ್ಮೇಂದ್ರ ಯಾದವ್ ಅವರಿಗೆ ಕೊರೋನಾವೈಅರ್ಸ್ ಸೋಂಕು ದೃಢಪಟ್ಟಿದೆ. . ಶನಿವಾರ ರಾತ್ರಿ ಸೋಂಕು ದೃಢವಾಗಿದ್ದು ಯಾದವ್ ಅವರನ್ನು ಇಟವಾದಲ್ಲಿನ ಸೆಫೈ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

