coronavirus

6 ನೌಕರರಲ್ಲಿ ಕೊರೋನಾ ಪಾಸಿಟಿವ್: ದೆಹಲಿ ಒಪೋ ಮೊಬೈಲ್ ಫೋನ್ ತಯಾರಿಕಾ ಘಟಕ ಬಂದ್
ಕಂಪನಿಯ 6 ಮಂದಿ ನೌಕರರಲ್ಲಿ ಮಹಾಮಾರಿ ಕೊರೋನಾ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ದೆಹಲಿ ಬಳಿಯಿರುವ ಒಪೋ ಮೊಬೈಲ್ ಫೋನ್ ತಯಾರಿಕಾ ಘಟಕವನ್ನು ಬಂದ್ ಮಾಡಲಾಗಿದೆ ಎಂದು ಸೋಮವಾರ ತಿಳಿದುಬಂದಿದೆ.

ಮೇ 31ರವರೆಗೆ ಲಾಕ್ ಡೌನ್ ಮುಂದುವರಿಕೆ: ರಾಷ್ಟ್ರೀಯ ವಿಪತ್ತು ಪ್ರಾಧಿಕಾರದಿಂದ ಗೃಹ ಇಲಾಖೆಗೆ ಮನವಿ
ಮೇ 18ರಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ 3.0 ಲಾಕ್ ಡೌನ್ ಅವಧಿ ಮುಗಿಯಲಿದ್ದು ನಾಳೆಯಿಂದ ಮೇ 31ರವರೆಗೆ ಲಾಕ್ ಡೌನ್ ಮುಂದುವರೆಸುವಂತೆ ಕೇಂದ್ರ ಗೃಹ ಇಲಾಖೆಗೆ ಮನವಿ ಮಾಡಿಕೊಂಡಿದೆ.

ಕೊರೋನಾ: ಭಾರತದಲ್ಲಿ ಒಂದೇ ದಿನ 5,000 ಮಂದಿಯಲ್ಲಿ ವೈರಸ್ ದೃಢ, ಸೋಂಕಿತರ ಸಂಖ್ಯೆ 96,169ಕ್ಕೆ ಏರಿಕೆ
ಭಾರತದಲ್ಲಿ ಕೊರೋನಾ ರಣಕೇಕೆ ಹಾಕುತ್ತಿದ್ದು, ಒಂದೇ ದಿನ ಬರೋಬ್ಬರಿ 5,242 ಮಂದಿಯಲ್ಲಿ ಮಹಾಮಾರಿ ವೈರಸ್ ದೃಢಪಟ್ಟಿದೆ. ಇದರೊಂದಿಗೆ ದೇಶದಲ್ಲಿ ಸೋಂಕಿತರ ಸಂಖ್ಯೆ 96,169ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸೋಮವಾರ ಮಾಹಿತಿ ನೀಡಿದೆ.

ಲಾಕ್'ಡೌನ್ 4.0: ವಲಯಗಳು, ಬಸ್ ಸಂಚಾರ ಕುರಿತ ನಿರ್ಧಾರ ರಾಜ್ಯಗಳಿಗೇ ಬಿಟ್ಟ ಕೇಂದ್ರ ಸರ್ಕಾರ
ಕೊರೋನಾ ವೈರಸ್ ನಿಯಂತ್ರಣಕ್ಕಾಗಿ 54 ದಿನಗಳಿಂದ ದೇಶದಲ್ಲಿ ಜಾರಿಯಲ್ಲಿದ್ದ ಲಾಕ್'ಡೌನ್'ನ್ನು ಕೇಂದ್ರ ಸರ್ಕಾರ ಇನ್ನೂ 2 ವಾರಗಳ ಕಾಲ ಅಂದರೆ ಮೇ.18 ರಿಂದ ಮೇ.31ರವರೆಗೆ ವಿಸ್ತರಣೆ ಮಾಡಿದೆ. ಆದರೆ, ವಲಯ ನಿರ್ಧಾರ ಹಾಗೂ ಬಸ್ ಗಳ ಸಂಚಾರ ಕುರಿತು ನಿರ್ಧಾರಗಳ ಜವಾಬ್ದಾರಿಯನ್ನು ಆಯಾ ರಾಜ್ಯಗಳಿಗೆ ನೀಡಿದೆ.

ದೇಶದಾದ್ಯಂತ ಇಂದಿನಿಂದ ಲಾಕ್'ಡೌನ್ 4.0 ಜಾರಿ: ಬಸ್, ಆಟೋ, ಕ್ಯಾಬ್ ಸೇವೆಗಳಿಗೆ ಕೇಂದ್ರ ಸಮ್ಮತಿ
ಕೊರೋನಾ ವೈರಸ್ ನಿಯಂತ್ರಣಕ್ಕಾಗಿ 54 ದಿನಗಳಿಂದ ದೇಶದಲ್ಲಿ ಜಾರಿಯಲ್ಲಿದ್ದ ಲಾಕ್'ಡೌನ್'ನ್ನು ಕೇಂದ್ರ ಸರ್ಕಾರ ಇನ್ನೂ 2 ವಾರಗಳ ಕಾಲ ಅಂದರೆ ಮೇ.18 ರಿಂದ ಮೇ.31ರವರೆಗೆ ವಿಸ್ತರಣೆ ಮಾಡಿದೆ. ಇದರಂತೆ ಸೋಮವಾರದಿಂದ ಲಾಕ್'ಡೌನ್ 4.0 ಜಾರಿಯಾಗಿ ಬಂದಿದೆ.

ಕೊರೋನಾ ವೈರಸ್: ವಿಶ್ವ ಆರೋಗ್ಯ ಸಂಸ್ಥೆ ಬಗ್ಗೆ ತನಿಖೆಗೆ ಭಾರತ ಸೇರಿ 62 ರಾಷ್ಟ್ರಗಳ ಒತ್ತಾಯ
ವಿಶ್ವದ 213 ರಾಷ್ಟ್ರಗಳಲ್ಲಿ ಮಾರಣ ಹೋಮ ನಡೆಸುತ್ತಿರುವ ಮಾರಕ ಕೊರೋನಾ ವೈರಸ್ ಗೆ ಸಂಬಂಧಿಸದಂತೆ ವಿಶ್ವ ಆರೋಗ್ಯ ಸಂಸ್ಥೆ ನಡೆದುಕೊಂಡ ರೀತಿ ಮತ್ತು ಅದರ ಕ್ರಮಗಳ ಕುರಿತಂತೆ ಸಂಶಯ ವ್ಯಕ್ತಪಡಿಸಿರುವ ವಿಶ್ವದ 62 ರಾಷ್ಟ್ರಗಳು ತನಿಖೆಗೆ ಒತ್ತಾಯಿಸಿ ಸಹಿ ಹಾಕಿವೆ.

ರಾಜ್ಯಕ್ಕೆ 'ಮಹಾ' ಕೊರೋನಾಘಾತ: ನಿನ್ನೆ ಸೋಂಕು ಪತ್ತೆಯಾದ 70 ಮಂದಿ ಪೈಕಿ 40 ಮಂದಿಗೆ ಮಹಾರಾಷ್ಟ್ರ ನಂಟು
ಕೊರೋನಾ ಸೋಂಕು ಹೆಚ್ಚಳಕ್ಕೆ ತಬ್ಲಿಘಿ, ಅಜ್ಮೇರ್ ನಂತರ ಇದೀಗ ರಾಜ್ಯಕ್ಕೆ ಮಹಾರಾಷ್ಟ್ರದ ಆಘಾತ ಎದುರಾಗಿದೆ. ರಾಜ್ಯದಲ್ಲಿ ಭಾನುವಾರ 70 ಮಂದಿಯಲ್ಲಿ ಹೊಸದಾಗಿ ಕೊರೋನಾ ವೈರಸ್ ಪತ್ತೆಯಾಗಿದ್ದು, ಈ ಪೈಕಿ 40 ಮಂದಿ ಮಹಾರಾಷ್ಟ್ರದಿಂದ ವಾಪಸ್ಸಾದವರಾಗಿದವರೇ ಆಗಿದ್ದಾರೆ.

ಕೋಲಾರ: ಚಿನ್ನದ ಅದಿರು ಕದ್ದ ಕಳ್ಳನಿಗೂ ಕೊರೋನಾ ಪಾಸಿಟಿವ್!
ಭಾರತ್ ಗೋಲ್ಡ್ ಮೈನ್ ಲಿಮಿಟೆಡ್ (ಬಿಜಿಎಂಎಲ್) ನ ಸ್ಥಗಿತಗೊಂಡ ಗಣಿಯಿಂದ ಚಿನ್ನದ ಅದಿರು ಕಳ್ಲತನ ಮಾಡಿದ್ದ ಆರೋಪಿಗೆ ಕೊರೋನಾ ದೃಢಪಟ್ಟಿದೆ.

ವಿಶ್ವದಲ್ಲಿ 46.34 ಲಕ್ಷ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ
ಕೊರೊನಾ ವೈರಸ್ ನಿಂದಾಗಿ ವಿಶ್ವಾದಲ್ಲಿ 46.34 ಲಕ್ಷಕ್ಕೂ ಹೆಚ್ಚು ಜನರು ಬಾಧಿತರಾಗಿದ್ದು, 3.11 ಲಕ್ಷಕ್ಕೂ ಹೆಚ್ಚು ಜನರು ಈ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ.

