coronavirus

ಚಿಕ್ಕಮಗಳೂರಿನಲ್ಲಿ ಐದು ಕೊರೋನಾ ಪ್ರಕರಣ ಪತ್ತೆ; ಹಸಿರು ವಲಯಕ್ಕೆ ಶಾಕ್!
ರಾಜ್ಯದಲ್ಲಿ ಹಸಿರು ವಲಯವಾಗಿ ಉಳಿದುಕೊಂಡಿದ್ದ ಜಿಲ್ಲೆ ಚಿಕ್ಕಮಗಳೂರಿಗೆ ಕೂಡ ಈಗ ಕೊರೋನಾ ವಕ್ಕರಿಸಿದೆ.

ಕೆಲವು ಸಿಬ್ಬಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾದ್ರೆ ಇಡೀ ಕಚೇರಿ ಮುಚ್ಚಬೇಕಿಲ್ಲ: ಕೇಂದ್ರ ಸರ್ಕಾರ
ರಾಷ್ಟ್ರವ್ಯಾಪಿ ಲಾಕ್ಡೌನ್ನ ನಾಲ್ಕನೇ ಹಂತಕ್ಕೆ ಸಡಿಕೆ ನೀಡಿದ್ದು ಸರ್ಕಾರಿ ಕಚೇರಿಗಳು ಮತ್ತು ಕೆಲಸದ ಸ್ಥಳಗಳನ್ನು ತೆರೆಯುವುದಕ್ಕೆ ಅವಕಾಶ ನೀಡಿದ್ದು ಇದರೊಂದಿಗೆ ಕೇಂದ್ರ ಸರ್ಕಾರವೂ ಹೊಸದೊಂದು ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ಪದಗ್ರಹಣ ಸಮಾರಂಭಕ್ಕೆ ಭಾನುವಾರದ ಲಾಕ್ ಡೌನ್ ಅಡ್ಡಿ!
ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಪದಗ್ರಹಣ ಮಾಡುವ ಸಮಾರಂಭದ ಮೇಲೆ ಭಾನುವಾರದ ಸಂಪೂರ್ಣ ಲಾಕ್ ಡೌನ್ ಕರಿನೆರಳಾಗಿ ಪರಿಣಮಿಸಿದೆ.

ಕರ್ನಾಟಕಕ್ಕೆ ಕೊರೋನಾಘಾತ: ಒಂದೇ ದಿನ ದಾಖಲೆ 127 ಪ್ರಕರಣ ಪತ್ತೆ, ಸೋಂಕಿತರ ಸಂಖ್ಯೆ 1,373ಕ್ಕೆ ಏರಿಕೆ
ಸಕ್ಕರೆ ನಾಡು ಮಂಡ್ಯಕ್ಕೆ ಮಹಾ ಕಂಟಕ ಎದುರಾಗಿದ್ದು ಬರೋಬ್ಬರಿ 62 ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ರಾಜ್ಯದಲ್ಲಿ ದಾಖಲೆ 127 ಪ್ರಕರಣ ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 1,373ಕ್ಕೆ ಏರಿಕೆಯಾಗಿದೆ.

ಮಹಾಮಾರಿ ಕೊರೋನಾಗೆ ಬೆಂಗಳೂರಿನಲ್ಲಿ ಮತ್ತೊಂದು ಬಲಿ, ರಾಜ್ಯದಲ್ಲಿ ಸಾವಿನ ಸಂಖ್ಯೆ 38ಕ್ಕೆ ಏರಿಕೆ
ಲಾಕ್ ಡೌನ್ ನಿಂದ ಸಡಿಲಿಕೆ ನೀಡಿದ ಬೆನ್ನಲ್ಲೇ ರಾಜ್ಯಾದ್ಯಂತ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಇದರ ಮಧ್ಯೆ ಬೆಂಗಳೂರಿನಲ್ಲಿ ಕೊರೋನಾ ಮಹಾಮಾರಿಗೆ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ.

ನಾಲ್ಕೇ ದಿನಕ್ಕೆ ಕೊರೋನಾದಿಂದ ಚೇತರಿಕೆ, ಸೃಷ್ಠಿಯಾಯ್ತ ದಿವ್ಯೌಷಧ!
ಕೊರೋನಾ ಮಹಾಮಾರಿ ಜಗತ್ತನ್ನೇ ಕಂಗೆಡಿಸಿದೆ. ಇದರ ಮಧ್ಯೆ ಬಲಿಷ್ಠ ರಾಷ್ಟ್ರಗಳೇ ಕೊರೋನಾಗೆ ತತ್ತರಿಸಿದ್ದು ಇದೀಗ ನೂರಾರು ಕಂಪನಿಗಳು ತಾಮುಂದು ನಾಮುಂದು ಅಂತ ಕೊರೋನಾಗಾಗಿ ಹೊಸ ಲಸಿಕೆ ಕಂಡು ಹಿಡಿಯುವಲ್ಲಿ ನಿರತರವಾಗಿವೆ.

ಕೊರೋನಾ ವಿರುದ್ಧ ಹೋರಾಡಲು 2 ಬಿಲಿಯನ್ ಡಾಲರ್ ಘೋಷಿಸಿದ ಚೀನಾ!
ಕೊರೋನಾ ವಿರುದ್ಧ ಹೋರಾಡುವುದಕ್ಕೆ ಚೀನಾದ ಅಧ್ಯಕ್ಷ ಕ್ಸೀ ಜಿನ್ಪಿಂಗ್ 2 ಬಿಲಿಯನ್ ಡಾಲರ್ ಘೋಷಣೆ ಮಾಡಿದ್ದಾರೆ.

ಅತಿಯಾದ ಆತ್ಮವಿಶ್ವಾಸವೇ ನನಗೆ ಕೊರೋನಾ ಬರಲು ಕಾರಣವಾಯಿತು: ಮಹಾ ಸಚಿವ ಜಿತೇಂದ್ರ
"ಅತಿಯಾದ ಆತ್ಮವಿಶ್ವಾಸ" ದಿಂದಾಗಿ ತಾವು ಮಹಾಮಾರಿ ಕೊರೋನಾ ವೈರಸ್ ಸೋಂಕಿಗೆ ತುತ್ತಾಗಿರುವುದಾಗಿ ಮಹಾರಾಷ್ಟ್ರ ಸಚಿವ ಮತ್ತು ಎನ್ಸಿಪಿ ಹಿರಿಯ ಮುಖಂಡ ಜಿತೇಂದ್ರ ಅವಾದ್ ಅವರು ಸೋಮವಾರ ಹೇಳಿದ್ದಾರೆ.

ರಾಜ್ಯಕ್ಕೆ ಕೊರೋನಾಘಾತ: 24 ಗಂಟೆಗಳಲ್ಲಿ 84 ಮಂದಿಯಲ್ಲಿ ವೈರಸ್ ದೃಢ, ಸೋಂಕಿತರ ಸಂಖ್ಯೆ 1231ಕ್ಕೆ ಏರಿಕೆ
ರಾಜ್ಯದಲ್ಲಿ ಕೊರೋನಾ ತನ್ನ ಆರ್ಭಟವನ್ನು ಮುಂದುವರೆಸಿದ್ದು, ಸೋಮವಾರ ಬರೋಬ್ಬರಿ 84 ಕೊರೋನಾ ಪ್ರಕರಣಗಳು ವರದಿಯಾಗಿವೆ. ಇದರಿಂದ ಒಟ್ಟು ಸೋಂಕಿತರ ಸಂಖ್ಯೆ 1231ಕ್ಕೇರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಾಹಿತಿ ನೀಡಿದೆ.

