coronavirus

ಪಾಕಿಸ್ತಾನದ ಮಹಿಳಾ ರಾಜಕಾರಣಿ ಕೊರೋನಾ ವೈರಸ್ಗೆ ಬಲಿ
ಪಾಕಿಸ್ತಾನದ ಆಡಳಿತಾರೂಢ ತಹ್ರೀಕ್ ಇ-ಇನ್ಸಾಫ್ (ಪಿಟಿಐ) ಪಕ್ಷದ ಮಹಿಳಾ ರಾಜಕಾರಣಿಯೊಬ್ಬರು ಬುಧವಾರ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.

ಕರ್ನಾಟಕಕ್ಕೆ ಮುಳುವಾದ ಮುಂಬೈ ನಂಟು: ಒಂದೇ ದಿನ 63 ಪ್ರಕರಣ ಪತ್ತೆ, ಸೋಂಕಿತರ ಸಂಖ್ಯೆ 1458ಕ್ಕೆ ಏರಿಕೆ!
ನಿನ್ನೆ ಒಂದೇ ದಿನ ದಾಖಲೆ 149 ಪ್ರಕರಣ ಪತ್ತೆಯಾಗಿದ್ದು ರಾಜ್ಯವನ್ನೇ ತಲ್ಲಣಿಸಿತ್ತು. ನಿನ್ನೆ ಮಂಡ್ಯಕ್ಕೆ ಕಂಟಕವಾಗಿದ್ದ ಮುಂಬೈ ನಂಜು ಇಂದು ಹಾಸನಕ್ಕೆ ತಟ್ಟಿದೆ.

ಲಾಲ್'ಬಾಗ್, ಕಬ್ಬನ್ ಪಾರ್ಕ್ ಸೇರಿದಂತೆ ಪಾರ್ಕ್'ಗಳಿಗೆ ವಾಯುವಿಹಾರಿಗಳ ದಂಡು: ಅಧಿಕಾರಿಗಳಿಗೆ ಹೊಸ ತಲೆನೋವು
ಕಳೆದ 55 ದಿನಗಳಿಂದ ಜಾರಿಯಲ್ಲಿದ್ದ ಲಾಕ್'ಡೌನ್ ಸಡಿಲಗೊಳ್ಳುತ್ತಿದ್ದಂತೆಯೇ ಲಾಲ್'ಬಾಗ್, ಕಬ್ಬನ್ ಪಾರ್ಕ್ ಸೇರಿದಂತೆ ನಗರದ ಹಲವು ಉದ್ಯಾನವನಗಳಿಗೆ ಮಂಗಳವಾರ ಸಾವಿರಾರು ವಾಯುವಿಹಾರಿಗಳು ಲಗ್ಗೆಯಿಟ್ಟಿದ್ದು, ಈಗಾಗಲೇ ಕೊರೋನಾ ಸೋಂಕಿ ಹರಡದಂತೆ ಸಾಕಷ್ಟು ಕ್ರಮ ಕೈಗೊಳ್ಳುತ್ತಿರುವ ಅಧಿಕಾರಿಗಳಿಗೆ ಹೊಸ ತಲೆನೋವು ಶುರುವಾದಂತಾಗಿದೆ.

ಎಂತಹ ವೈಭೋಗ: ಕ್ವಾರಂಟೈನ್ ಕೇಂದ್ರದಲ್ಲಿ ಯುವತಿಯರ ನಂಗಾನಾಚ್, ವಿಡಿಯೋ ವೈರಲ್!
ಕೊರೋನಾ ಸೋಂಕು ಹರಡದಂತೆ ಕ್ವಾರಂಟೈನ್ ಮಾಡಲಾಗಿದ್ದ ಕೇಂದ್ರವೊಂದರಲ್ಲಿ ಯುವತಿಯರಿಂದ ಅಶ್ಲೀಲ ಡ್ಯಾನ್ಸ್ ಮಾಡಿಸಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ಭಾರತದಲ್ಲಿ ಕೊರೋನಾ: 24 ಗಂಟೆಗಳಲ್ಲಿ 5,611 ಮಂದಿಯಲ್ಲಿ ಸೋಂಕು ಪತ್ತೆ, ಲಾಕ್'ಡೌನ್ ಸಡಿಲ ಬೆನ್ನಲ್ಲೇ ವೈರಸ್ ಅಬ್ಬರ
ದೇಶದಾದ್ಯಂತ ಜಾರಿಯಲ್ಲಿದ್ದ ಲಾಕ್'ಡೌನ್ ಸಡಿಲಗೊಂಡ ಬೆನ್ನಲ್ಲೇ ದೇಶದಲ್ಲಿ ಕೊರೋನಾ ಸ್ಫೋಟ ಆರಂಭವಾಗಿದೆ. ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ ಬರೋಬ್ಬರಿ ದಾಖಲೆಯ 5,611 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದ್ದು, ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,06,750ಕ್ಕೆ ಏರಿಕೆಯಾಗಿದೆ.

ಕೊರೋನಾಗೆ ಬೆಚ್ಚಿದ ಇಡೀ ವಿಶ್ವ: ಸೋಂಕಿತರ ಸಂಖ್ಯೆ 48 ಲಕ್ಷಕ್ಕೆ ಏರಿಕೆ, 3.23 ಲಕ್ಷ ಮಂದಿ ಸಾವು
ಮಹಾಮಾರಿ ಕೊರೋನಾಗೆ ಇಡೀ ವಿಶ್ವವೇ ಬಿಚ್ಚಿಬಿದ್ದಿದ್ದು, ಸೋಂಕಿತರ ಸಂಖ್ಯೆ 48 ಲಕ್ಷಕ್ಕೆ ಏರಿಕೆಯಾಗಿದೆ. ಅಲ್ಲದೆ, ಹೆಮ್ಮಾರಿ ವೈರಸ್ 3.23 ಲಕ್ಷ ಮಂದಿ ಬಲಿಪಡೆದುಕೊಂಡಿದೆ.

ಅಮೆರಿಕಾದಲ್ಲಿ ಕೊರೋನಾ ಆರ್ಭಟ: ಮತ್ತೆ 1,500 ಮಂದಿ ಸಾವು, 91,845 ತಲುಪಿದ ಮೃತರ ಸಂಖ್ಯೆ
ಕೊರೋನಾ ಹೊಡೆತಕ್ಕೆ ಅಮೆರಿಕಾ ನಲುಗಿ ಹೋಗಿದ್ದು, ಕಳೆದ 24 ಗಂಟೆಗಳ್ಲಿ ಮತ್ತೆ 1,500ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ಅಮೆರಿಕಾದಲ್ಲಿ ಹೆಮ್ಮಾರಿ ವೈರಸ್'ಗೆ ಸಾವನ್ನಪ್ಪಿದ್ದವರ ಸಂಖ್ಯೆ 91,845ಕ್ಕೆ ಏರಿಕೆಯಾಗಿದೆ ಎಂದು ಜಾನ್ಸ್ ಹಾಫ್ ಕಿನ್ಸ್ ವಿಶ್ವವಿದ್ಯಾಲಯ ವರದಿಯಲ್ಲಿ ತಿಳಿಸಿದೆ.

ರಾಜ್ಯದಲ್ಲಿ ಕೊರೋನಾ 'ಮಹಾ' ಸ್ಫೋಟ: ಎಚ್ಚೆತ್ತ ಸರ್ಕಾರದಿಂದ ಮತ್ತಷ್ಟು ರಾಜ್ಯಗಳ ಪ್ರಯಾಣದ ಮೇಲೆ ನಿರ್ಬಂಧ?
ರಾಜ್ಯದಲ್ಲಿ ಕೊರೋನಾ ಸೋಂಕಿನ ಮಹಾಸ್ಫೋಟ ಆರಂಭವಾಗಿದ್ದು, ಸೋಮವಾರ ಶತಕದ ಗಡಿ ದಾಟಿ ದಾಖಲೆ ಮಾಡಿದ್ದ ಕೊರೋನಾ ವೈರಸ್ ಮಂಗಳವಾರ 149 ಸಂಖ್ಯೆ ಮುಟ್ಟುವ ಮೂಲಕ ಮತ್ತೆ ಹೊಸ ದಾಖಲೆ ಸೃಷ್ಟಿಸಿದೆ. ಹೊರ ರಾಜ್ಯ, ಹೊರದೇಶದಿಂದ ಆಗಮನ ಹೆಚ್ಚಳ ಹಾಗೂ ಸೋಂಕು ಪರೀಕ್ಷಾ ಪ್ರಮಾಣ ಹೆಚ್ಚಳಗೊಂಡ ಹಿನ್ನೆಲೆಯಲ್ಲಿ ಇನ್ನು ಮುಂದೆ ಇದೇ ರೀತಿ ದಿನಕ್ಕೆ 100, 200ರ ರೀತಿಯಲ್ಲಿ ಸೋಂಕು...

ಅಧಿಕ ಉಷ್ಣತೆಯಿಂದ ಕೊರೊನಾ ತಡೆ ಅಸಾಧ್ಯ.. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದೊಂದೇ ಪರಿಹಾರ
ಹೆಚ್ಚಿನ ಪ್ರಮಾಣದಲ್ಲಿ ಜನರು ರೋಗ ನಿರೋಧಕ ಶಕ್ತಿ ವೃದ್ದಿಸಿಕೊಳ್ಳುವುದರಿಂದ ಮಾತ್ರ ಕೊರೊನಾ ವೈರಸ್ ಹರಡುವುದನ್ನು ತಡೆಯಬಹುದು. ಹವಾಮಾನ ಬದಲಾವಣೆಯಿಂದ ಇದನ್ನು ನಿಯಂತ್ರಿಸಲಾಗದು ಎಂದು ಹೊಸ ಅಧ್ಯಯನವೊಂದು ದೃಢಪಡಿಸಿದೆ.

