coronavirus

'ಮಾಸ್ ಗ್ರೂಪ್ ಟೆಸ್ಟಿಂಗ್'ನಿಂದ ಸೂಪರ್ ಸ್ಪ್ರೆಡರ್ಸ್ ಪತ್ತೆ ಸಾಧ್ಯ!
ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 700 ಗಡಿ ದಾಟಿದ್ದು, ಇಡೀ ರಾಜ್ಯಕ್ಕೆ ಕೊರೋನಾ ಹರಡಿಸಿದ್ದು ಸೂಪರ್ ಸ್ಪ್ರೆಡರ್ಸ್ ಎಂದು ಹೇಳಲಾಗುತ್ತಿದೆ. ರಾಜ್ಯದಲ್ಲಿ ಪ್ರಸ್ತುತ ಪತ್ತೆಯಾಗಿರುವ ಒಟ್ಟು ಪ್ರಕರಣಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚು ಪಾಸಿಟಿವ್ ಕೇಸ್ ಗಳಿಗೆ ಈ ಸೂಪರ್ ಸ್ಪ್ರೆಡರ್ಸ್'ಗಳೇ ಕಾರಣ ಎನ್ನಲಾಗುತ್ತಿದೆ...

ಭಾರತದಲ್ಲಿ ಒಂದೇ ದಿನ 3,390 ಕೊರೋನಾ ವೈರಸ್ ಪ್ರಕರಣ ಪತ್ತೆ, ಸೋಂಕಿತರ ಸಂಖ್ಯೆ 56342ಕ್ಕೆ ಏರಿಕೆ, 1886 ಮಂದಿ ಸಾವು
ಮೇ.1 ಬಳಿಕ ನಿತ್ಯ 2000ಕ್ಕಿಂತ ಹೆಚ್ಚಿನ ಹೊಸ ಪ್ರಕರಣ ದಾಖಲಾಗುವ ಸಂಪ್ರದಾಯ ಮುಂದುವರೆದಿದ್ದು, ನಿನ್ನೆ ಒಂದೇ ದಿನ ದೇಶದಾದ್ಯಂತ 3,390 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 56342ಕ್ಕೆ ತಲುಪಿದೆ.

ಕೇರಳ ರಾಜ್ಯಕ್ಕೆ 2 ವಿಮಾನ ಆಗಮನ, ಯುಎಇಯಿಂದ ತವರಿಗೆ ಮರಳಿದ ಭಾರತೀಯರು
ಕೊರೋನಾ ನಿಗ್ರಹಕ್ಕಾಗಿ ಘೋಷಣೆ ಮಾಡಲಾಗಿರುವ ಲಾಕ್ಡೌನ್ ನಿಂದಾಗಿ ವಿಶ್ವದ ವಿವಿಧ ದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ತವರಿಗೆ ಕರೆತರುವ ದೇಶದ ಇತಿಹಾಸದ ಅತೀದೊಡ್ಡ ಕಾರ್ಯಾಚರಣೆ ವಂದೇ ಭಾರತ್ ಮಿಷನ್ ಗುರುವಾರದಿಂದ ಆರಂಭವಾಗಿದೆ.

ಕೊರೋನಾ ರೋಗಿಗಳು ಮೂರನೇ ದಿನಕ್ಕೇ ವಾಸನೆ ಗುರುತಿಸುವ ಸಮಸ್ಯೆ ಎದುರಿಸುತ್ತಾರೆ: ಅಧ್ಯಯನ ವರದಿ
ಕೊರೋನಾವೈರಸ್ ಸೋಂಕು ತಗುಲಿದ ಮೂರನೇ ದಿನದ ಹೊತ್ತಿಗೆ ರೋಗಿಯು ವಾಸನೆ ಗ್ರಹಿಸುವ ಶಕ್ತಿಯನ್ನು ಕಳೆದುಕೊಳ್ಳುತ್ತಾನೆ ಎಂದು ಸಂಶೋಧನೆಯೊಂದು ಹೇಳಿದೆ.

ಅಮೆರಿಕಾದಲ್ಲಿ ಕೊರೋನಾ ರಣಕೇಕೆ: 24 ಗಂಟೆಗಳಲ್ಲಿ 2,448 ಮಂದಿ ಬಲಿ, ಒಟ್ಟು ಸಾವಿನ ಸಂಖ್ಯೆ 75,543ಕ್ಕೆ ಏರಿಕೆ
ವಿಶ್ವದ ದೊಡ್ಡಣ್ಣ ಅಮೆರಿಕಾದಲ್ಲಿ ಕೊರೋನಾ ರಣಕೇಕೆ ಹಾಕುತ್ತಿದ್ದು, ಕಳೆದ 24 ಗಂಟೆಗಳಲ್ಲಿ ಮಹಾಮಾರಿಗೆ ಬರೋಬ್ಬರಿ 2,448 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 75,543ಕ್ಕೆ ಏರಿಕೆಯಾಗಿದೆ.

ಬರೋಬ್ಬರಿ 498 ಮಂದಿಗೆ ವೈರಸ್ ಹರಡಿದ 13 ಮಂದಿ ಕೊರೋನಾ ಸೋಂಕಿತರು!
ರಾಜ್ಯದಲ್ಲಿ ಬರೋಬ್ಬರಿ 498 ಮಂದಿಗೆ ವೈರಸ್ ಹರಡಲು ಕಾರಣರಾದ 13 ಮಂದಿ ಕೊರೋನಾ ಸೋಂಕಿತರನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಗುರ್ತಿಸಿದ್ದಾರೆ.

ಉಸಿರಾಡಲು ಸಾಧ್ಯವಾಗದೆ ನರಳುವ ಕೊರೋನಾ ಸೋಂಕಿತರಿಗೆ ಆಕ್ಸಿಜನ್ ಹೆಲ್ಮೆಟ್: ಇದು ಮಂಗಳೂರು ವೈದ್ಯರ ಸಾಧನೆ!
ಕೊರೋನಾ ಸೋಂಕಿಗೊಳಗಾಗಿ ಉಸಿರಾಡಲು ಸಾಧ್ಯವಾಗದೆ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳ ನೆರವಿಗೆ ಧಾವಿಸಿರುವ ಮಂಗಳೂರೂ ವೈದ್ಯರು, ಜೀವ ರಕ್ಷಕ ಸಾಧನ ಆಕ್ಸಿಜನ್ ಹೆಲ್ಮೆಟ್ ವೊಂದನ್ನು ಆವಿಷ್ಕರಿಸಿದ್ದಾರೆ.

ಮುಂಬೈ ಜೈಲಿನ 72 ಕೈದಿಗಳಿಗೆ ಕೊರೋನಾ ಪಾಸಿಟಿವ್: ಮಹಾ ಗೃಹ ಸಚಿವ ಅನಿಲ್ ದೇಶಮುಖ್
ಮುಂಬೈನ ಅರ್ತೂರ್ ರೋಡ್ ಜೈಲಿನ 72 ಕೈದಿಗಳಿಗೆ ಕೊರೋನಾ ವೈರಸ್ ಪಾಸಿಟಿವ್ ದೃಢಪಟ್ಟಿದ್ದು, ಅವರನ್ನು ಐಸೋಲೇಷನ್ ವಾರ್ಡ್ ಗಳಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್ ಅವರು ಹೇಳಿದ್ದಾರೆ.

ಬೆಂಗಳೂರು: ಶಿವಾಜಿನಗರದಲ್ಲಿ 4, ಪಾದರಾಯನಪುರದಲ್ಲಿ ಮತ್ತೆ 2 ಪ್ರಕರಣ ಪತ್ತೆ, ಹೆಚ್ಚಿದ ಆತಂಕ!
ಕೊರೋನಾ ಮಹಾಮಾರಿಗೆ ತುತ್ತಾಗಿದ್ದ ಹೌಸ್ ಕೀಪರ್ ನಿಂದಾಗಿ ಇದೀಗ ಶಿವಾಜಿನಗರದಲ್ಲಿ ಮತ್ತೆ ನಾಲ್ವರಿಗೆ ಸೋಂಕು ತಗುಲಿದೆ. ಇನ್ನು ಪಾದರಾಯನಪುರದಲ್ಲೂ ಇಬ್ಬರಿಗೆ ಸೋಂಕು ತಲುಗಿದ್ದು ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ 162ಕ್ಕೆ ಏರಿಕೆಯಾಗಿದೆ.

