coronavirus

ತಲೆಮರೆಸಿಕೊಂಡಿರುವ ತಬ್ಲೀಘಿ ಜಮಾತ್ ಮಾರ್ಕಜ್ ಮುಖ್ಯಸ್ಥ ತನಿಖೆಗೆ ಸಹಕರಿಸುತ್ತಾರೆ: ವಕೀಲ
ಸದ್ಯ ತಬ್ಲೀಘಿ ಜಮಾತ್ ಮಾರ್ಕಜ್ ಧಾರ್ಮಿಕ ಸಭೆ ದೇಶವನ್ನೇ ಕಂಗೆಡಿಸಿದ್ದು ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ. ಅಂತೆ ಮರ್ಕಜ್ ಮುಖ್ಯಸ್ಥ ಮೊಹಮ್ಮದ್ ಸಾದ್ ಇದೀಗ ತಲೆಮರೆಸಿಕೊಂಡಿದ್ದಾನೆ.

ಕೊರೋನಾ ವೈರಸ್: ರಾಯಬಾಗದಲ್ಲಿ ಆಶಾ ಕಾರ್ಯಕರ್ತೆಯರ ಮೇಲೆ ಕಿಡಿಗೇಡಿಗಳ ಹಲ್ಲೆ
ಧಾರವಾಡ ಆದ ನಂತರ ಈಗ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ಆಶಾ ಕಾರ್ಯಕರ್ತೆಯರ ಮೇಲೆ ಕಿಡಿಗೇಡಿಗಳು ಹಲ್ಲೆ ಮಾಡುವುದರ ಜೊತೆಗೆ ದಾಖಲಾತಿಗಳನ್ನು ಹರಿದು ಹಾಕಿ ಪುಂಡತನ ಮೆರೆದಿದ್ದಾರೆ.

ಒಬ್ಬ ಕೊರೋನಾ ಸೋಂಕಿತ ವ್ಯಕ್ತಿ 30 ದಿನದಲ್ಲಿ 406 ಮಂದಿಗೆ ಸೋಂಕು ತಗುಲಿಸಬಹುದು: ಕೇಂದ್ರ ಸರ್ಕಾರ
ಲಾಕ್ ಡೌನ್ ಆದೇಶಗಳು ಅಥವಾ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇದ್ದರೆ ಓರ್ವ ಕೊರೋನಾ ವೈರಸ್ ಸೋಂಕಿತ ವ್ಯಕ್ತಿ 30 ದಿನಗಳಲ್ಲೇ ಬರೋಬ್ಬರಿ 406 ಮಂದಿಗೆ ಸೋಂಕು ತಗುಲಿಸಬಹುದು ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.

ಕೋವಿಡ್-19: ರಾಜ್ಯದಲ್ಲಿ ಆತಂಕದ ಸನ್ನಿವೇಶ ಇಲ್ಲ; ಬಿಬಿಎಂಪಿ ವಾರ್ ರೂಮಿನಲ್ಲಿ ಕೊರೊನಾ ಡ್ಯಾಷ್‌ಬೋರ್ಡ್- ಡಾ.ಕೆ.ಸುಧಾಕರ್
ಬಿಬಿಎಂಪಿ ವಾರ್ ರೂಂನಲ್ಲಿ ಕೊರೊನಾ ಡ್ಯಾಷ್ ಬೋರ್ಡ್ ನ್ನು ಇಂದಿನಿಂದ ರಾಜ್ಯಾದ್ಯಂತ ಆರಂಭಿಸಿದ್ದು, ಯಾವುದೇ ಮೂಲೆಯಲ್ಲಿನ ಸೋಂಕಿತರ ಸಂಖ್ಯೆ ಬಗ್ಗೆ ಫೋನ್, ಡೆಸ್ಕ್ ಟಾಪ್ ನಲ್ಲಿ ನೋಡಬಹುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.

ಕೊವಿಡ್-19: ಹೈಕೋರ್ಟ್ ನ್ಯಾಯಮೂರ್ತಿಗಳು, ಸಿಬ್ಬಂದಿಯಿಂದ 59.40 ಲಕ್ಷ ರೂ. ನೆರವು
ಕೊವಿಡ್-19 ವಿರುದ್ಧದ ಹೋರಾಟಕ್ಕೆ ರಾಜ್ಯ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಸೇರಿದಂತೆ ಇತರ ನ್ಯಾಯಮೂರ್ತಿಗಳು, ಅಧಿಕಾರಿಗಳು, ಸಿಬ್ಬಂದಿ ಒಟ್ಟಾಗಿ 59.40 ಲಕ್ಷ ರೂ. ನೆರವು ನೀಡಿದ್ದಾರೆ.

ಜೀವಂತವಾಗಿರಿಸಲು ಖಾಲಿ ಮೈದಾನದಲ್ಲಿ ಐಪಿಎಲ್ ನಡೆಸಬೇಕು: ಹರ್ಭಜನ್ ಸಿಂಗ್
ಕೊರೊನಾ ವೈರಸ್ ಭೀತಿಯಿಂದ ಒಲಂಪಿಕ್ಸ್ ನಂತಹ ದೊಡ್ಡ ಕ್ರೀಡೆ ಮುಂದೂಡಲ್ಪಟ್ಟಿವೆ.

ಬೀದರ್: ತಬ್ಲೀಘಿ ಜಮಾತ್ ನಲ್ಲಿ ಭಾಗಿ, ವೀಸಾ ನಿಯಮ ಉಲ್ಲಂಘಿಸಿದ ಕಿರ್ಗಿಸ್ತಾನದ 8 ಮಂದಿ ವಿರುದ್ದ ಪ್ರಕರಣ, ಕ್ವಾರಂಟೈನ್!
ದೆಹಲಿಯ ತಬ್ಲೀಘಿ ಜಮಾತ್ ನಲ್ಲಿ ಭಾಗಿಯಾಗಿದ್ದ ಕಿರ್ಗಿಸ್ತಾನದ 8 ಮಂದಿ ವಿರುದ್ದ ವೀಸಾ ಉಲ್ಲಂಘನೆ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದ್ದು ಅವರನ್ನು ಕ್ವಾರಂಟೈನ್ ಮಾಡಲಾಗಿದೆ.

ಕೊರೋನಾ ವೈರಸ್: ಖಾಸಗಿ ಚಿಕಿತ್ಸಾಲಯಗಳನ್ನು ವೈದ್ಯರು ಮುಚ್ಚಿರುವುದು ಅಮಾನವೀಯ - ಸಿದ್ದರಾಮಯ್ಯ
ರಾಜ್ಯದಲ್ಲಿ ಖಾಸಗಿ ಚಿಕಿತ್ಸಾಲಯಗಳನ್ನು ವೈದ್ಯರು ಮುಚ್ಚಿರುವುದು 'ಅಮಾನವೀಯ ಕೃತ್ಯ' ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಂಗಳವಾರ ಹೇಳಿದ್ದಾರೆ.

ಭಾರತದಲ್ಲಿ 4500 ಗಡಿಯತ್ತ ಸೋಂಕಿತರ ಸಂಖ್ಯೆ: 1 ಲಕ್ಷ ದೆಹಲಿ ನಿವಾಸಿಗಳ ಪರೀಕ್ಷೆಗೊಳಪಡಿಸಲು ಕೇಜ್ರಿವಾಲ್ ಆದೇಶ
ಭಾರತದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಸೋಂಕಿತರ ಸಂಖ್ಯೆ 4500ಕ್ಕೆ ಏರಿಕೆಯಾಗಿದೆ. ಈ ನಡುವಲ್ಲೇ. ದೆಹಲಿಯ 1 ಲಕ್ಷ ಜನರನ್ನು ಪರೀಕ್ಷೆಗೊಳಪಡಿಸುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಮಂಗಳವಾರ ಆದೇಶಿಸಿದ್ದಾರೆ.

