coronavirus

ಕೊರೋನಾ ವೈರಸ್ ಕಡಿವಾಣಕ್ಕೆ ಮೋದಿ ಸರ್ಕಾರದಿಂದ 'ಭಿಲ್ವಾರ' ಅಸ್ತ್ರ!
ಕೊರೋನಾ ವೈರಸ್ ಗೆ ಔಷಧಿ ಕಂಡುಹಿಡಿಯುವ ಮಾತು ಹಾಗಿರಲಿ, ಅದರ ಹರಡುವಿಕೆಗೆ ಕಡಿವಾಣ ಹಾಕುವುದಕ್ಕೇ ಇಡೀ ಜಗತ್ತು ಹರಸಾಹಸಪಡುತ್ತಿದೆ. ಇದಕ್ಕೆ ಭಾರತದಿಂದಷ್ಟೇ ಪರಿಹಾರ ನೀಡುವುದಕ್ಕೆ ಸಾಧ್ಯ ಎಂದು ವಿಶ್ವಸಂಸ್ಥೆಯಾದಿಯಾಗಿ ಜಗತ್ತೇ ಅಭಿಪ್ರಾಯಪಟ್ಟಿತ್ತು. ಅದಕ್ಕೆ ಮತ್ತಷ್ಟು ಪುಷ್ಟಿ ನೀಡುವಂತಿದೆ ಈ ವರದಿ.

ಕೊರೋನಾ ವೈರಸ್: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಐಸಿಯು ಗೆ ದಾಖಲು!
ಕೊರೋನಾ ವೈರಸ್ ಸೋಂಕಿತ, ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಆರೋಗ್ಯ ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ಐಸಿಯುಗೆ ದಾಖಲಿಸಲಾಗಿದೆ.

ಕೊರೋನಾ ಹರಡುವಿಕೆ: ಮುಸ್ಲಿಮರ ವಿರುದ್ಧ ವಿನಾಕಾರಣ ಆರೋಪ ಮಾಡಿದರೆ ಕಠಿಣ ಕ್ರಮ: ಸಿಎಂ ಯಡಿಯೂರಪ್ಪ ಎಚ್ಚರಿಕೆ
ಕೊರೋನಾ ಹರಡುತ್ತಿರುವ ಸಂದರ್ಭದಲ್ಲಿ ಮುಸ್ಲಿಮರ ವಿರುದ್ಧ ವೈರಸ್ ಹರಡುತ್ತಿರುವ ಆರೋಪವನ್ನು ವಿನಾಕಾರಣ ಮಾಡಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.

ಮಳವಳ್ಳಿ ನಿಷೇಧಿತ ವಲಯ; ಜಿಲ್ಲಾಧಿಕಾರಿ ವೆಂಕಟೇಶ್ ಘೋಷಣೆ
* 7 ಕಿ.ಮೀ ವ್ಯಾಪ್ತಿ ಬಫರ್ ಜೋನ್; 28 ದಿನಗಳ ಕಾಲ ತೀವ್ರ ನಿಗಾ

24 ಗಂಟೆಗಳಲ್ಲಿ 704 ಹೊಸ ಕೊರೋನಾ ಪ್ರಕರಣಗಳು, 111 ಸಾವು, ಒಟ್ಟಾರೆ ಸೋಂಕಿತರ ಸಂಖ್ಯೆ 4,281 ಕ್ಕೆ ಏರಿಕೆ
ದೇಶಾದ್ಯಂತ ಕೊರೋನಾ ವೈರಸ್ ಹರಡುವಿಕೆಯ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಒಂದೇ ದಿನದಲ್ಲಿ 704 ಹೊಸ ಪ್ರಕರಣಗಳು ವರದಿಯಾಗಿದ್ದು, ಸಾವಿನ ಸಂಖ್ಯೆ 111ಕ್ಕೆ ಏರಿಕೆಯಾಗಿದೆ.

'ಷಬ್-ಎ-ಬರಾತ್ ದಿನದಂದು ಸಾಮೂಹಿಕ ಪ್ರಾರ್ಥನೆಗೆ ಅವಕಾಶವಿಲ್ಲ, ಖಬರ್‌ಸ್ತಾನ್‌ಗಳಿಗೆ ಭೇಟಿ ನೀಡುವಂತಿಲ್ಲ'
ಏಪ್ರಿಲ್ 9 ರಂದು ಮುಸ್ಲಿಂ ಸಮುದಾಯದ ಪವಿತ್ರ ರಾತ್ರಿ ಎಂದು ಆಚರಿಸಲಾಗುವ ಷಬ್-ಎ-ಬರಾತ್ ಇದ್ದು, ಕೋವಿಡ್ 19 ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸಾಮೂಹಿಕ ಪ್ರಾರ್ಥನೆ, ಖಬರ್‌ಸ್ತಾನ್‌ಗಳಿಗೆ ಭೇಟಿ ನೀಡುವುದನ್ನು ಅಮಾನತುಗೊಳಿಸಲಾಗಿದೆ

ಕೊರೋನಾದಿಂದ ಕರ್ನಾಟಕಕ್ಕೆ ಕೊಂಚ ರಿಲೀಫ್: 2ನೇ ಸ್ಥಾನದಿಂದ 11ನೇ ಸ್ಥಾನಕ್ಕೆ ಕುಸಿತ!
ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 162ಕ್ಕೆ ಏರಿಕೆಯಾಗಿದೆ. ಈ ಮೂಲಕ ಇಡೀ ದೇಶದಲ್ಲಿ ಎರಡನೇ ಸ್ಥಾನದಲ್ಲಿದ್ದ ರಾಜ್ಯ 11 ಸ್ಥಾನಕ್ಕೆ ಕುಸಿದಿದೆ.

ಬೀದಿಗಿಳಿದು ಸಂಭ್ರಮಿಸಿದವರ ವಿರುದ್ಧ ರೋಹಿತ್ ಶರ್ಮಾ ಕಿಡಿ
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕರೆಯಂತೆ ಕೊರೊನಾ ವೈರಸ್ ವಿರುದ್ಧದ ಹೋರಾಟದ ಅಂಗವಾಗಿ ದೇಶದ ಸಮಸ್ತ ಜನತೆ ನಿನ್ನೆ(ಭಾನುವಾರ) ರಾತ್ರಿ 9 ಗಂಟೆ 9 ನಿಮಿಷಕ್ಕೆ ತಮ್ಮ-ತಮ್ಮ ಮನೆಗಳ ಬಾಲ್ಕನಿಗಳಲ್ಲಿ ದೀಪ ಬೆಳಗಿಸಿ ಏಕತೆಯನ್ನು ಪ್ರದರ್ಶಿಸಿದ್ದರು.

ತಮಿಳುನಾಡಿನಲ್ಲಿ ಹೆಚ್ಚಿದ ಕೊರೋನಾ ಆಂತಕ: ಟೆಸ್ಟಿಂಗ್ ಕಿಟ್‌ಗಾಗಿ ಚೀನಾಗೆ ಮೊರೆಯಿಟ್ಟ ಸರ್ಕಾರ!
ತಮಿಳುನಾಡಿನಲ್ಲಿ ಕೊರೋನಾ ವೈರಸ್ ಹರಡುವಿಕೆ ದಿನದಿಂದ ದಿನಕ್ಕೆ ನೂರಾರು ಸಂಖ್ಯೆಯಲ್ಲಿ ಹೆಚ್ಚಾಗುತ್ತಿದ್ದು ಇದರಿಂದ ಆತಂಕಗೊಂಡಿರುವ ರಾಜ್ಯ ಸರ್ಕಾರ ಹೆಚ್ಚಿನ ಪರೀಕ್ಷೆ ನಡೆಸಲು ಟೆಸ್ಟಿಂಗ್ ಕಿಟ್‌ಗಾಗಿ ಚೀನಾಗೆ ಬೇಡಿಕೆಯಿಟ್ಟಿದೆ.

