coronavirus

ಕಾರ್ಮಿಕರು ರಸ್ತೆಯಲ್ಲಿ ಓಡಾಡುವುದು ಕಂಡುಬಂದರೆ ಡೆವಲಪರ್ಸ್ಗಳ ಮೇಲೆ ಕ್ರಮ; ಆರ್.ಅಶೋಕ್
ಕೊರೋನಾ ವೈರಸ್ ಸೋಂಕು ಹಿನ್ನೆಲೆ ಕಟ್ಟಡ ಕಾರ್ಮಿಕರು ಗುಳೆ ಹೋಗುತ್ತಿದ್ದಾರೆ. ಅದನ್ನು ತಪ್ಪಿಸುವ ಉದ್ದೇಶದಿಂದ ಇಂದು ಕ್ರೆಡೈ ಪದಾಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ.

ಚೀನಾದಲ್ಲಿ ಕೊರೋನಾ ಸೆಕೆಂಡ್ ಇನ್ನಿಂಗ್ಸ್?: ಲಕ್ಷಣವೇ ಗೋಚರಿಸುತ್ತಿಲ್ಲ, ಆದರೂ 1541 ಮಂದಿಗೆ ಸೋಂಕು!
ಚೀನಾದಲ್ಲಿ ರೋಗ ಲಕ್ಷಣಗಳೇ ಕಾಣಿಸಿಕೊಳ್ಳದ, ಆದರೆ ಕೊರೋನಾ ಸೋಂಕು ಇರುವ 1541 ಪ್ರಕರಣಗಳು ವರದಿಯಾಗಿವೆ. ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ಈ ಬಗ್ಗೆ ಮಾಹಿತಿ ನೀಡಿದೆ.

ಕೊರೋನಾ ವೈರಸ್: ರಾಜ್ಯದಲ್ಲಿ ಇನ್ನೂ 4 ಹೊಸ ಪ್ರಕರಣ ಪತ್ತೆ, ಸೋಂಕಿತರ ಸಂಖ್ಯೆ 105ಕ್ಕೆ ಏರಿಕೆ
ರಾಜ್ಯದಲ್ಲಿ ಮಹಾಮಾರಿ ಕೊರೋನಾ ಆರ್ಭಟ ಮುಂದುವರೆದಿದ್ದು, ಬುಧವಾರ 4 ಹೊಸ ಪ್ರಕರಣಗಳು ಪತ್ತೆಯಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 105ಕ್ಕೇರಿಕೆಯಾಗಿದೆ.

ಕೊರೋನಾ ಅಟ್ಟಹಾಸದ ನಡುವೆ ಧಾರ್ಮಿಕ ತಾರತಮ್ಯ: ಹಿಂದೂ, ಕ್ರಿಶ್ಚಿಯನ್ನರಿಗೆ ಆಹಾರ ಸಾಮಗ್ರಿ ಕೊಡಲ್ಲ ಎಂದ ಪಾಕಿಸ್ತಾನ!
ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಜಗತ್ತು ಒಗ್ಗಟ್ಟಾಗಿದೆ. ಆದರೆ ಪಾಪಿ ಪಾಕಿಸ್ತಾನ ಮಾತ್ರ ಈ ಜಾಗತಿಕ ಬಿಕ್ಕಟ್ಟಿನ ನಡುವೆಯೂ ಧಾರ್ಮಿಕ ತಾರತಮ್ಯ ಮಾಡುತ್ತಿರುವುದು ಪತ್ತೆಯಾಗಿದೆ! ಪಾಕಿಸ್ತಾನದಲ್ಲಿರುವ ಹಿಂದೂಗಳು, ಮತ್ತು ಕ್ರಿಶ್ಚಿಯನ್ ಅಲ್ಪಸಂಖ್ಯಾತರಿಗೆ ಅಧಿಕಾರಿಗಳು ಆಹಾರ ಸಾಮಗ್ರಿಗಳನ್ನು ನೀಡದೆ ತಾರತಮ್ಯ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ

ಕೊರೋನಾ ಹಾಟ್'ಸ್ಪಾಟ್ ನಿಜಾಮುದ್ದೀನ್ ಮಸೀದಿ ಈಗ ಜನರಿಂದ ಮುಕ್ತ, 2,361 ಮಂದಿ ಸ್ಥಳಾಂತರ: ಸಿಸೋಡಿಯಾ
ಕೊರೋನಾ ಹಾಟ್'ಸ್ಪಾಟ್ ಎಂದೇ ಕರೆಯಲಾಗುತ್ತಿರುವ ದೆಹಲಿ ನಿಜಾಮುದ್ದೀನ್ ಮಸೀದಿ ಇದೀಗ ಜನರಿಂದ ಮುಕ್ತಗೊಂಡಿದ್ದು, ಮಸೀದಿ ಒಳಗೆ ಹಾಗೂ ಹೊರಗಿದ್ದ ಸುಮಾರು 2,361 ಮಂದಿಯನ್ನು ಸ್ಥಳಾಂತರಗೊಳಿಸಲಾಗಿದೆ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಬುಧವಾರ ಹೇಳಿದ್ದಾರೆ.

ಅಗತ್ಯವಸ್ತುಗಳ ಪೂರೈಕೆಗೆ ತಡೆ ಬೇಡ; ರೈತರು, ಗ್ರಾಹಕರ ಹಿತ ಕಾಪಾಡಲು ಕ್ರಮ: ಮುಖ್ಯಮಂತ್ರಿ ಯಡಿಯೂರಪ್ಪ
ಕೊರೊನಾ ಲಾಕ್ಡೌನ್ನಿಂದ ರೈತರಿಗಾಗಿರುವ ಅನಾನುಕೂಲ ಪರಿಹಾರಕ್ಕಾಗಿ ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ ಕೃಷಿ, ಸಹಕಾರ, ತೋಟಗಾರಿಕೆ , ರೇಷ್ಮೆ ಸಚಿವರು ಹಾಗೂ ಅಧಿಕಾರಿಗಳ ಜೊತೆ ಇಂದು ಮಹತ್ವದ ಚರ್ಚೆ ನಡೆಸಿದರು.

ದ.ಆಫ್ರಿಕಾ: ಭಾರತೀಯ ಮೂಲದ ವೈರಾಣು ತಜ್ಞೆ ಗೀತಾ ರಾಮ್ ಜೀ ಕೊರೋನಾಗೆ ಬಲಿ
ಮಹಾಮಾರಿ ಕೊರೋನಾ ವೈರಾಣು ಸೋಂಕಿಗೆ ತುತ್ತಾಗಿ ಭಾರತೀಯ ಮೂಲದ ವೈರಾಲಜಿಸ್ಟ್ ಗೀತಾ ರಾಮ್ ಜಿ (೬೪) ದಕ್ಷಿಣ ಆಫ್ರಿಕಾದಲ್ಲಿ ಮೃತಪಟ್ಟಿದ್ದಾರೆ.

ನಿಜಾಮುದ್ದೀನ್ ಮಸೀದಿಯಿಂದ ಕೊರೋನಾ ಸ್ಫೋಟ: 7 ಮಂದಿ ವಿರುದ್ಧ ಎಫ್ಐಆರ್ ದಾಖಲು
ಇಡೀ ದೇಶಕ್ಕೆ ಕೊರೋನಾ ಸೋಂಕು ಕುರಿತು ಭಾರೀ ಆತಂಕವನ್ನು ಸೃಷ್ಟಿಸಿರುವ ದೆಹಲಿಯ ನಿಜಾಮುದ್ದೀನ್ ಮಸೀದಿಯ ಧಾರ್ಮಿಕ ಕಾರ್ಯಕ್ರಮ ಪ್ರಕರಣ ಕುರಿತಂತೆ ದೆಹಲಿ ಪೊಲೀಸರು 7 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.

ಭಾರತದಲ್ಲಿ ಮುಂದುವರೆದ ಮಹಾಮಾರಿ 'ಕೊರೋನಾ' ಆರ್ಭಟ: 'ಮಹಾ'ದಲ್ಲಿ ವ್ಯಕ್ತಿ ಬಲಿ, ಸಾವಿನ ಸಂಖ್ಯೆ 51ಕ್ಕೆ ಏರಿಕೆ, 1,703 ಮಂದಿಯಲ್ಲಿ ಸೋಂಕು ಪತ್ತೆ
ದೇಶದಲ್ಲಿ ಮಹಾಮಾರಿ ಕೊರೋನಾ ವೈರಸ್ ಆರ್ಭಟ ಎಂದಿನಂತೆ ಮುಂದುವರೆದಿದ್ದು, ಮಹಾರಾಷ್ಟ್ರ ರಾಜ್ಯದಲ್ಲಿ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ, ಇದರಂತೆ ದೇಶದಲ್ಲಿ ವೈರಸ್'ಗೆ ಬಲಿಯಾದವರ ಸಂಖ್ಯೆ 51ಕ್ಕೆ ಏರಿಕೆಯಾಗಿದೆ.

