coronavirus

ಭಾರತದಲ್ಲಿ ಕೊರೋನಾಗೆ 'ನಿಜಾಮುದ್ದೀನ್' ಹಾಟ್ ಸ್ಪಾಟ್ ಆಗಿದ್ದೇಗೆ?
ಮಹಾಮಾರಿ ಕೊರೋನಾ ಜೊತೆಗೆ ದೇಶದಲ್ಲಿ ಇದೀಗ ಬಹು ಚರ್ಚೆಯಾಗುತ್ತಿರುವುದು ನಿಜಾಮುದ್ದೀನ್ ಮಸೀದಿ.

ಲಾಕ್ ಡೌನ್ ಮಾಡಿ ಮೋದಿ ಏನು ಸಾಧಿಸಲ್ಲ, ನಾನು ಲಾಕ್ ಡೌನ್ ಮಾಡೋದಿಲ್ಲ: ಇಮ್ರಾನ್ ಖಾನ್ ಉದ್ಧಟತನ!
ಭಾರತದಲ್ಲಿ ಸೋಂಕಿತರ ಸಂಖ್ಯೆ 100 ದಾಟುತ್ತಲೇ ಪ್ರಧಾನಿ ನರೇಂದ್ರ ಮೋದಿ ಅವರು ಲಾಕ್ ಡೌನ್ ನಿರ್ಧಾರವನ್ನು ಕೈಗೊಂಡಿದ್ದರು. ಆದರೆ ಪಾಕ್ ಪ್ರಧಾನಿ ಮಾತ್ರ ಸೋಂಕಿತರ ಸಂಖ್ಯೆ 1700 ದಾಟಿದರೂ ಲಾಕ್ ಡೌನ್ ತೀರ್ಮಾನಕೈಗೊಳ್ಳದೆ ಮೋದಿ ಅವರನ್ನು ದೂಷಿಸುತ್ತಾ ಮೊಂಡಾಟ ಪ್ರದರ್ಶಿಸುತ್ತಿದ್ದಾರೆ.

ಕೊರೋನಾ ತಪಾಸಣೆ ಇಲ್ಲದೇ ಬಂದವರ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ ವ್ಯಕ್ತಿಯ ಬರ್ಬರ ಕೊಲೆ!
ಮಹಾರಾಷ್ಟ್ರದಿಂದ ಕೊರೋನಾ ತಪಾಸಣೆ ಇಲ್ಲದೇ ಬಂದಿದ್ದ ಇಬ್ಬರು ವಲಸಿಗರ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ ವ್ಯಕ್ತಿಯನ್ನು ಹೊಡೆದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬಿಹಾರದ ಸೀತಾಮಾರ್ಹಿ ಜಿಲ್ಲೆಯಲ್ಲಿ ನಡೆದಿದೆ.

ಕೊರೋನಾ ಬರುತ್ತೆ ಅಂತ ಎಲ್ಲರೂ ಮಾಸ್ಕ್ ಧರಿಸಬೇಕಿಲ್ಲ: ರಾಜ್ಯ ಸರ್ಕಾರ ಸ್ಪಷ್ಟನೆ
ಅನೇಕ ಮಳಿಗೆಗಳು , ಅಂಗಡಿಗಳು ಮತ್ತು ಸಂಸ್ಥೆಗಳು ಮಾಸ್ಕ್ ಧರಿಸುವಂತೆ ಜನರಿಗೆ ಒತ್ತಾಯಿಸುತ್ತಿದೆ ಎನ್ನುವುದು ಗಮನಿಸಿದ ರಾಜ್ಯ ಸರ್ಕಾರ ಮಂಗಳವಾರ ಈ ಸಂಬಂಧ ಸ್ಪಷ್ಟನೆ ನೀಡಿದೆ. ಅದರಂತೆ ಪ್ರತಿಯೊಬ್ಬರೂ ಮಾಸ್ಕ್ ಧರಿಸಬೇಕಾಗಿಲ್ಲ.

ಕೋವಿಡ್ -19 ವೈರಾಣು ತಡೆಗಟ್ಟುವ ಕಾರ್ಯಪಡೆಯಲ್ಲಿ ಅಣ್ಣಾಮಲೈ
ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು ಪೊಲೀಸ್ ಇಲಾಖೆಗೆ ರಾಜೀನಾಮೆ ನೀಡಿದ್ದು, ಸದ್ಯ ಅವರು ಕರ್ನಾಟಕದಲ್ಲಿ ಕೊರೊನಾ ವಿರುದ್ಧದ ಸಮರಕ್ಕೆ ಸನ್ನದ್ಧರಾಗಿದ್ದಾರೆ.

ಕೊರೋನಾ: ರೋಗಿಗಳ ನರಳಾಟ ಕಂಡು ಮತ್ತೆ ಸ್ಟೆತೊಸ್ಕೋಪ್ ಹಿಡಿಯಲು ಸಿದ್ಧ ಎಂದ ಕರ್ನಾಟಕದ ಶಾಸಕರು!
ಕೊರೋನಾ ಮಹಾಮಾರಿ ಕರ್ನಾಟಕ ರಾಜ್ಯವನ್ನೇ ಅಳುಗಾಡಿಸುತ್ತಿದ್ದು ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೆ ಇದೆ. ಇನ್ನು ಆಸ್ಪತ್ರೆಗಳಲ್ಲಿ ವೈದ್ಯರ ಅಭಾವ ಸಹ ಕಾಣಿಸಿಕೊಳ್ಳುತ್ತಿದ್ದು ಆ ಹಿನ್ನೆಲೆಯಲ್ಲಿ ಕರ್ನಾಟಕದ ಇಬ್ಬರು ಶಾಸಕರು ಮತ್ತೆ ಸ್ಟೆತೊಸ್ಕೋಪ್ ಹಿಡಿಯಲಿದ್ದಾರೆ.

ನಿಜಾಮುದ್ದೀನ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ 24 ಮಂದಿಯಲ್ಲಿ ವೈರಸ್ ಪತ್ತೆ: 300 ಮಂದಿ ವಿದೇಶಿಯರು ಬ್ಲಾಕ್'ಲಿಸ್ಟ್'ಗೆ
ರಾಷ್ಟ್ರ ರಾಜಧಾನಿ ನವದೆಹಲಿಯ ನಿಜಾಮುದ್ದೀನ್ ಮರ್ಕಝ್ನಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ 24 ಮಂದಿಯಲ್ಲಿ ಕೋವಿಡ್ - 19 ಸೋಂಕು ದೃಢಪಟ್ಟಿದೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಮಂಗಳವಾರ ತಿಳಿಸಿದ್ದಾರೆ.

ಮೈಸೂರು: ಪೆಟ್ರೋಲ್ ಬಂಕ್ಗೆ ಬೆಂಕಿ ಹಚ್ಚೋಕೆ ಹೊರಟ ಲೇಡಿ ಸಬ್ಇನ್ಸ್ಪೆಕ್ಟರ್, ವಿಡಿಯೋ ವೈರಲ್!
ಮೈಸೂರಿನ ನಂಜನಗೂಡು ಸದ್ಯ ಕೊರೋನಾ ವೈರಸ್ ಅತೀ ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗಿದ್ದು ಇದರ ನಡುವೆ ಮಹಿಳಾ ಪಿಎಸ್ಐ ಒಬ್ಬರು ಪೆಟ್ರೋಲ್ ಬಂಕ್ಗೆ ಬೆಂಕಿ ಹಚ್ಚುತ್ತೇನೆ ಎಂದು ದರ್ಪ ಮೆರೆದಿದ್ದಾರೆ.

ಭಾರತದಲ್ಲಿ ಮುಂದುವರೆದ ಕೊರೋನಾ ಮರಣ ಮೃದಂಗ: ಮತ್ತೆ ಮೂವರು ಬಲಿ, ಸಾವಿನ ಸಂಖ್ಯೆ 45ಕ್ಕೆ ಏರಿಕೆ
ಭಾರತದಲ್ಲಿ ಕೊರೋನಾ ವೈರಸ್ ಮರಣ ಮೃದಂಗ ಮುಂದುವರೆಸಿದ್ದು, ಕೇರಳ, ಮಧ್ಯಪ್ರದೇಶ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಮೂವರು ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ವೈರಸ್'ಗೆ ಬಲಿಯಾದವರ ಸಂಖ್ಯೆ 45ಕ್ಕೆ ಏರಿಕೆಯಾಗಿದೆ.

