coronavirus

ಕೊರೋನಾ ಪೀಡಿತ 101 ವರ್ಷದ ವೃದ್ಧ ಸಂಪೂರ್ಣ ಗುಣಮುಖ...!
ಚೀನಾ ಬಳಿಕ ಕೊರೋನಾ ವೈರಸ್ ಪೀಡಿತ ರಾಷ್ಟ್ರವೆಂದು ಹೇಳಲಾಗುತ್ತಿರುವ ಇಟಲಿ ರಿಮಿನಿ ಎಂಬ ನಗರದಲ್ಲಿ ಸೋಂಕು ಪೀಡಿದ 101 ವರ್ಷದ ವೃದ್ಧರೊಬ್ಬರು ವೈರಸ್ ನಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.

'ಒಗ್ಗಟ್ಟಿನಿಂದ ಹೋರಾಡಿ' ಜಿ20 ನಾಯಕರಿಗೆ ವಿಶ್ವ ಆರೋಗ್ಯ ಸಂಸ್ಥೆ ನಿರ್ದೇಶಕರ ಕರೆ
ವಿಶ್ವಾದ್ಯಂತ ವ್ಯಾಪಿಸುತ್ತಿರುವ ಕೊರೋನಾ ವೈರಸ್ ತಡೆಯಲು ಒಗ್ಗಟ್ಟಿನಿಂದ ಹೋರಾಡಬೇಕು(ಫೈಟ್, ಯುನೈಟ್ ಆ್ಯಂಡ್ ಇಗ್ನೈಟ್) ಎಂದು ಜಿ20 ನಾಯಕರಿಗೆ ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ನಿರ್ದೇಶಕ ಟೆಡ್ರೋಸ್ ಅದಾನೋಮ್ ಘೆಬ್ರೆಯೆಸಸ್ ಕರೆ ನೀಡಿದ್ದಾರೆ.

ಬೆಂಗಳೂರಿನಲ್ಲಿ 31 ಫೀವರ್ ಕ್ಲಿನಿಕ್ ಸ್ಥಾಪನೆ: ಇಂದಿನಿಂದ ಕಾರ್ಯಾರಂಭ
ರಾಜ್ಯ ರಾಜಧಾನಿ ಬೆಂಗಳೂರಿನ ವಿವಿಧ ಬಡಾವಣೆಗಳಲ್ಲಿ 31 ಫೀವರ್ ಕ್ಲಿನಿಕ್ ಗಳನ್ನು ತೆರೆಯಲು ಸರ್ಕಾರ ನಿರ್ಧರಿಸಿದೆ.

ಕೊರೋನಾ ವೈರಸ್: ಪುಣೆಯಲ್ಲಿ ಗುಣಮುಖರಾದ 3 ಸೋಂಕಿತರು
ಮಾರಣಾಂತಿಕ ಕೊರೋನಾವೈರಸ್ ಸೋಂಕಿಗೊಳಗಾದ ಪುಣೆಯ ಮೂವರು ವ್ಯಕ್ತಿಗಳು ಇದೀಗ ಸೋಂಕಿನಿಂದ ಗುಣಮುಖರಾಗಿದ್ದು, ಶೀಘ್ರದಲ್ಲಿಯೇ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆಂದು ವರದಿಗಳು ತಿಳಿಸಿವೆ.

ಪಶ್ಚಿಮ ಬಂಗಾಳ: ಲಾಕ್ ಡೌನ್ ನಿಯಮ ಪಾಲಿಸಿ ಮನೆಯಲ್ಲೇ ಇರಿ ಎಂದ ಪೊಲೀಸ್ ಮೇಲೆ ಉಗುಳಿದ ಕೊರೋನಾ ವೈರಸ್ ಶಂಕಿತ ಮಹಿಳೆ!
ಕೊರೋನಾ ವೈರಸ್ ಪ್ರಸರಣ ತಪ್ಪಿಸಲು ದೇಶಾದ್ಯಂತ ಹೇರಲಾಗಿರುವ ಲಾಕ್ ಡೌನ್ ಹಿನ್ನಲೆಯಲ್ಲಿ ಚಲಿಸುತ್ತಿದ್ದ ಕಾರನ್ನು ತಡೆದ ಪೊಲೀಸ್ ಅಧಿಕಾರಿಯ ಮೇಲೆ ಮಹಿಳೆಯೊಬ್ಬರು ಉಗುಳಿದ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

ಕೊರೋನಾ ಭೀತಿ: ಸ್ವಯಂ ಪ್ರೇರಿತವಾಗಿ ಊರನ್ನೇ ಬಂದ್ ಮಾಡಿದ ಗ್ರಾಮಸ್ಥರು!
ವಿಶ್ವದಾದ್ಯಂತ ಕೊರೋನಾವೈರಸ್ ಮರಣ ಮೃದಂಗ ಬಾರಿಸುತ್ತಿದ್ದು, ಸೋಂಕು ಹಿನ್ನೆಲೆಯಲ್ಲಿ ಜನರು ಮನೆಗಳಿಂದ ಹೊರಬರುವುದಕ್ಕೂ ಆತಂಕ ಪಡುತ್ತಿದ್ದಾರೆ. ಒಂದೆಡೆ ನಗರ ಜನತೆ ಪರಿಸ್ಥಿತಿಯ ಸೂಕ್ಷ್ಮತೆಯನ್ನೇ ಅರಿಯದೆ ವರ್ತಿಸುತ್ತಿದ್ದರೆ, ಮತ್ತೊಂದೆಡೆ ಗ್ರಾಮಗಳಲ್ಲಿರುವ ಜನತೆ ಸೂಕ್ಷ್ಮತೆಯನ್ನರಿತು ಸ್ವಯಂಪ್ರೇರಿತರಾಗಿ ರಸ್ತೆಗಳಿಗೆ ಬೇಲಿ ಹಾಕಿ ಊರಿನ್ನು ಕಾಯಲು...

ಕೊರೋನಾ ಪರಿಸ್ಥಿತಿ ನಿಭಾಯಿಸುವಲ್ಲಿ ಸುಧಾಕರ್-ಶ್ರೀರಾಮುಲು ನಡುವೆ ಜಟಾಪಟಿ: ಮಧ್ಯಪ್ರವೇಶಿಸಿ ಜವಾಬ್ದಾರಿ ಹಂಚಿದ ಸಿಎಂ
ರಾಜ್ಯದಲ್ಲಿ ಕೊರೋನಾ ವೈರಸ್ ಪರಿಸ್ಥಿತಿ ನಿಭಾಯಿಸುವಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಹಾಗೂ ಆರೋಗ್ಯ ಸಚಿವ ಬಿ.ಶ್ರೀರಾಮುಲು ಮಧ್ಯ ಜಟಾಪಟಿ ಎದುರಾಗಿದ್ದು, ಈ ವೇಳೆ ಮಧ್ಯಪ್ರವೇಶಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಜವಾಬ್ದಾರಿ ನಿಭಾಯಿಸಿದ ಘಟನೆ ನಡೆಯಿತು.

ಕೊರೋನಾ ಎಫೆಕ್ಟ್: ಎಲ್ಲಾ ಮಧ್ಯಂತರ, ಜಾಮೀನು, ಕಟ್ಟಡ ನೆಲಸಮ ಆದೇಶ ಒಂದು ತಿಂಗಳು ವಿಸ್ತರಣೆ
ಕೊರೋನಾ ವೈರಸ್ ಮರಣ ಮೃದಂಗ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಇಡೀ ರಾಜ್ಯವನ್ನು ಲಾಕ್'ಡೌನ್ ಮಾಡಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಎಲ್ಲಾ ನ್ಯಾಯಾಲಯಗಳು ಸೀಮಿತ ಅವಧಿಗೆ ಹೊರಡಿಸಿರುವ ಮಧ್ಯಂತರ ಆದೇಶ, ಜಾಮೀನು ಆದೇಶ ಹಾಗೂ ಭೂ ಒತ್ತುವರಿ ತೆರವು ಆದೇಶಗಳನ್ನು ಹೈಕೋರ್ಟ್ ಒಂದು ತಿಂಗಳ ಕಾಲ ವಿಸ್ತರಿಸಿದೆ.

ಜನರಿಗೆ ಅಗತ್ಯವಿರುವ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸಿ: ಅಧಿಕಾರಿಗಳಿಗೆ ಶೆಟ್ಟರ್ ಸೂಚನೆ
ಅಗತ್ಯ ವಸ್ತುಗಳ ಖರೀದಿ ವೇಳೆ ಜನರು ಗುಂಪು ಸೇರದಂತೆ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಅವರು ಸೂಚಿಸಿದ್ದಾರೆ.

