coronavirus

ಕೊರೋನಾವೈರಸ್: ರಿಯಲ್ ಸ್ಟಾರ್ ಉಪ್ಪಿ 'ಕಬ್ಜ' ಶೂಟಿಂಗ್ ಸ್ತಬ್ದ
ರಿಯಲ್ ಸ್ಟಾರ್ ಉಪೇಂದ್ರ-ಆರ್. ಚಾಂದ್ರು ಕಾಂಬಿನೇಷನ್ ಇರುವ "ಕಬ್ಜ" ಚಿತ್ರದ ಶೂಟಿಂಗ್ ಒಂದು ವಾರದ ಮಟ್ಟಿಗೆ ಸ್ಥಗಿತವಾಗಿದೆ. ಕೋವಿಡ್ -19 ಮಹಾಮಾರಿಯ ಕಾರಣ ಭಾನುವಾರದಿಂದ ಒಂದು ವಾರದವರೆಗೆ ಶೂಟಿಂಗ್ ಸ್ಥಗಿತಗೊಳಿಸಲಾಗಿದೆ. ಎಂದು ನಿರ್ದೇಶಕ ಚಂದ್ರು ಹೇಳೀದ್ದಾರೆ.

ಕೊರೋನಾಗೆ ಭಾರತದಲ್ಲಿ ಮೂರನೇ ಬಲಿ: ಮಹಾರಾಷ್ಟ್ರದಲ್ಲಿ 64 ವರ್ಷದ ವ್ಯಕ್ತಿ ಸಾವು, 125ಕ್ಕೆ ಏರಿದ ಸೋಂಕಿತರ ಸಂಖ್ಯೆ
ವಿಶ್ವಾದ್ಯಂತ ವ್ಯಾಪಕವಾಗಿ ಹಬ್ಬಿರುವ ಮಾರಕ ಕೊರೋನಾ ವೈರಸ್ ದಾಳಿಗೆ ಭಾರತದಲ್ಲಿ ಇದೀಗ ಮೂರನೇ ವ್ಯಕ್ತಿ ಬಲಿಯಾಗಿದ್ದು, ಮಹಾರಾಷ್ಟ್ರದಲ್ಲಿ 64 ವರ್ಷದ ಸೋಂಕು ಪೀಡಿತ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಕೊರೋನಾ ವೈರಸ್: ಸೋಂಕು ಪೀಡಿತರ ಸಂಖ್ಯೆ 125ಕ್ಕೆ ಏರಿಕೆ, ಹೆಚ್ಚಿದ ಆತಂಕ
ದೇಶದಲ್ಲಿ ಕೊರೋನಾ ವೈರಾಣು ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಮಂಗಳವಾರ ಮತ್ತೋರ್ವರಲ್ಲಿ ಸೋಂಕು ದೃಢಪಟ್ಟಿದ್ದು, ಇದರಂತೆ ಭಾರತದಲ್ಲಿ ಸೋಂಕಿತರ ಸಂಖ್ಯೆ 125ಕ್ಕೆ ಏರಿಕೆಯಾಗಿದೆ.

ಕೊರೋನಾ ವೈರಸ್: ಪ್ರತ್ಯೇಕ ಕೊಠಡಿಗಳಲ್ಲಿ ಟಿವಿ, ಇಂಟರ್ನೆಟ್ ಸೌಲಭ್ಯ ಕಲ್ಪಿಸಲಿರುವ 'ಮಹಾ' ಸರ್ಕಾರ
ಕೊರೋನಾ ವೈರಸ್ ಕಂಡು ಬಂದ ಸೋಂಕಿತರನ್ನು ಪ್ರತ್ಯೇಕ ಕೊಠಡಿಯಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಪ್ರತ್ಯೇಕ ಕೊಠಡಿಗಳಲ್ಲಿ ಟಿವಿ ಹಾಗೂ ಇಂಟರ್ನೆಟ್ ವ್ಯವಸ್ಥೆ ಕಲ್ಪಿಸಲು ಮಹಾರಾಷ್ಟ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.

ಕೊರೋನಾ ವೈರಸ್: ಕಲಬುರಗಿಯಲ್ಲಿ ಮತ್ತೆ 4 ಶಂಕಿತರು, ಹೆಚ್ಚಿದ ಆತಂಕ
ಈಗಾಗಲೇ ಕೊರೋನಾ ಆತಂಕದಿಂದ ತತ್ತರಿಸಿರುವ ಕಲಬುರಗಿ ಜಿಲ್ಲೆಯಿಂದ ಸೋಮವಾರ ಮತ್ತೆ ನಾಲ್ವರು ಶಂಕಿತ ಕೊರೋನಾ ಪೀಡಿತರ ಗಂಟಲು ದ್ರವದ ಮಾದರಿಯ್ನು ಬೆಂಗಳೂರು ವೈರಾಣು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ಕೊರೋನಾ ಸೋಂಕಿಗೆ ದೇಶದಲ್ಲೇ ಮೊದಲ ಸಾವಿಗೆ ಸಾಕ್ಷಿಯಾಗಿದ್ದ ಜಿಲ್ಲೆಯಲ್ಲಿ ಈಗ ಮತ್ತಷ್ಟು ಆತಂಕ ಹೆಚ್ಚಿದೆ.

ಬೆಂಗಳೂರಿನಲ್ಲಿ ಇಬ್ಬರಲ್ಲಿ ಕೊರೋನಾ: ರಾಜ್ಯದಲ್ಲಿ 10ಕ್ಕೇರಿದ ಸೋಂಕಿತರ ಸಂಖ್ಯೆ
ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದ್ದು, ಸೋಮವಾರ ಒಂದೇ ದಿನ ಬೆಂಗಳೂರಿನಲ್ಲಿ ಇಬ್ಬರು ಹಾಗೂ ಕಲಬುರಗಿಯಲ್ಲಿ ಒಬ್ಬರು ಸೇರಿದಂತೆ ಮೂವರಲ್ಲಿ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ ಬರೋಬ್ಬರಿ 10ಕ್ಕೆ ಏರಿಕೆಯಾಗಿದೆ.

ಕೊರೋನಾ ಎಫೆಕ್ಟ್: ಇಂದಿನಿಂದ ಮಾ.20ರವರೆಗೂ ವಿಧಾನಸಭೆ ಗ್ಯಾಲರಿಗೆ ಪ್ರೇಕ್ಷಕರ ನಿರ್ಬಂಧ
ಕೊರೋನಾ ವೈರಸ್ ವಿಶ್ವಪ್ಯಾಪಿ ಮರಣ ಮೃದಂಗ ಬಾರಿಸುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ವಿಧಾನಸಭೆಯ ಪ್ರೇಕ್ಷಕರ ಗ್ಯಾಲರಿಗೆ ಸಾರ್ವಜನಿಕರನ್ನು ಮಂಗಳವಾರದಿಂದ ನಾಲ್ಕು ದಿನಗಳ ಕಾಲ ನಿರ್ಬಂಧಿಸಲಾಗಿದೆ.

ವಿಶ್ವದಾದ್ಯಂತ ವ್ಯಾಪಕವಾದ ಕೊರೋನಾ: ವೈರಸ್'ಗೆ 7000 ಮಂದಿ ಬಲಿ, 1,75,500ಕ್ಕೇರಿದ ಸೋಂಕಿತರ ಸಂಖ್ಯೆ
ವಿಶ್ವದಾದ್ಯಂತ ಕೊರೋನಾ ವೈರಸ್'ಗೆ ಬಲಿಯಾಗುತ್ತಿರುವವರ ಸಂಖ್ಯೆ ಏರುತ್ತಲೇ ಇದ್ದು, ಮಹಾಮಾರಿಗೆ ಈ ವರೆಗೂ ಜಗತ್ತಿನಾದ್ಯಂದ ಒಟ್ಟು 7,000 ಮಂದಿ ಬಲಿಯಾಗಿದ್ದು, ಸೋಂಕಿತರ ಸಂಖ್ಯೆ 1,75,500ಕ್ಕೆ ಏರಿಕೆಯಾಗಿದೆ.

ಕೋವಿಡ್ -19: ಕೇರಳದಲ್ಲಿ ಮೂರು ಹೊಸ ಪ್ರಕರಣಗಳು ಪತ್ತೆ
ಕೇರಳದಲ್ಲಿ ಮೂರು ಹೊಸ ಕೊರೋನಾವೈರಸ್ ಪ್ರಕರಣಗಳು ವರದಿಯಾಗಿದೆ. ಪ್ರಸ್ತುತ ಕೇರಳದಲ್ಲಿ ಒಟ್ಟಾರೇ 24 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ

