coronavirus

ಆನ್ಲೈನ್ ತರಗತಿಗೆ ನಿಷೇಧ: ಪರ್ಯಾಯ ಪರಿಹಾರ ಕಂಡುಕೊಳ್ಳಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ!
ಆನ್ಲೈನ್ ತರಗತಿಗಳನ್ನು ನಿಷೇಧಿಸಿರುವುದಕ್ಕೆ ಪರಿಹಾರ ಕಂಡುಕೊಳ್ಳಬೇಕೆಂದು ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರವನ್ನು ಸೂಚಿಸಿದೆ.

ಬೆಂಗಳೂರಿನಲ್ಲಿ ಕೊರೋನಾ ಅಟ್ಟಹಾಸಕ್ಕೆ ರಾಜೀವ್ ಗಾಂಧಿ ಅಸ್ಪತ್ರೆ ಸಿಬ್ಬಂದಿಗಳು ಹೈರಾಣ
ತೀವ್ರ ತೀವ್ರ ಉಸಿರಾಟದ ಕಾಯಿಲೆ (ಸಾರಿ) ಮತ್ತು ಇನ್ಫ್ಲುಯೆಂಜಾ ಮಾದರಿಯ ಅನಾರೋಗ್ಯ (ಐಎಲ್ಐ) ಪ್ರಕರಣಗಳನ್ನು ಮಾತ್ರವೇ ಗಮನಿಸುತ್ತಿದ್ದ ರಾಜೀವ್ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಎದೆ ರೋಗಗಳು (ಆರ್ಜಿಐಸಿಡಿ) ಗುರುವಾರ ಕೋವಿಡ್ ಗೆ ಗೊತ್ತುಪಡಿಸಿದ ಆಸ್ಪತ್ರೆ ಆಗಿ ಮಾರ್ಪಟ್ಟಿದೆ. ಇದಲ್ಲದೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬೆಡ್ ಗಳ ಕೊರತೆಯಾದ ನಂತರ ಆರ್ಜಿಐಸಿಡಿಗೆ ಕೋವಿಡ್ ಟ

ಕೊರೊನಾ ರೋಗಿಗಳ ಫೋಟೋ ಸೆರೆಹಿಡಿದರೆ ಕಠಿಣ ಕ್ರಮ: ಭಾಸ್ಕರ್ ರಾವ್ ಎಚ್ಚರಿಕೆ
ಇನ್ಮುಂದೆ ಅನುಮತಿ ಇಲ್ಲದೆ ಕೊರೊನಾ ಸೋಂಕಿತ ರೋಗಿಗಳ ಛಾಯಾಚಿತ್ರ ಸೆರೆಹಿಡಿಯದಂತೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.

24 ಗಂಟೆಗಳಲ್ಲಿ ವಿಶ್ವದಲ್ಲಿ 1 ಲಕ್ಷ 83 ಸಾವಿರ ಹೊಸ ಪಾಸಿಟಿವ್ ಪ್ರಕರಣ ದಾಖಲು
ವಿಶ್ವದ 213 ರಾಷ್ಟ್ರಗಳನ್ನು ಕಾಡುತ್ತಿರುವ ಮಾರಕ ಕೊರೋನಾ ವೈರಸ್ ಆರ್ಭಟ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ 1 ಲಕ್ಷದ 83 ಸಾವಿರ ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ.

ಕೋವಿಡ್-19ಗೆ ಬ್ರೆಜಿಲ್ ನಲ್ಲಿ 50 ಸಾವಿರಕ್ಕೂ ಹೆಚ್ಚು ಬಲಿ: ಅತಿ ಹೆಚ್ಚು ಕೊರೋನಾ ಸಾವು ಕಂಡ ಜಗತ್ತಿನ ಎರಡನೇ ರಾಷ್ಟ್ರ
213ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾವೈರಸ್ ಗೆ ಬ್ರೆಜಿಲ್ ನಲ್ಲಿ ಸಾವಿನ ಸಂಖ್ಯೆ 50 ಸಾವಿರ ಗಡಿ ದಾಟಿದೆ. ಆ ಮೂಲಕ ಬ್ರೆಜಿಲ್ ಅತೀ ಹೆಚ್ಚು ಕೊರೋನಾ ಸಾವು ಕಂಡ ಜಗತ್ತಿನ 2ನೇ ರಾಷ್ಟ್ರ ಎಂಬ ಕುಖ್ಯಾಗೆ ಭಾಜನವಾಗಿದೆ.

ಗ್ರಹಣ ಗಂಡಾಂತರ: ಬೆಂಗಳೂರಿನಲ್ಲಿ ದಾಖಲೆಯ 196 ಪ್ರಕರಣ ಪತ್ತೆ, ಇಂದು 453 ಪಾಸಿಟಿವ್, ಒಟ್ಟಾರೆ 9,150 ಸೋಂಕು!
ಕಂಕಣ ಸೂರ್ಯಗ್ರಹಣವಾದ ಇಂದು ಬೆಂಗಳೂರಿನಲ್ಲಿ ದಾಖಲೆಯ 196 ಪ್ರಕರಣಗಳು ಪತ್ತೆಯಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಬರೋಬ್ಬರಿ 453 ಮಂದಿ ಕೊರೋನಾಗೆ ತುತ್ತಾಗಿದ್ದು ಸೋಂಕಿತರ ಸಂಖ್ಯೆ 9,150ಕ್ಕೆ ಏರಿಕೆಯಾಗಿದೆ.

ತೆಲಂಗಾಣ: ಕಾಂಗ್ರೆಸ್ ಹಿರಿಯ ನಾಯಕ ವಿ.ಹನುಮತ ರಾವ್'ರಲ್ಲಿ ಕೊರೋನಾ ದೃಢ
ತೆಲಂಗಾಣ ರಾಜ್ಯದ ಕಾಂಗ್ರೆಸ್ ಹಿರಿಯ ನಾಯಕ ವಿ.ಹನುಮಂತ ರಾವ್ ಅವರಲ್ಲಿ ಕೊರೋನಾ ವೈರಸ್ ದೃಢಪಟ್ಟಿದೆ ಎಂದು ಭಾನುವಾರ ತಿಳಿದುಬಂದಿದೆ.

ಬೆಂಗಳೂರು ನಗರದಲ್ಲಿ ಕೊರೋನಾ ಆರ್ಭಟ: ನಿನ್ನೆ ಒಂದೇ ದಿನ 94 ಮಂದಿಯಲ್ಲಿ ಸೋಂಕು ಪತ್ತೆ
ಬೆಂಗಳೂರು ನಗರದಲ್ಲಿ ಕೊರೋನಾ ಆರ್ಭಟ ಮುಂದುವರೆದಿದ್ದು, ಕೊರೋನಾ ವಾರಿಯರ್ಸ್, ವಿಧಾನಸೌಧದ ವಾರ್ತಾ ಇಲಾಖೆ ಉಪ ನಿರ್ದೇಶಕ, ಪೊಲೀಸ್ ಸಿಬ್ಬಂದಿ, ಬಿಎಂಟಿಸಿ ಸಿಬ್ಬಂದಿ, ಮೆಡಿಕಲ್ ಕಾಲೇಜು ವಿದ್ಯಾರ್ಥಿ ಸೇರಿದಂತೆ ಶನಿವಾರ ಬರೋಬ್ಬರಿ 94 ಮಂದಿಗೆ ಕೊರೋನಾ ಸೋಂಕು ದೃಢಪಡುವ ಮೂಲಕ ನಗರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಸಾವಿರದ ಗಡಿ ದಾಟಿದೆ.

ಕೋವಿಡ್-19: 24 ಗಂಟೆಗಳಲ್ಲಿ 15,413 ಮಂದಿಯಲ್ಲಿ ವೈರಸ್ ಪತ್ತೆ, 4.10ಲಕ್ಷಕ್ಕೇರಿದೆ ಸೋಂಕಿತರ ಸಂಖ್ಯೆ
ಲಾಕ್'ಡೌನ್ ಸಡಿಲಗೊಂಡ ಬಳಿಕ ಶರವೇಗದಲ್ಲಿ ಏರುತ್ತಿರುವ ಕೊರೋನಾ ಸೋಂಕಿತರ ಸಂಖ್ಯೆ ಹೊಸದೊಂದು ಮೈಲಿಗಲ್ಲು ನಿರ್ಮಿಸಲು ಸಜ್ಜಾಗಿದೆ. ಭಾನುವಾರ ದೇಶದಲ್ಲಿ ಹೊಸದಾಗಿ 15,413 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 4.10ಲಕ್ಷಕ್ಕೆ ಏರಿಕೆಯಾಗಿದೆ.

