Indian Army

ಚೀನಾಗೆ ಹಿನ್ನಡೆ: ಎಲ್ಎಸಿಯಲ್ಲಿ ಮತ್ತೆ 6 ಶಿಖರಗಳು ಭಾರತ ಸೇನೆ ವಶಕ್ಕೆ!
ಚೀನಾ ಗಡಿಯಲ್ಲಿ ತೆಗೆದಿರುವ ತಗಾದೆಗೆ ಒಂದರ ಮೇಲೆ ಒಂದರಂತೆ ಭಾರತ ಮುಟ್ಟಿ ನೋಡಿಕೊಳ್ಳುವಂತಹ ಪೆಟ್ಟು ನೀಡುತ್ತಿದೆ.

ಪಾಕಿಸ್ತಾನದಿಂದ ಉಗ್ರರಿಗೆ ಡ್ರೋನ್ ಮೂಲಕ ಶಸ್ತ್ರಾಸ್ತ್ರ ರವಾನೆ; ರಜೌರಿಯಲ್ಲಿ 3 ಎಲ್ಇಟಿ ಉಗ್ರರ ಬಂಧನ
ಪಾಕಿಸ್ತಾನದಿಂದ ಉಗ್ರರಿಗೆ ಡ್ರೋನ್ ಮೂಲಕ ಶಸ್ತ್ರಾಸ್ತ್ರ ರವಾನೆ ಮಾಡುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಭರ್ಜರಿ ಕಾರ್ಯಾಚರಣೆ ನಡೆಸಿದ ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ರಜೌರಿಯಲ್ಲಿ ಕಾರ್ಯಾಚರಣೆ ನಡೆಸಿ ಮೂವರು ಉಗ್ರರನ್ನು ಬಂಧಿಸಿದ್ದಾರೆ.

ಜಮ್ಮು: ತಲೆಗೆ ಬುಲೆಟ್ ಹೊಕ್ಕಿದ ಸ್ಥಿತಿಯಲ್ಲಿ ಭಾರತೀಯ ಯೋಧನ ಮೃತದೇಹ ಪತ್ತೆ; ಆತ್ಮಹತ್ಯೆ ಶಂಕೆ
ತಲೆಗೆ ಗುಂಡು ಹೊಕ್ಕಿದ ಸ್ಥಿತಿಯಲ್ಲಿ ಸೇನಾ ಸಿಬ್ಬಂದಿಯ ಮೃತದೇಹ ಜಮ್ಮುವಿನ ಹೊರವಲಯದಲ್ಲಿರುವ ಶಿಬಿರದಲ್ಲಿ ಪತ್ತೆಯಾಗಿದ್ದು, ಯೋಧ ತನ್ನ ಸೇವಾ ರೈಫಲ್ನಿಂದ ತನ್ನ ಜೀವನವನ್ನು ಕೊನೆಗೊಳಿಸಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಪೂರ್ವ ಲಡಾಕ್ ಗಡಿ ಸಂಘರ್ಷ: ಮುಂದಿನ ಚಳಿಗಾಲಕ್ಕೆ ಭಾರತೀಯ ಸೇನೆ ಹೇಗೆ ಸಿದ್ಧವಾಗಿದೆ, ಯೋಧರ ರಕ್ಷಣೆ ಹೇಗೆ?
ಪೂರ್ವ ಲಡಾಕ್ ನಲ್ಲಿ ಚೀನಾದ ಪಿಎಲ್ ಎಯಿಂದ ಗಡಿ ಉಲ್ಲಂಘನೆಯಾಗಿ ಸೇನಾ ನಿಯೋಜನೆಯಿಂದ ಉದ್ವಿಗ್ನ ಪರಿಸ್ಥಿತಿ ಉಂಟಾಗಿರುವುದರಿಂದ ಭಾರತೀಯ ಸೇನೆ ಯಾವುದೇ ಸಮಯದಲ್ಲಿ ಕಾರ್ಯಾಚರಣೆಗೆ ಸಿದ್ದವಾಗಲು, ಮುಂದಿನ ಚಳಿಗಾಲದಲ್ಲಿ ಕ್ಷಿಷ್ಟ ಪರಿಸ್ಥಿತಿಗಳನ್ನು ಎದುರಿಸಲು ಹೇಗೆ ಸನ್ನದ್ಧವಾಗಿದೆ, ಎಂದು ಎಎನ್ ಐ ಸುದ್ದಿಸಂಸ್ಥೆ ವರದಿಗಾರರು ಹೋಗಿ ಪರಿಶೀಲನೆ ನಡೆಸಿದ್ದಾರೆ.

ಪೂರ್ವ ಲಡಾಖ್ ನಲ್ಲಿ ಚಳಿಗಾಲದಲ್ಲೂ ಪೂರ್ಣ ಪ್ರಮಾಣದ ಯುದ್ಧಕ್ಕೆ ಭಾರತೀಯ ಸೇನೆ ಸರ್ವ ಸನ್ನದ್ಧ!
ಪೂರ್ವ ಲಡಾಖ್ ನಲ್ಲಿ ಚೀನಾ ಯುದ್ಧದ ಅನಿವಾರ್ಯತೆ ಸೃಷ್ಟಿಸಿದರೆ ಸೇನೆ ಸಮರಕ್ಕೂ ಸರ್ವ ಸನ್ನದ್ಧ ಸ್ಥಿತಿಯಲ್ಲಿದ್ದೂ ಚಳಿಗಾಲದಲ್ಲೂ ಸಮರ್ಥವಾಗಿ ಶತ್ರು ಸೇನೆಯನ್ನು ಎದುರಿಸಲಿದೆ ಎಂದು ಭಾರತೀಯ ಸೇನೆ ಘೋಷಿಸಿದೆ.

'ಆಪರೇಷನ್ ಆಲ್ ಔಟ್' ಆಗಸ್ಟ್ನಲ್ಲಿ 18 ಭಯೋತ್ಪಾದಕರು ಹತ, 108 ಸ್ಥಳೀಯ ಮಟ್ಟದ ಕಾರ್ಯಕರ್ತರ ಬಂಧನ
ಆಪರೇಷನ್ ಆಲ್ ಔಟ್ ಕಾರ್ಯಾಚರಣೆಯಡಿ ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದಾಗಿನಿಂದ ಭದ್ರತಾ ಪಡೆಗಳು ಭಯೋತ್ಪಾದಕ ಸಂಘಟನೆಗಳ ಹಿರಿಯ ಕಮಾಂಡರ್ ಗಳು ಸೇರಿದಂತೆ ಅನೇಕ ಉಗ್ರರನ್ನು ನಿರ್ನಾಮ ಮಾಡಿವೆ.

ಪಂಜಾಬ್ ಗಡಿಯಲ್ಲಿ ಶಸ್ತ್ರಾಸ್ತ್ರ ಕಳ್ಳಸಾಗಣೆ ಯತ್ನ ವಿಫಲಗೊಳಿಸಿದ ಬಿಎಸ್ಎಫ್, ಎಕೆ-47, ಎಂ-16 ರೈಫಲ್ ವಶ
ಪಂಜಾಬ್ನ ಫಿರೋಜ್ಪುರ ಜಿಲ್ಲೆಯ ಅಬೋಹಾರ್ನ ಭಾರತ-ಪಾಕಿಸ್ತಾನ ಗಡಿಯಲ್ಲಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಯತ್ನವನ್ನು ಗಡಿ ಭದ್ರತಾ ಪಡೆ (ಬಿಎಸ್ಎಫ್) ಶನಿವಾರ ವಿಫಲಗೊಳಿಸಿದೆ.

ಅರುಣಾಚಲ ಪ್ರದೇಶದಿಂದ ಕಾಣೆಯಾಗಿದ್ದ ಐವರನ್ನು ಭಾರತಕ್ಕೆ ಹಸ್ತಾಂತರಿಸಿ ಚೀನಾ ಸೇನೆ
ಚೀನಾ ಗಡಿಭಾಗದಲ್ಲಿ ಅರುಣಾಚಲ ಪ್ರದೇಶದ ಕುಗ್ರಾಮವೊಂದರ ಅರಣ್ಯ ಪ್ರದೇಶದಿಂದ ಕೆಲ ದಿನಗಳ ಹಿಂದೆ ಕಾಣೆಯಾಗಿದ್ದ ಐವರನ್ನು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಭಾರತೀಯ ಸೇನೆಗೆ ಹಸ್ತಾಂತರಿಸಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

ಪ್ಯಾಂಗಾಂಗ್ ತ್ಸೋನ ಫಿಂಗರ್ 4 ಪ್ರದೇಶ ವಶಕ್ಕೆ ಪಡೆದ ಭಾರತೀಯ ಸೇನೆ, ಚೀನಾಗೆ ರೆಡ್ ಲೈನ್ ಫಿಕ್ಸ್
ಲಡಾಖ್ ನ ಪ್ಯಾಂಗಾಂಗ್ ತ್ಸೋನ ಉತ್ತರ ದಂಡೆಯ ಫಿಂಗರ್ 4 ಪ್ರದೇಶವನ್ನು ಭಾರತೀಯ ಸೇನೆ ವಶಕ್ಕೆ ಪಡೆದಿದ್ದು, ಸರೋವರದ ಉತ್ತರ ಮತ್ತು ದಕ್ಷಿಣ ದಂಡೆಯ ತನ್ನ ಸ್ಥಾನದಲ್ಲಿ ಮುಳ್ಳುತಂತಿ ಬೇಲಿ ಹಾಕುವ ಮೂಲಕ ಚೀನಾಗೆ ರೆಡ್ ಲೈನ್ ಫಿಕ್ಸ್ ಮಾಡಿದೆ.

