Indian Army

ದೆಹಲಿ ಹಿಂಸಾಚಾರ: ಸಾವಿನ ಸಂಖ್ಯೆ 34ಕ್ಕೆ ಏರಿಕೆ, 200ಕ್ಕೂ ಅಧಿಕ ಮಂದಿಗೆ ಗಾಯ
ಪೌರತ್ವ ತಿದ್ದುಪಡಿ ಕಾಯ್ದೆ ಪರ-ವಿರೋಧಿ ಬಣಗಳ ನಡುವಿನ ಹಿಂಸಾಚಾರದಲ್ಲಿ ಬಲಿಯಾದವರ ಸಂಖ್ಯೆ 34ಕ್ಕೆ ಏರಿಕೆಯಾಗಿದೆ.

ಸಿಎಎ ಹಿಂಸಾಚಾರ: ದೆಹಲಿಗೆ ಸೇನೆ ರವಾನಿಸಿ ಎಂದ ಸಿಎಂ ಕೇಜ್ರಿವಾಲ್, 20ಕ್ಕೇರಿದ ಸಾವಿನ ಸಂಖ್ಯೆ
ಪೌರತ್ವ ತಿದ್ದುಪಡಿ ಕಾಯ್ದೆ ಪರ-ವಿರೋಧಿ ಬಣಗಳ ನಡುವಿನ ಸಂಘರ್ಷ ಮತ್ತು ಹಿಂಸಾಚಾರದಲ್ಲಿ ಸಾವನ್ನಪ್ಪಿದವರ ಸಂಖ್ಯೆ 20ಕ್ಕೆ ಏರಿಕೆಯಾಗಿದ್ದು, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕೂಡಲೇ ಸೇನೆಯನ್ನು ಕಾರ್ಯಾಚರಣೆಗೆ ಇಳಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಕದನ ವಿರಾಮ ಉಲ್ಲಂಘಿಸಿದ ಪಾಕ್'ಗೆ ದಿಟ್ಟ ಉತ್ತರ: ಓರ್ವ ಯೋಧನನ್ನು ಸದೆಬಡಿದ ಭಾರತೀಯ ಸೇನೆ
ಗಡಿಯಲ್ಲಿ ಉದ್ಧಟತನ ಪ್ರದರ್ಶಿಸುತ್ತಿರುವ ಪಾಕಿಸ್ತಾನ ಸೇನೆಗೆ ಭಾರತೀಯ ಸೇನೆ ದಿಟ್ಟ ಉತ್ತರವನ್ನು ನೀಡಿದ್ದು, ಓರ್ವ ಪಾಕಿಸ್ತಾನ ಯೋಧನನ್ನು ಹತ್ಯೆ ಮಾಡಿದೆ ಎಂದು ವರದಿಗಳು ತಿಳಿಸಿವೆ.

ಸೇನೆಯಲ್ಲಿ ಮಹಿಳೆಯರ ನಿಯೋಜನೆ ಕುರಿತು ಸುಪ್ರೀಂ ತೀರ್ಪು ನಮಗೆ ಸ್ಪಷ್ಟತೆಯನ್ನು ನೀಡಿದೆ: ಸೇನಾ ಮುಖ್ಯಸ್ಥ ನಾರವಾನೆ
ಭಾರತೀಯ ಸೇನಾಪಡೆಯು ಲಿಂಗ ಸಮಾನತೆಯನ್ನು ಸಾಧಿಸುತ್ತಿದೆ. ಮಹಿಳಾ ಅಧಿಕಾರಿಗಳಿಗೆ ಶಾಶ್ವತ ನಿಯೋಜನೆಗೆ ಸುಪ್ರೀಂ ಕೋರ್ಟ್ ಆದೇಶಿಸಿದ್ದು ಇದು ಸೇನಾ ನಿರ್ಧಾರಕ್ಕೆ ಸಾಕಷ್ಟು ಸ್ಪಷ್ಟತೆಯನ್ನು ನೀಡಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನಾರವಾನೆ ಹೇಳಿದ್ದಾರೆ.

ಪುಲ್ವಾಮ ದಾಳಿ ಹುತಾತ್ಮ ಯೋಧರಿಗೆ ಗೌರವ ಅರ್ಪಿಸಿದ ಸಿಆರ್ ಪಿಎಫ್
ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಕಳೆದ 2019ರ ಫೆಬ್ರವರಿ 14ರಂದು ನಡೆದಿದ್ದ ಉಗ್ರರ ದಾಳಿಯಲ್ಲಿ ಹುತಾತ್ಮರಾಗಿದ್ದ ಯೋಧರ ಸ್ಮರಣಾರ್ಥ ಸ್ಮಾರಕ ಸ್ತಂಭ ಸಮರ್ಪಣೆ ಮಾಡಿ ಕೇಂದ್ರ ಮೀಸಲು ಪೊಲೀಸ್ ಪಡೆ ಗೌರವ ಸಲ್ಲಿಸಿದೆ.

ಜಮ್ಮು-ಕಾಶ್ಮೀರ: ಪ್ರತೀಕಾರ ದಾಳಿಯಲ್ಲಿ ಮೂವರು ಪಾಕಿಸ್ತಾನಿ ಉಗ್ರರನ್ನು ಕೊಂದು ಹಾಕಿದ ಭಾರತೀಯ ಸೇನೆ
ಪ್ರತೀಕಾರದ ಗುಂಡಿನ ದಾಳಿಯಲ್ಲಿ ಭಾರತೀಯ ಸೇನೆ ಜಮ್ಮು-ಕಾಶ್ಮೀರದ ಮೆಂಧರ್ ವಲಯದಲ್ಲಿ ಗಡಿ ನಿಯಂತ್ರಣ ರೇಖೆ ಬಳಿ ಕಳೆದ 9ರಂದು ಭಾನುವಾರ ಮೂವರು ಪಾಕಿಸ್ತಾನಿ ಉಗ್ರರನ್ನು ಹತ್ಯೆ ಮಾಡಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

ಕಮಾಂಡ್ ಪೋಸ್ಟ್ ನಿರಾಕರಣೆ ಧೈರ್ಯಶಾಲಿ ಅಧಿಕಾರಿಗಳ ಘನತೆಗೆ ಘಾಸಿ: ಮಹಿಳಾ ಸೇನಾಧಿಕಾರಿಗಳ ಅಸಮಾಧಾನ
ಸೇನೆಯಲ್ಲಿ ಮಹಿಳಾ ಅಧಿಕಾರಿಗಳಿಕ್ಗೆ ಪರ್ಮನೆಂಟ್ ಕಮಿಷನ್ ನೀತಿ ರೂಪಿಸುವುದಕ್ಕೆ ತಡ ಮಾಡುತ್ತಿರುವ ಕೇಂದ್ರ ಸರ್ಕಾರದ ನಡೆ ಬಗ್ಗೆ ಮಹಿಳಾ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

'ಸಿಎಜಿ ವರದಿ ಸ್ವಲ್ಪ ಹಳೆಯದು, ಭಾರತೀಯ ಸೇನೆ ಇಂದು ಸನ್ನದ್ಧವಾಗಿದೆ: ಜ.ನಾರವಾನೆ
ಸಿಯಾಚಿನ್ ನಂತಹ ಎತ್ತರದ ಕ್ಲಿಷ್ಟಕರ ಪ್ರದೇಶದಳಲ್ಲಿ ಸೇವೆ ಸಲ್ಲಿಸುವ ಭಾರತೀಯ ಸೇನೆಯ ಸೈನಿಕರಿಗೆ ಮೂಲಭೂತ ಸೌಕರ್ಯಗಳು ಸಮರ್ಪಕವಾಗಿಲ್ಲ, ಅವರಿಗೆ ದಿನಸಿ, ಬಟ್ಟೆಗಳು ಸರಿಯಾಗಿ ಪೂರೈಕೆಯಾಗುತ್ತಿಲ್ಲ ಎಂದು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಸದನದಲ್ಲಿ ವರದಿ ಸಲ್ಲಿಸಿದೆ ಎಂದು ಸುದ್ದಿಯಾಗಿತ್ತು.

ರಕ್ತವನ್ನೇ ಹೆಪ್ಪುಗಟ್ಟಿಸುವ ಚಳಿಯಲ್ಲಿ 17000 ಅಡಿ ಎತ್ತರದಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಐಟಿಬಿಪಿ ಯೋಧರು
ದೇಶಾದ್ಯಂತ 71ನೇ ಗಣರಾಜ್ಯೋತ್ಸವ ಆಚರಣೆಯಲ್ಲಿ ತೊಡಗಿದ್ದು, ಅತ್ತ ಲಡಾಖ್ ನಲ್ಲಿ ಇಂಡೋ ಟಿಬೆಟ್ ಬಾರ್ಡರ್ ಪೊಲೀಸರು ತ್ರಿವರ್ಣ ಧ್ವಜವನ್ನು ಹಾರಿಸಿ ಗಣರಾಜ್ಯೋತ್ಸವ ಆಚರಿಸಿದ್ದಾರೆ.

