Indian Army

'ಪಿಒಕೆ ವಶ ಸೇರಿದಂತೆ ಯಾವುದೇ ಕಾರ್ಯಾಚರಣೆಗೂ ಸೇನೆ ಸಿದ್ಧ'- ಸೇನಾ ಮುಖ್ಯಸ್ಥ
ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ವಶಕ್ಕೆ ಪಡೆದು ಅದನ್ನು ಭಾರತದ ಭಾಗವಾಗಿಸಲು ಸೇನಾಪಡೆಗಳು ಸಿದ್ಧವಿರುವುದಾಗಿ ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ. ಈ ವಿಚಾರದಲ್ಲಿ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ಯಾವುದೇ ಕಾರ್ಯಾಚರಣೆಗೂ ಸೇನೆ ಸಿದ್ಧವಿರುವುದಾಗಿ ಅವರು ಹೇಳಿದ್ದಾರೆ.

ಸೈನಿಕರೇ ಹೊತ್ತೊಯ್ಯಬಲ್ಲ ಟ್ಯಾಂಕರ್ ಧ್ವಂಸಗೊಳಿಸುವ ಕ್ಷಿಪಣಿ ಪರೀಕ್ಷೆ ಯಶಸ್ವಿ!
ಭಾರತೀಯ ಸೇನೆಯ ಬತ್ತಳಿಕೆಗೆ ಮತ್ತೊಂದು ಪ್ರಮುಖ ಅಸ್ತ್ರ ಸೇರ್ಪಡೆಯಾಗುತ್ತಿದ್ದು, ಶುತ್ರುಪಾಳಯದ ಟ್ಯಾಂಕರ್ ಗಳನ್ನು ಛಿದ್ರಗೊಳಿಸಬಲ್ಲ ವಿನಾಶಕಾರಿ ಕ್ಷಿಪಣಿ ಪರೀಕ್ಷೆ ನಡೆಸಲಾಗಿದೆ.

ಗಡಿಯಲ್ಲಿ ಮತ್ತೆ 7 ಉಗ್ರ ನೆಲೆಗಳನ್ನು ಸಕ್ರಿಯಗೊಳಿಸಿದ ಪಾಕಿಸ್ತಾನ, 275 ಉಗ್ರರಿಗೆ ತರಬೇತಿ
ಉರಿ ಉಗ್ರ ದಾಳಿ ಬಳಿಕ ಪಿಒಕೆಯಲ್ಲಿ ಭಾರತೀಯ ಸೇನೆ ಸರ್ಜಿಕಲ್ ಸ್ಟ್ರೈಕ್ ಮೂಲಕ ಉಗ್ರನೆಲೆಗಳನ್ನು ಧ್ವಂಸ ಮಾಡಿತ್ತು. ಆದರೆ ಇದೀಗ ಅದೇ ಜಾಗದಲ್ಲಿ ಪಾಕಿಸ್ತಾನ ಸೇನೆ 7 ಉಗ್ರ ನೆಲೆಗಳನ್ನು ಸಕ್ರಿಯಗೊಳಿಸಿದೆ ಎಂದು ತಿಳಿದುಬಂದಿದೆ.

ಪಾಕ್ ನುಸುಳುವಿಕೆ ಯತ್ನ ವಿಫಲ: ಉಗ್ರರ ಶಿಬಿರ ಧ್ವಂಸ, ಭಾರತೀಯ ಸೇನೆಯಿಂದ ವಿಡಿಯೋ ಬಹಿರಂಗ!
ಭಾರತದಲ್ಲಿ ಭಯೋತ್ಪಾದಕ ದಾಳಿ ನಡೆಸಲು ಉಗ್ರರನ್ನು ಗಡಿ ನುಸುಳಲು ಸಹಕರಿಸುತ್ತಿದ್ದ ಪಾಕ್ ಸೇನಾ ನೆಲೆ ಮತ್ತು ಉಗ್ರರ ಶಿಬಿರಗಳ ಮೇಲೆ ದಾಳಿ ನಡೆಸಿರುವ ವಿಡಿಯೋವನ್ನು ಭಾರತೀಯ ಸೇನೆ ಬಹಿರಂಗಪಡಿಸಿದೆ.

ಕಣಿವೆ ರಾಜ್ಯದಲ್ಲಿ 8 ಲಷ್ಕರ್ ಉಗ್ರರ ಬಂಧನ: ಕಾಶ್ಮೀರ ಪೊಲೀಸರ ಮಾಹಿತಿ
ಮಹತ್ವದ ಕಾರ್ಯಾಚರಣೆಯಲ್ಲಿ ಭಾರತದಲ್ಲಿ ವಿಧ್ವಂಸಕ ಕೃತ್ಯವೆಸಗಲು ಸಂಚು ರೂಪಿಸಿದ್ದ ಪಾಕಿಸ್ತಾನ ಮೂಲದ 8 ಮಂದಿ ಉಗ್ರರನ್ನು ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ದಕ್ಷಿಣ ಭಾರತದಲ್ಲಿ ಉಗ್ರ ಕೃತ್ಯಕ್ಕೆ ಸಂಚು? ಗುಜರಾತಿನಲ್ಲಿ ವಾರಸುದಾರರಿಲ್ಲದ ದೋಣಿಗಳು ಪತ್ತೆ
ಮುಂದಿನ ದಿನಗಳಲ್ಲಿ ದಕ್ಷಿಣ ಭಾರತದಲ್ಲಿ ಭಯೋತ್ಪಾದಕ ದಾಳಿಗಳಾಗುವ ಸಾಧ್ಯತೆ ಬಗೆಗೆ ಗುಪ್ತಚರ ಮಾಹಿತಿಗಳು ಲಭ್ಯವಾಗಿದೆ ಎಂದು ಭಾರತೀಯ ಸೇನೆಯ ದಕ್ಷಿಣ ಕಮಾಂಡೋ ಪಡೆ ಸೋಮವಾರ ಹೇಳಿಕೆಯಲ್ಲಿ ತಿಳಿಸಿದೆ.

ಭಾರತೀಯ ಸೇನಾ ಕ್ಯಾಂಪ್ ಗಳ ಮೇಲೆ ವಿಧ್ವಂಸಕ ದಾಳಿಗೆ ಪಾಕಿಸ್ತಾನದ 4 ಉಗ್ರರಿಂದ ಸಂಚು: ಗುಪ್ತಚರ ವರದಿ
ಭಾರತೀಯ ಸೇನಾ ಕ್ಯಾಂಪ್ ಗಳ ಮೇಲೆ ವಿಧ್ವಂಸಕ ದಾಳಿ ನಡೆಸಲು ಪಾಕಿಸ್ತಾನ ಮೂಲದ ಉಗ್ರ ಸಂಘಟನೆಯ ನಾಲ್ಕು ಉಗ್ರರು ಗಡಿಯಲ್ಲಿ ಹೊಂಚು ಹಾಕಿ ಕುಳಿತಿದ್ದಾರೆ ಎಂದು ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.

ಜಮ್ಮು-ಕಾಶ್ಮೀರ ಗಡಿಯಲ್ಲಿ ಪಾಕ್ ಉದ್ಧಟತನ: ಭಾರತೀಯ ಸೇನೆಯಿಂದ ದಿಟ್ಟ ಉತ್ತರ
ಜಮ್ಮು ಮತ್ತು ಕಾಶ್ಮೀರದ ಗಡಿಗಳಲ್ಲಿ ಪಾಕಿಸ್ತಾನ ಸೇನೆ ತನ್ನ ಉದ್ಧಟತನವನ್ನು ಪ್ರದರ್ಶಿಸುತ್ತಿದ್ದು, ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಿದೆ ಎಂದು ಭಾನುವಾರ ವರದಿಗಳು ತಿಳಿಸಿವೆ.

ಉಗ್ರ ನಿಗ್ರಹ ಕಾರ್ಯಾಚರಣೆ ವೇಳೆ ದುರಂತ, ನದಿಗೆ ಬಿದ್ದು ಸೈನಿಕನ ಸಾವು!
ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ನಿಗ್ರಹ ಕಾರ್ಯಾಚರಣೆ ವೇಳೆ ದುರಂತ ಸಂಭವಿಸಿದ್ದು, ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದ ಯೋಧನೋರ್ವ ಕಾಲು ಜಾರಿ ನದಿಗೆ ಬಿದ್ದು ಸಾವನ್ನಪ್ಪಿದ್ದಾರೆ.

