kidnapped

ಬೆಂಗಳೂರು: ಆರೇ ಗಂಟೆಯಲ್ಲಿ ಅಪಹರಣ ಪ್ರಕರಣ ಭೇದಿಸಿದ ಪೊಲೀಸರು; ಇಬ್ಬರು ಟೆಕ್ಕಿಗಳ ರಕ್ಷಣೆ, 11 ಮಂದಿ ಬಂಧನ
ದೂರು ದಾಖಲಾದ ಕೂಡಲೇ ಮಾರತಹಳ್ಳಿ ಪೊಲೀಸ್ ಇನ್ಸ್ಪೆಕ್ಟರ್ ಪುನೀತ್ ಬಿ.ಎನ್. ನೇತೃತ್ವದಲ್ಲಿ ಹುಡುಕಾಟಕ್ಕೆ ವಿಶೇಷ ತಂಡ ರಚಿಸಲಾಯಿತು. ತಂಡವು ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸುವುದರ ಜತೆಗೆ ವಿವಿಧ ಸ್ಥಳಗಳಲ್ಲಿ ತಾಂತ್ರಿಕ ವಿಧಾನಗಳ ಮೂಲಕ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಿತು.

ಪಾಕಿಸ್ತಾನ: ಬಲೂಚ್ ರಾಜಕುಮಾರ ಮತ್ತವರ ಮೂವರು ಅಂಗರಕ್ಷಕರ ಅಪಹರಣ; ಮುಂದುವರಿದ ಶೋಧ ಕಾರ್ಯ
ಕ್ವೆಟ್ಟಾದಲ್ಲಿರುವ ಪೊಲೀಸ್ ಪ್ರಧಾನ ಕಚೇರಿಯ ಪ್ರಾಥಮಿಕ ತನಿಖಾ ವರದಿಯ ಪ್ರಕಾರ, ಸೋಮವಾರ ರಾತ್ರಿ ಪ್ರಿನ್ಸ್ ಅಹ್ಮದ್ಜೈ ಅವರು ಖುಜ್ದಾರ್ನಿಂದ ಕಲಾತ್ ಕಡೆಗೆ ಹೆದ್ದಾರಿಯಲ್ಲಿ ತಮ್ಮ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ, ಶಸ್ತ್ರಸಜ್ಜಿತ ದುಷ್ಕರ್ಮಿಗಳ ಗುಂಪೊಂದು ವಾಹನವನ್ನು ಅಡ್ಡಗಟ್ಟಿದೆ.

ಬಾಗ್ದಾದ್ ನಲ್ಲಿ ಅಮೆರಿಕಾ ಪತ್ರಕರ್ತೆ ಶೆಲ್ಲಿ ಕಿಟೆಲ್ಸನ್ ಅಪಹರಣ!
ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಅಪಹರಣಕಾರರ ವಾಹನ ಮಗುಚಿ ಬಿದ್ದಿದೆ ಎಂದು ಎಪಿ ವರದಿ ಮಾಡಿದೆ. ಮಂಗಳವಾರ ಸಂಜೆ ಅಪಹರಣ ನಡೆದಿರುವುದನ್ನು ದೃಢಪಡಿಸಿದೆ.

Uttar Pradesh: ಶಾಲೆಗೆ ಹೊರಟ ನಾಲ್ವರು ಹದಿಹರೆಯದ ಹುಡುಗಿಯರ 'ಕಿಡ್ನಾಪ್'!
ಈ ಹುಡುಗಿಯರು 6 ನೇ ತರಗತಿ ಅಥವಾ 7 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಳ್ಳಾರಿ ಜಿಲ್ಲಾಸ್ಪತ್ರೆ ಮಕ್ಕಳ ವೈದ್ಯನ ಅಪಹರಣ: ಭಾರೀ ಹಣಕ್ಕೆ ಬೇಡಿಕೆ
ಕಾರಿನಲ್ಲಿ ಬಂದ ದುಷ್ಕರ್ಮಿಗಳ ಗ್ಯಾಂಗ್ ಇಂದು ಬೆಳಗ್ಗೆ ವಾಕಿಂಗ್ ಹೋಗುತ್ತಿದ್ದ ವೈದ್ಯ ಡಾ. ಸುನೀಲ್ ಅವರ ಬಾಯಿಗೆ ಬಟ್ಟೆ ತುರುಕಿ ಕಿಡ್ನ್ಯಾಪ್ ಮಾಡಿಕೊಂಡು ಹೋಗಿದೆ.ನಗರದ ಸತ್ಯನಾರಾಯಣ ಪೇಟೆ ಬಳಿ ಅಪಹರಣ ನಡೆದಿದೆ.

ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಕೇಸ್ಗೆ ಬಿಗ್ ಟ್ವಿಸ್ಟ್: ಅಪಹರಣವೇ ನಡೆದಿಲ್ಲ ಎಂದ ಸಂತ್ರಸ್ತೆ ಹೇಳಿಕೆ ವೈರಲ್!
ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರ ವಿರುದ್ಧದ ಅಪಹರಣ ಆರೋಪ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ದೊರೆತಿದೆ. ಅಪಹರಿಸಲ್ಪಟ್ಟಿದ್ದರು ಎನ್ನಲಾಗಿರುವ ಸಂತ್ರಸ್ತ ಮಹಿಳೆ ಎಸ್ಐಟಿ ಸುರ್ಪರ್ಧಿಯಲ್ಲಿರುವಾಗಲೇ ಆಕೆಯ ಸ್ಪಷ್ಟೀಕರಣದ ವಿಡಿಯೋವೊಂದು ವೈರಲ್ ಆಗಿದೆ.

ಗಣಿಯಲ್ಲಿ ಕೆಲಸ ಮಾಡುತ್ತಿದ್ದ ಅಸ್ಸಾಂನ ಮೂವರು ಕಾರ್ಮಿಕರು ಅಪಹರಣ
ಅರುಣಾಚಲ ಪ್ರದೇಶದ ಚಾಂಗ್ಲಾಂಗ್ ಜಿಲ್ಲೆಯ ಗಣಿಯಲ್ಲಿ ಕೆಲಸ ಮಾಡುತ್ತಿದ್ದ ಅಸ್ಸಾಂನ ಮೂವರು ಕಾರ್ಮಿಕರನ್ನು ಶಂಕಿತ ಉಗ್ರರು ಅಪಹರಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಪಹರಣಕ್ಕೊಳಗಾಗಿದ್ದ ಬೆಂಗಳೂರಿನ ಪಿಯು ವಿದ್ಯಾರ್ಥಿ ಅರಕಲಗೂಡು ಬಳಿ ರಕ್ಷಣೆ
ಬೆಂಗಳೂರಿನ ನಾಗಾರ್ಜುನ ಕಾಲೇಜಿನ ಪಿಯುಸಿ ವಿದ್ಯಾರ್ಥಿ ಚಿರಾಗ್(21)ನನ್ನು ಅಪಹರಿಸಿದ್ದ ನಾಲ್ವರು ದುಷ್ಕರ್ಮಿಗಳು ಬುಧವಾರ ಹಾಸನದ ಅರಕಲಗೂಡು ಬಳಿ ಬಿಟ್ಟು ಹೋಗಿದ್ದಾರೆ.

ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಯಿಂದ ನವಜಾತ ಶಿಶು ಅಪಹರಣ
ವಾಣಿ ವಿಲಾಸ ಆಸ್ಪತ್ರೆಯಿಂದ ಶನಿವಾರ ಮುಂಜಾನೆ ಎಂಟು ದಿನದ ಗಂಡು ಮಗುವನ್ನು ಅಪಹರಿಸಲಾಗಿದೆ. ನವಜಾತ ಶಿಶು ಅಪಹರಿಸಿದ ಮಹಿಳೆಯ ಪತ್ತೆಗೆ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.

