Newdelhi

ದೇಶಾದ್ಯಂತ ಸಮಗ್ರ ಫುಡ್ ಪಾರ್ಕ್ ಅಭಿವೃದ್ಧಿಗೆ ಯುಎಇನಿಂದ 2 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ
ನಾಲ್ಕು ರಾಷ್ಟ್ರಗಳ I2U2' ಶೃಂಗಸಭೆ ಅಂಗವಾಗಿ ದೇಶಾದ್ಯಂತ ಸಮಗ್ರ ಫುಡ್ ಪಾರ್ಕ್ ಅಭಿವೃದ್ಧಿಗೆ ಯುನೈಟೆಡ್ ಅರಬ್ ಎಮಿರೈಟ್ಸ್ 2 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡಲಿದೆ.

ಸಂಸತ್ ಮುಂಗಾರು ಅಧಿವೇಶನ: ಜುಲೈ 17ಕ್ಕೆ ಸರ್ವ ಪಕ್ಷ ಸಭೆ ಕರೆದ ಸರ್ಕಾರ
ಸಂಸತ್ತಿನ ಮುಂಗಾರು ಅಧಿವೇಶನ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಭಾನುವಾರ ಸರ್ವ ಪಕ್ಷ ಸಭೆಯನ್ನು ಕರೆದಿದೆ. ಅಂದು ಬೆಳಗ್ಗೆ 11 ಗಂಟೆಗೆ ಸಭೆ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಸಭೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.

ದೇಶದಲ್ಲಿ ಕೊರೋನಾ ಏರಿಕೆ: ಕಳೆದ 24 ಗಂಟೆಗಳಲ್ಲಿ 16,678 ಹೊಸ ಪ್ರಕರಣ ಪತ್ತೆ, 26 ಸಾವು
ದೇಶದಲ್ಲಿ ಕೊರೋನಾ ಪ್ರಕರಣಗಳ ಏರಿಕೆ ಮುಂದುವರೆದಿದೆ. ಕಳೆದ 24 ಗಂಟೆಗಳಲ್ಲಿ 16,678 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 26 ಸೋಂಕಿತರು ಸಾವನ್ನಪ್ಪಿದ್ದಾರೆ. ಒಟ್ಟಾರೇ 14,629 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಮಾಹಿತಿ ಇಲ್ಲದ ಕಾಮೆಂಟ್ ಮಾಡುವುದು ಪ್ರಯೋಜನಕಾರಿಯಲ್ಲ: ಜುಬೇರ್ ಬಂಧನ ಕುರಿತು ಜರ್ಮನಿ ಹೇಳಿಕೆಗೆ ಭಾರತದ ಪ್ರತಿಕ್ರಿಯೆ
ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೇರ್ ಅವರ ಆಕ್ಷೇಪಾರ್ಹ ಟ್ವೀಟ್ ಪ್ರಕರಣದ ಬಗ್ಗೆ ನಿಗಾ ವಹಿಸುವುದಾಗಿ ಜರ್ಮನಿ ಹೇಳಿದ ಒಂದು ದಿನದ ನಂತರ ಪ್ರತಿಕ್ರಿಯಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಇದು ದೇಶೀಯ ವಿಷಯವಾಗಿದ್ದು, ನ್ಯಾಯಾಂಗ ಪ್ರಕ್ರಿಯೆ ನಡೆಯುತ್ತಿರುವಾಗ ಪ್ರತಿಕ್ರಿಯಿಸುವುದು ಸೂಕ್ತವಲ್ಲ ಎಂದು ಹೇಳಿದೆ.

ಜೆಪಿ ನಡ್ಡಾ ಭೇಟಿ ಮಾಡಿದ ಆನಂದ್ ಶರ್ಮಾ: ಹಲವು ಊಹಾಪೋಹ
ಕಾಂಗ್ರೆಸ್‌ನ ಜಿ 23 ಗುಂಪಿನ ಸದಸ್ಯರಾಗಿರುವ ಆನಂದ್ ಶರ್ಮಾ ಗುರುವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎನ್ನುವ ಸುದ್ದಿ ಊಹಾಪೋಹಗಳಿಗೆ ಕಾರಣವಾಗಿದೆ.

ಮತ್ತೆ ಸೋಂಕು ಹೆಚ್ಚು ಸಾಧ್ಯತೆ; BA.2.75 ಇತರೆ ಓಮಿಕ್ರಾನ್ ಉಪ ತಳಿಗಳ ನಿಗಾವಣೆ ಅಗತ್ಯ: ಡಾ. ಎನ್.ಕೆ. ಅರೋರಾ
ಕಳೆದ ಆರು ತಿಂಗಳಲ್ಲಿ ದೇಶದಲ್ಲಿ ಆತಂಕಕಾರಿ ಹೊಸ ಕೋವಿಡ್ ರೂಪಾಂತರಿ ವರದಿಯಾಗಿಲ್ಲ. ಆದಾಗ್ಯೂ, ಕೆಲವು ಓಮಿಕ್ರಾನ್ ಉಪ ತಳಿಗಳು ಮತ್ತೆ ಸೋಂಕನ್ನು ಪ್ರಚೋದಿಸುವುದರಿಂದ ಅವುಗಳ ಪ್ರಸರಣ ಕುರಿತ ನಿಕಟ ಮೇಲ್ವಿಚಾರಣೆ ಅಗತ್ಯವಾಗಿದೆ ಎಂದು ಪ್ರತಿರಕ್ಷಣೆ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪಿನ ಮುಖ್ಯಸ್ಥ ಡಾ.ಎನ್. ಕೆ ಅರೋರಾ ಹೇಳಿದ್ದಾರೆ.

ನವದೆಹಲಿ: ಮೊಯಿತ್ರಾ, ಮಣಿಮೇಕಲೈ ವಿರುದ್ಧ ಪೊಲೀಸರಿಗೆ ಬಿಜೆಪಿ ಮುಖಂಡರ ದೂರು
ಟಿಎಂಸಿ ಸಂಸದೆ ಮೆಹುವಾ ಮೊಯಿತ್ರಾ ಮತ್ತು ಕೆನಡಾ ಮೂಲದ ಚಿತ್ರ ನಿರ್ದೇಶಕ ಲೀನಾ ಮಣಿಮೇಕಲೈ ವಿರುದ್ಧ ಬಿಜೆಪಿ ಮುಖಂಡರು ಗುರುವಾರ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.ಅವರು ಹಿಂದೂಗಳ ಭಾವನೆಗಳಿಗೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಧರ್ಮವನ್ನು ವ್ಯಕ್ತಿಗಳಿಗೆ ಖಾಸಗಿಯಾಗಿ ಆಚರಿಸಲು ಬಿಡಬೇಕು: ಮೊಯಿತ್ರಾ ಕಾಳಿ ಟೀಕೆ ವಿವಾದಕ್ಕೆ ತರೂರ್ ಪ್ರತಿಕ್ರಿಯೆ
ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರು ಕಾಳಿ ದೇವಿ ಬಗ್ಗೆ ನೀಡಿರುವ ಹೇಳಿಕೆಗಾಗಿ ಅವರ ಮೇಲಿನ ದಾಳಿಯಿಂದ ನಾನು ಆಘಾತಕ್ಕೊಳಗಾಗಿದ್ದೇನೆ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಬುಧವಾರ ಹೇಳಿದ್ದಾರೆ.

ಲೋಕಸಭೆಯಲ್ಲೂ ಟೀಂ ಠಾಕ್ರೆ v/s ಟೀಂ ಶಿಂಧೆ, ಹೊಸ ಮುಖ್ಯ ಸಚೇತಕರ ನೇಮಕ
ಮಹಾರಾಷ್ಟ್ರ ಅಸೆಂಬ್ಲಿಯಲ್ಲಿ ಅಲ್ಪಮತಕ್ಕೆ ಇಳಿದಿರುವ ಶಿವಸೇನೆಯ ಉದ್ಧವ್ ಠಾಕ್ರೆ ಬಣ, ಪಕ್ಷದ ಸಂಸದರ ಬಂಡಾಯಕ್ಕೆ ಹೆದರಿ ಲೋಕಸಭೆಯಲ್ಲಿ ಹೊಸ ಮುಖ್ಯ ಸಚೇತಕರನ್ನು ನೇಮಿಸಿದೆ.

