Police, locals

ಭೀಕರ ದೃಶ್ಯ: ನಿಂತಿದ್ದ ಟ್ರ್ಯಾಕ್ಟರ್ ಗೆ ಬೈಕ್ ಡಿಕ್ಕಿ; ಬೈಕ್ ಸವಾರ ದುರ್ಮರಣ, ಸಿಸಿಟಿವಿಯಲ್ಲಿ ಸೆರೆ!
ಬೈಕ್ ಸವಾರನೊಬ್ಬ ನಿಂತಿದ್ದ ಟ್ರ್ಯಾಕ್ಟರ್ ಗೆ ಡಿಕ್ಕಿ ಹೊಡೆದಿದ್ದು ಅಪಘಾತದಲ್ಲಿ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಸ್ಟಾರ್ ಹೋಟೆಲ್‍ನಲ್ಲಿ ಸೆಕ್ಸ್ ವರ್ಕರ್‌ಗೆ ಒತ್ತಾಯ: ಇಲ್ಲ ಅಂದಿದ್ದಕ್ಕೆ 2 ಮಹಿಳಾ ಸಿಬ್ಬಂದಿ ಮೇಲೆ ಗ್ಯಾಂಗ್ ರೇಪ್!
ಉದ್ಯಮಿಯೊರ್ವರನ್ನು ಕೊಲ್ಲಲು ಸುಪಾರಿ ಪಡೆದು ಸ್ಟಾರ್ ಹೋಟೆಲ್ ನಲ್ಲಿ ತಂಗಿದ್ದ ಪುಡಿ ರೌಡಿಗಳು ಸೆಕ್ಸ್ ವರ್ಕರ್ ಇಲ್ಲ ಅಂದಿದ್ದಕ್ಕೆ ಹೋಟೆಲ್ ಮಹಿಳಾ ಸಿಬ್ಬಂದಿಯನ್ನೇ ಗ್ಯಾಂಗ್ ರೇಪ್ ಮಾಡಿದ್ದಾರೆ.

ಡ್ರಾಪ್ ಕೊಡುವ ನೆಪದಲ್ಲಿ ಕಾಲೇಜು ಯುವತಿಯನ್ನು ಕರೆದೊಯ್ದು ಅತ್ಯಾಚಾರ: ಆಟೋ ಚಾಲಕನ ಬಂಧನ
ಡ್ರಾಪ್ ಕೊಡಿಸುವುದಾಗಿ ಹೇಳಿ ಕಾಲೇಜು ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿದ ಆಟೋ ಚಾಲಕನನ್ನು ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಹೇಳುವ ಪ್ರಕಾರ ಈ ಘಟನೆ ಕಳೆದ ಡಿಸೆಂಬರ್ 10ರಂದು ನಡೆದಿದೆ.

ವರ್ತೂರು ಪ್ರಕಾಶ್ ಅಪಹರಣ ಪ್ರಕರಣದಲ್ಲಿ ರವಿ ಪೂಜಾರಿ ಪಾತ್ರ: ತನಿಖೆಗೆ ಮುಂದಾಗ ಪೊಲೀಸರು
ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಣ ಪ್ರಕರಣದಲ್ಲಿ ರವಿ ಪೂಜಾರಿ ಪಾತ್ರ ಇರುವ ಶಂಕೆಗಳು ವ್ಯಕ್ತವಾಗಿದ್ದು, ಈ ಆಯಾಮದಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಬೆಂಗಳೂರು: ಹೆಚ್ಚುತ್ತಿರುವ ಭೂಗತ ಲೋಕದ ಅಪರಾಧ ಪ್ರಕರಣಗಳಿಂದ ಪೊಲೀಸರಿಗೆ ಆತಂಕ
ರಾಜ್ಯದಲ್ಲಿ ಭೂಗತ ಲೋಕದ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಕರ್ನಾಟಕ ಪೊಲೀಸರಲ್ಲಿ ಆತಂಕ ಮನೆ ಮಾಡಿದೆ. ಮಾಜಿ ಸಚಿವ ವರ್ತೂರು ಪ್ರಕಾಶ್ ಕಿಡ್ನಾಪ್ ಪ್ರಕರಣದಲ್ಲಿ ಜೈಲಿನಲ್ಲಿರುವ ಮಾಜಿ ಡಾನ್ ರವಿ ಪೂಜಾರಿ ಸಹಚರರ ಕೈವಾಡವಿರುವುದು ಆತಂಕಕ್ಕೆ ಕಾರಣವಾಗಿದೆ.

ಅಂತಾರಾಜ್ಯ ವಾಹನ ಕಳ್ಳರ ಜಾಲ ಭೇದಿಸಿದ ಪೊಲೀಸರು, 3 ಬಂಧನ
ರಾಜ್ಯ ಮತ್ತು ರಾಜ್ಯದ ಹೊರಗೆ ವಾಹನಗಳನ್ನು ಕದ್ದು ಮಾರಾಟ ಮಾಡುತ್ತಿದ್ದ ಜಾಲವನ್ನು ಭೇದಿಸಿರುವ ಕುಶಾಲನಗರ ಪೊಲೀಸರು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

'ಕಾನೂನು ಉಲ್ಲಂಘಿಸುವವರಿಗೆ ಪೊಲೀಸರ ರಕ್ಷಣೆ': ಮಮತಾ ಬ್ಯಾನರ್ಜಿ ಸರ್ಕಾರ ವಿರುದ್ಧ ಹರಿಹಾಯ್ದ ರಾಜ್ಯಪಾಲ
ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಅವರ ಬೆಂಗಾವಲು ವಾಹನದ ಮೇಲೆ ನಡೆದ ದಾಳಿ ಪ್ರಕರಣದ ಬಗ್ಗೆ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿರುವುದಾಗಿ ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧನ್ಕರ್ ತಿಳಿಸಿದ್ದಾರೆ.

ಬಿಲ್ಡರ್ ಆತ್ಮಹತ್ಯೆಗೆ ಶರಣು; ಕಿರುಕುಳ ಆರೋಪ
ಮನೆಯಲ್ಲೇ ಬಿಲ್ಡರ್ ಒಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಬಿಟಿಎಂ ಲೇಔಟ್ ನಲ್ಲಿ ನಡೆದಿದೆ. ವಿವೇಕ್ (50) ಆತ್ಮಹತ್ಯೆಗೆ ಶರಣಾದ ಬಿಲ್ಡರ್.

ಮದುವೆ ಮನೆಯಲ್ಲಿ ಹಾಡಿನ ಬಗ್ಗೆ ವಾದ-ವಿವಾದ: ಜಗಳ ಬಿಡಿಸಲು ಹೋದ ವರನ ತಂದೆ ಸಾವು!
ಮದುವೆ ಮನೆಯಲ್ಲಿ ವಧು ಮತ್ತು ವರನ ಕುಟುಂಬದ ಗುಂಪಿನ ನಡುವೆ ನಡೆದ ಜಗಳದಲ್ಲಿ ಮದುಮಗನ ತಂದೆ ಮೃತಪಟ್ಟಿರುವ ಘಟನೆ ನಡೆದಿದೆ ಎಂದು ಪೊಲೀಸ್ ಮೂಲಗಳು ಗುರುವಾರ ತಿಳಿಸಿವೆ.

