Rahul Gandhi, Priyanka

ನೀವು ಲೆಕ್ಕ ಮಾಡಿಲ್ಲ ಅಂದ್ರೆ ಯಾರೂ ಸತ್ತಿಲ್ಲವೇ?: ವಲಸಿಗರ ಸಾವು ಕುರಿತು ಪ್ರಧಾನಿ ಮೋದಿ ವಿರುದ್ಧ ರಾಹುಲ್ ಕಿಡಿ
ಲಾಕ್ಡೌನ್ ಅವಧಿಯಲ್ಲಿ ಎಷ್ಟು ಮಂದಿ ವಲಸೆ ಕಾರ್ಮಿಕರು ಸಾವಿಗೀಡಾದರು ಅಥವಾ ಎಷ್ಟು ಮಂದಿ ಕೆಲಸ ಕಳೆದು ಕೊಂಡರು ಎಂಬುದು ಮೋದಿ ಸರ್ಕಾರಕ್ಕೆ ತಿಳಿದಿಲ್ಲ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

'ಪ್ರಧಾನಿ ಮೋದಿ ನವಿಲುಗಳ ಜೊತೆ ಬ್ಯುಸಿಯಾಗಿದ್ದಾರೆ, ನಿಮ್ಮ ಜೀವನವನ್ನು ನೀವೇ ಕಾಪಾಡಿಕೊಳ್ಳಿ':ರಾಹುಲ್ ಗಾಂಧಿ
ಕೋವಿಡ್-19 ನಿರ್ವಹಣೆ, ಆರ್ಥಿಕ ಪರಿಸ್ಥಿತಿ ಬಗ್ಗೆ ಕೇಂದ್ರ ಸರ್ಕಾರವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಿರಂತರವಾಗಿ ಟೀಕಿಸುತ್ತಾ ಬಂದಿದ್ದಾರೆ.

ಚೀನಾ ಆತಿಕ್ರಮಣ ಮಾಡಿದ ಭೂಮಿ ಹಿಂಪಡೆಯುವಿರಾ? ಅಥವಾ 'ದೇವರ ಆಟ'ಎಂದು ಸುಮ್ಮನಾಗುವಿರಾ: ಕೇಂದ್ರಕ್ಕೆ ರಾಹುಲ್ ಗಾಂಧಿ ಪ್ರಶ್ನೆ
'ಚೀನಾ ಅತಿಕ್ರಮಣ ಮಾಡಿರುವ ಭೂಮಿಯನ್ನು' ಹಿಂಪಡೆಯಲು ಯಾವುದೇ ಯೋಜನೆ ರೂಪಿಸುತ್ತಿದ್ದೀರಾ ಅಥವಾ ಅದನ್ನೂ 'ದೇವರ ಆಟ' ಎಂದು ಸುಮ್ಮನಿರುವಿರಾ? ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಲಾಕ್ಡೌನ್ ಕೊರೋನಾ ವಿರುದ್ಧವಲ್ಲ, ಅಸಂಘಟಿತ ವಲಯದ ಮೇಲಿನ ದಾಳಿ: ರಾಹುಲ್ ಗಾಂಧಿ ಟೀಕೆ
ಯಾವುದೇ ಸೂಚನೆಯಿಲ್ಲದೆ ಸರ್ಕಾರ ಲಾಕ್ ಡೌನ್ ಘೋಷಿಸಿತ್ತು ಎಂದು ಆರೋಪಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಲಾಕ್ ಡೌನ್ ಕೊರೋನಾ ವಿರುದ್ಧದ ದಾಳಿಯಲ್ಲ, ಆದರೆ, ಅಸಂಘಟಿತ ವಲಯದ ಮೇಲಿನ ದಾಳಿಯಾಗಿದೆ ಎಂದು ಟೀಕಿಸಿದ್ದಾರೆ.

ಪ್ರಧಾನಿ ಮೋದಿ ಸರ್ಕಾರಿ ಕಂಪನಿಗಳ ಮಾರಾಟದ ಅಭಿಯಾನ ನಡೆಸುತ್ತಿದ್ದಾರೆ; ರಾಹುಲ್ ಗಾಂಧಿ
ಜೀವ ವಿಮಾ ಕಾರ್ಪೊರೇಷನ್ (ಎಲ್ಐಸಿ) ಶೇ.25ರಷ್ಟು ಷೇರನ್ನು ಮಾರಾಟ ಮಾಡುವ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಖಾಸಗೀಕರಣ ನಿಲ್ಲಿಸಿ, ಸರ್ಕಾರಿ ಉದ್ಯೋಗ ರಕ್ಷಿಸಿ: ಕೇಂದ್ರಕ್ಕೆ ರಾಹುಲ್ ಗಾಂಧಿ
ಕೇಂದ್ರ ಸರ್ಕಾರ ಸಾರ್ವಜನಿಕ ವಲಯದ ಘಟಕಗಳನ್ನು(ಪಿಎಸ್ಯು) ಖಾಸಗೀಕರಣಗೊಳಿಸುತ್ತಿದೆ ಮತ್ತು ಸರ್ಕಾರಿ ಉದ್ಯೋಗಗಳನ್ನು ನಾಶಪಡಿಸುತ್ತಿದೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸೋಮವಾರ ಆರೋಪಿಸಿದ್ದಾರೆ.

ಜಿಡಿಪಿಯ ಮಹಾ ಕುಸಿತಕ್ಕೆ ಗಬ್ಬರ್ ಸಿಂಗ್ ಟ್ಯಾಕ್ಸ್ ಕಾರಣ: ರಾಹುಲ್ ವಾಗ್ದಾಳಿ
ದೇಶದ ಜಿಡಿಪಿಯ ಐತಿಹಾಸಿಕ, ಮಹಾ ಕುಸಿತಕ್ಕೆ ನರೇಂದ್ರ ಮೋದಿ ಸರ್ಕಾರದ 'ಗಬ್ಬರ್ ಸಿಂಗ್ ಟ್ಯಾಕ್ಸ್' (ಸರಕು ಮತ್ತು ಸೇವಾ ತೆರಿಗೆ ಜಿಎಸ್ಟಿ) ಕಾರಣ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಗಂಭೀರ ಮತ್ತು ನೇರ ಆರೋಪ ಮಾಡಿದ್ದಾರೆ.

ಯುವಜನತೆ ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರ ಒದಗಿಸಿ: ಕೇಂದ್ರಕ್ಕೆ ರಾಹುಲ್ ಗಾಂಧಿ ಚಾಟಿ
ದೇಶದಲ್ಲಿ ನಿರುದ್ಯೋಗ ಮತ್ತು ಬಡತನ ಹೆಚ್ಚಾಗಿದೆ, ಯುವಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರಗಳನ್ನು ಒದಗಿಸಬೇಕು ಎಂದು ಕಾಂಗ್ರೆಸ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

2016ರ ನೋಟು ನಿಷೇಧದ ಪರಿಣಾಮವನ್ನು 2020ರಲ್ಲಿ ದೇಶದ ಜಿಡಿಪಿ ಕುಸಿತ ಮೂಲಕ ನೋಡಬಹುದು:ರಾಹುಲ್ ಗಾಂಧಿ
2016ರಲ್ಲಿ ನೋಟು ಅನಾಣ್ಯೀಕರಣಗೊಳಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನಿರ್ಧಾರದ ಬಗ್ಗೆ ಹೊಸ ವಿಡಿಯೊ ಮೂಲಕ ಮತ್ತೆ ಟೀಕಿಸಿರುವ ರಾಹುಲ್ ಗಾಂಧಿ, ಇದರಿಂದ ದೇಶದ ಜಿಡಿಪಿ ಹೇಗೆ ದುಸ್ಥಿತಿಗೆ ಹೋಯಿತು ಎಂಬುದನ್ನು ತಿಳಿಸಿದ್ದಾರೆ.

